ಪಾಕಿಸ್ತಾನದಲ್ಲಿ ಪಿ.ಎಂ.ಎಲ್.ಎನ್ ಮತ್ತು ಪಿ.ಪಿ.ಪಿ. ಪಕ್ಷಗಳಲ್ಲಿ ಮೈತ್ರಿ
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ ಕಳೆದ 12 ದಿನಗಳಿಂದ ಅಸ್ಥಿರತೆ ಇತ್ತು. ಕೊನೆಗೂ ಅಧಿಕಾರವನ್ನು ಸ್ಥಾಪಿಸಲು ‘ಪಾಕಿಸ್ತಾನ್ ಮುಸ್ಲಿಂ ಲೀಗ-ನವಾಜ್ (ಪಿಎಂಎಲ್-ಎನ್) ಮತ್ತು ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)’ ನಡುವೆ ಮೈತ್ರಿಗೆ ಒಮ್ಮತ ಮೂಡಿದೆ. ಇದರಲ್ಲಿ ಪಿಎಂಎಲ್-ಎನ್ ನ ಶಹಬಾಜ್ ಷರೀಫ್ ಪ್ರಧಾನಿಯಾಗಲಿದ್ದು, ಪಿಪಿಪಿಯ ಆಸಿಫ್ ಅಲಿ ಜರ್ದಾರಿ ರಾಷ್ಟ್ರಪತಿಯಾಗಲಿದ್ದಾರೆ.
Alliance between PML-N and PPP in #Pakistan
Shehbaz Sharif will be the Prime Minister, Asif Ali Zardari to become the President !#NawazSharif #ShehBazSharif #PakistanElections pic.twitter.com/Ox2bl8VU07
— Sanatan Prabhat (@SanatanPrabhat) February 21, 2024
ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ರಾಷ್ಟ್ರೀಯ ಚುನಾವಣೆಗಳು ನಡೆದಿತ್ತು. ಈ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿತ್ತು; ವಿಶೇಷವೆಂದರೆ ಈ ಚುನಾವಣೆಯಲ್ಲಿ ಜೈಲಿನಲ್ಲಿರುವ ಪಿಟಿಐ ನಾಯಕ ಇಮ್ರಾನ ಖಾನ್ ಅವರ ಬೆಂಬಲದೊಂದಿಗೆ ಪ್ರಕ್ಷೇತರ ಅಭ್ಯರ್ಥಿಗಳ ಗುಂಪು ಅತ್ಯಧಿಕ ದೊಡ್ಡ ಗುಂಪಾಗಿ ಹೊರಹೊಮ್ಮಿತ್ತು. ಒಟ್ಟಾರೆ 93 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು, ಪಿ.ಎಮ್.ಎಲ್.ಎನ್. ಪಕ್ಷದ 75 ಮತ್ತು ಪಿಪಿಪಿ 54 ಸ್ಥಾನಗಳಲ್ಲಿ ಜಯ ಗಳಿಸಿದ್ದರು.