ಶ್ರೀಲಂಕಾದ ರಾಷ್ಟ್ರಪತಿ ವಿಕ್ರಮಸಿಂಘೆ ಅವರ ಹಸ್ತದಿಂದ ಅಲ್ಲಿ ತಮಿಳು ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯ ಶುಭಾರಂಭ !

ಭಾರತಕ್ಕೆ ಕೃತಜ್ಞತೆ ಸಲ್ಲಿಸಿತು

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದ ರಾಷ್ಟ್ರಪತಿ ರಾನಿಲ್ ವಿಕ್ರಮಸಿಂಘೆ ಅವರು ಫೆಬ್ರವರಿ 19 ರಂದು ‘ಭಾರತ-ಲಂಕಾ’ ಈ ಭಾರತೀಯ ವಸತಿ ಯೋಜನೆಯ ನಾಲ್ಕನೇ ಹಂತವನ್ನು ಉದ್ಘಾಟಿಸಿದರು. ಶ್ರೀಲಂಕಾದಲ್ಲಿರುವ ತಮಿಳು ಕಾರ್ಮಿಕರಿಗೆ ಭಾರತವು ನೀಡಿರುವ ಅನುದಾನದ ಸಹಾಯದಿಂದ 10 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಆಯುಕ್ತ ಸಂತೋಷ ಝಾ ಇವರೂ ಸಹ ಉಪಸ್ಥಿತರಿದ್ದರು. ಈ ಯೋಜನೆಯಡಿ 10 ಜಿಲ್ಲೆಗಳಲ್ಲಿ 1 ಸಾವಿರ 300 ಮನೆಗಳನ್ನು ನಿರ್ಮಿಸಲಾಗುವುದು.

ಆ ಸಮಯದಲ್ಲಿ ರಾಷ್ಟ್ರಪತಿ ವಿಕ್ರಮಸಿಂಘೆ ಮಾತನಾಡಿ, “ನಮ್ಮ ಸರಕಾರವು ದೇಶದಲ್ಲಿ ಅಲ್ಪಸಂಖ್ಯಾತ ತಮಿಳು ಸಮುದಾಯದವರ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ರಕ್ಷಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಭಾರತ ಈ ಯೋಜನೆಗೆ ಉದಾರ ನೆರವು ನೀಡುತ್ತಿದೆ. ನಾನು ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞನಾಗಿದ್ದೇನೆ. ವಸತಿ ಯೋಜನೆಯ ಪ್ರಾಥಮಿಕ ಉದ್ದೇಶ ಕಾರ್ಮಿಕರಿಗೆ ಮನೆಗಳನ್ನು ಒದಗಿಸುವುದು ಮತ್ತು ಆ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಆಗಿದೆಯೆಂದು ಹೇಳಿದರು.

ಶ್ರೀಲಂಕಾದಲ್ಲಿ ತಮಿಳು ಜನರು ರಾಜಕೀಯ ಅಧಿಕಾರಗಳಿಂದ ವಂಚಿತರಾಗಿದ್ದಾರೆ ! 

ಶ್ರೀಲಂಕಾದಲ್ಲಿ ಭೂಮಿ ಮತ್ತು ವಸತಿ ಇಲ್ಲದ ಕಾರಣದಿಂದ, ಭಾರತೀಯ ಮೂಲದ ಹಿಂದೂ ತಮಿಳು ಸಮುದಾಯವರಿಗೆ ಅನಾನುಕೂಲವಾಗಿದೆ. ಶ್ರೀಲಂಕಾದ ತಮಿಳು ಜನರನ್ನು ರಾಜಕೀಯ ಅಧಿಕಾರಗಳಿಂದ ವಂಚಿತಗೊಳಿಸಲಾಗಿದೆ. ಮೇ 2017ರಲ್ಲಿ ಪ್ರಧಾನಮಂತ್ರಿ ಮೋದಿಯವರು ಶ್ರೀಲಂಕಾಕ್ಕೆ ಪ್ರವಾಸ ಮಾಡಿದ್ದರು. ಆಗ ತಮಿಳಿಗರಿಗೆ 10 ಸಾವಿರ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದರು.