ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನಿಸಿದ ದೈವೀ ಬಾಲಕರ, ಕುಮಾರ ಮತ್ತು ಕಿಶೋರ ವಯಸ್ಸಿನ ಸಾಧಕರಲ್ಲಾಗುವ ಬದಲಾವಣೆ ಹಾಗೂ ಅವರ ಗುಣವೈಶಿಷ್ಟ್ಯಗಳನ್ನು ಪ್ರತಿವರ್ಷ ಲಿಖಿತ ಸ್ವರೂಪದಲ್ಲಿ ‘ಜಿಲ್ಲಾ ಸಮನ್ವಯಕರ ಬಳಿ ಕಳುಹಿಸಿ !

‘ಹಿಂದೂ ರಾಷ್ಟ್ರ’ವನ್ನು ಮುನ್ನಡೆಸಲು ಈಶ್ವರನು ‘ದೈವೀ ಬಾಲಕ’ರ ಆಯೋಜನೆಯನ್ನು ಮಾಡಿದ್ದಾನೆ. ಈ ದೈವೀ ಜೀವಗಳು ಉಚ್ಚ ಸ್ವರ್ಗಲೋಕದಿಂದ ಮಹರ್ಲೋಕಗಳಂತಹ ಉಚ್ಚಲೋಕಗಳಿಂದ ಪೃಥ್ವಿಯಲ್ಲಿ ಜನಿಸಿವೆ ಮತ್ತು ಕೆಲವು ಜೀವಗಳು ಜನಲೋಕದಿಂದ ಈ ಭೂತಲದ ಮೇಲೆ ಜನಿಸಿವೆ. ಸನಾತನವು ಇದುವರೆಗೆ ೧೨೦೦ ಕ್ಕಿಂತಲೂ ಹೆಚ್ಚು ದೈವೀ ಜೀವಗಳನ್ನು ಗುರುತಿಸಿದೆ. ಈ ಬಾಲಸಾಧಕರ ಆಧ್ಯಾತ್ಮಿಕ ಮಟ್ಟವು ಶೇ. ೫೦ ಕ್ಕಿಂತಲೂ ಹೆಚ್ಚಿರುತ್ತದೆ. (ದೈವೀ ಬಾಲಕರ ವಯಸ್ಸಿಗನುಸಾರ ಅವರ ‘ಬಾಲಕರ ಗುಂಪು – ಜನಿಸಿದಾಗಿನಿಂದ ೫ ವರ್ಷಗಳು’, ‘ಕುಮಾರ ವಯಸ್ಸಿನ ಗುಂಪು – ೬ ರಿಂದ ೧೨ ವರ್ಷಗಳು ಮತ್ತು ‘ಕಿಶೋರ ವಯಸ್ಸಿನ ಗುಂಪು – ೧೩ ರಿಂದ ೧೮ ವರ್ಷಗಳು’, ಹೀಗೆ ಗುಂಪು ಮಾಡಲಾಗಿದೆ.)

‘ಇಂತಹ ದೈವೀ ಜೀವಗಳ ಬಗ್ಗೆ ಮುಂದಿನ ಆಧ್ಯಾತ್ಮಿಕ ಪ್ರವಾಸದ ಬಗ್ಗೆ ಸಂಶೋಧನೆ ಮಾಡಲು ಅವರಲ್ಲಾಗುವ ಆಧ್ಯಾತ್ಮಿಕ ಮತ್ತು ಮಾನಸಿಕ ಬದಲಾವಣೆಗಳ ನೋಂದಣಿ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ದೈವೀ ಬಾಲಕರ ಪಾಲಕರು ಪ್ರತಿವರ್ಷ ತಮ್ಮ ಮಗನ ಹುಟ್ಟುಹಬ್ಬಕ್ಕೆ ಒಂದು ತಿಂಗಳ ಮೊದಲು ‘ತಮ್ಮ ಮಗನಲ್ಲಿ ವರ್ಷವಿಡಿ ಯಾವ ಬದಲಾವಣೆಗಳಾಗಿವೆ ?’, ಹಾಗೆಯೇ ‘ಅವನಲ್ಲಿ ಬೇರೆ ಏನಾದರೂ ಗುಣವೈಶಿಷ್ಟ್ಯಗಳು ಅರಿವಾಗುತ್ತಿವೆಯೇ ?’, ಎಂಬುದರ ಬಗ್ಗೆ ಜಿಲ್ಲೆಯಲ್ಲಿನ ‘ಜಿಲ್ಲಾ ಸಮನ್ವಯಕರಿಗೆ’ ಬರೆದು ಕಳುಹಿಸಬೇಕು. ಈ ಲೇಖನಗಳನ್ನು ಪಾಲಕರು ರಾಮನಾಥಿ, ಗೋವಾದಲ್ಲಿನ ಸಂಕಲನ ವಿಭಾಗಕ್ಕೆ ನೇರವಾಗಿ ಕಳುಹಿಸಬಾರದು.

೧. ಪಾಲಕರು ದೈವೀ ಬಾಲಕರಲ್ಲಿನ ಬದಲಾವಣೆ ಮತ್ತು ಗುಣವೈಶಿಷ್ಟ್ಯಗಳನ್ನು ಮುಂದಿನ ಅಂಶಗಳ ಆಧಾರದಲ್ಲಿ ಬರೆದು ಕಳುಹಿಸಬೇಕು.

ಅ. ವರ್ಷವಿಡಿ ಬಾಲಕನಲ್ಲಿ ಹೆಚ್ಚಾದ ಅಥವಾ ಕಡಿಮೆಯಾದ ಗುಣಗಳು ಮತ್ತು ಸ್ವಭಾವದೋಷಗಳ ಪ್ರಸಂಗಗಳು
ಆ. ಮಕ್ಕಳಿಗಾಗುತ್ತಿದ್ದ ಆಧ್ಯಾತ್ಮಿಕ ತೊಂದರೆಗಳಲ್ಲಾದ ಬದಲಾವಣೆ (ಈ ಮೊದಲು ತೊಂದರೆ ಇತ್ತು. ಈಗ ಅದು ಕಡಿಮೆ ಆಗಿದೆ ಅಥವಾ ಹೆಚ್ಚಾಗಿದೆ. ತೊಂದರೆ ಕಡಿಮೆಯಾಗಿದ್ದರೆ ಅಧ್ಯಾತ್ಮಿಕ ಸ್ತರದಲ್ಲಿ ಯಾವ ಉಪಾಯಗಳನ್ನು ಮಾಡಲಾಯಿತು ?)
ಇ. ಮಕ್ಕಳಲ್ಲಿ ಸಾಧನೆಯ ಸೆಳೆತ ಹೆಚ್ಚಾದುದನ್ನು ಅಥವಾ ಕಡಿಮೆಯಾದುದನ್ನು ತೋರಿಸುವ ಪ್ರಸಂಗಗಳು
ಈ. ಪ್ರತಿದಿನ ಮಕ್ಕಳಿಂದಾಗುವ ಸಾಧನೆಯ ಪ್ರಯತ್ನಗಳು, ಉದಾ. ನಾಮಜಪ, ಪ್ರಾರ್ಥನೆ, ಕೃತಜ್ಞತೆ, ಭಾವವೃದ್ಧಿಗಾಗಿ ಮಾಡಲಾಗುವ ಪ್ರಯತ್ನಗಳು, ತಪ್ಪುಗಳ ನಿರೀಕ್ಷಣೆ ಮತ್ತು ತಖ್ತೆ ಬರೆಯುವುದು, ಕ್ಷಮಾಯಾಚನೆ ಇತ್ಯಾದಿ.
ಉ. ಇತರರ ತಪ್ಪುಗಳ ನಿರೀಕ್ಷಣೆ, ಹಾಗೆಯೇ ಅಯೋಗ್ಯ ಕೃತಿಗಳನ್ನು ತಡೆಯಲು ಮಕ್ಕಳಿಂದಾದ ಪ್ರಯತ್ನಗಳು
ಊ. ಮನೆಗೆಲಸಗಳಲ್ಲಿ ಕುಟುಂಬದವರಿಗೆ ಅಥವಾ ಸೇವೆಯಲ್ಲಿ ಸಹಾಯ ಮಾಡುವ ವೃತ್ತಿ. ಜಿಲ್ಲೆ ಅಥವಾ ಕೇಂದ್ರದಲ್ಲಿ ಸಮಷ್ಟಿ ಸೇವೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ
ಎ. ಮಕ್ಕಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗೆಗಿರುವ ಭಾವ ಅಥವಾ ಶ್ರದ್ಧೆಯನ್ನು ವ್ಯಕ್ತಗೊಳಿಸುವ ಕೆಲವು ಪ್ರಸಂಗಗಳು
ಐ. ಮಕ್ಕಳಿಂದಾಗುವ ಧರ್ಮಾಚರಣೆಯ ಕೃತಿಗಳು, ಹಾಗೆಯೇ ಧರ್ಮಾಭಿಮಾನವನ್ನು ತೋರಿಸುವ ಪ್ರಸಂಗಗಳು
ಓ. ಮಕ್ಕಳಿಗೆ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳು

೨. ಪಾಲಕರು ‘ತಮ್ಮ ಮಕ್ಕಳ ಆಧ್ಯಾತ್ಮಿಕ ಪ್ರಗತಿಗಾಗಿ ತಾವು ಸ್ವತಃ ಯಾವ ಪ್ರಯತ್ನಗಳನ್ನು ಮಾಡಿದ್ದೀರಿ ?’ ‘ಪ್ರಯತ್ನಗಳಲ್ಲಿ ಎಲ್ಲಿ ಕಡಿಮೆ ಬಿದ್ದೆವು’, ಈ ವಿಷಯದ ಬಗ್ಗೆಯೂ ‘ಜಿಲ್ಲಾ ಸಮನ್ವಯಕರ’ ಬಳಿ ಬರೆದು ಕೊಡಬೇಕು.

೩. ದೈವೀ ಬಾಲಕರು ೧೮ ವರ್ಷದವರಾಗುವ ವರೆಗೆ ಈ ರೀತಿಯ ಬರವಣಿಗೆಯನ್ನು ಪ್ರತಿವರ್ಷ ಬರೆದು ಕಳುಹಿಸಬೇಕು.

೪. ಛಾಯಾಚಿತ್ರಗಳನ್ನು ಕಳುಹಿಸುವುದು :

ಪಾಲಕರು ಈ ಅಂಶಗಳೊಂದಿಗೆ ಬಾಲಕನ ಪ್ರಸ್ತುತ (ಕಳೆದ ೨ ತಿಂಗಳೊಳಗಿನ) ಸಾತ್ತ್ವಿಕ ಉಡುಪು ಧರಿಸಿದ ಮತ್ತು ನಗುಮುಖದ ಛಾಯಾಚಿತ್ರಗಳನ್ನು ಕಳಿಸಬೇಕು. ಸಂಕ್ಷಿಪ್ತದಲ್ಲಿ, ಈ ಬರವಣಿಗೆ ಎಂದರೆ ಆ ದೈವೀ ಜೀವಗಳ ಸಾಧನೆಯ ಸೂಚ್ಯಂಕ(ಗ್ರಾಫ್)ವಾಗಿರಲಿದೆ ! ಅದರಿಂದ ‘ಅವನ ಆಧ್ಯಾತ್ಮಿಕ ಪ್ರಗತಿಯಲ್ಲಾಗುವ ಏರಿಳಿತ ಮತ್ತು ಅದಕ್ಕೆ ಕಾರಣವಾದ ಅಂಶಗಳನ್ನು’ ಅಧ್ಯಯನ ಮಾಡಲು ಸಾಧ್ಯವಾಗುವುದು.

ಟಿಪ್ಪಣಿ : ಈ ಬರವಣಿಗೆಯ ಸಂಗ್ರಹವನ್ನು ಕೇವಲ ಸಂಶೋಧನೆಗಾಗಿ (ಅಧ್ಯಯನಕ್ಕಾಗಿ) ಮಾಡುತ್ತಿರುವುದರಿಂದ ಈ ಎಲ್ಲ ಬರವಣಿಗೆಗಳನ್ನು ಪ್ರತಿವರ್ಷ ಆ ಬಾಲಕನ ಹುಟ್ಟುಹಬ್ಬದ ದಿನದಂದು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲಾಗುವುದಿಲ್ಲ. ಅದರಲ್ಲಿನ ಕೆಲವು ಅಂಶಗಳು ವೈಶಿಷ್ಟ್ಯಪೂರ್ಣವಾಗಿದ್ದರೆ ಅವುಗಳನ್ನು ಅವಶ್ಯವಾಗಿ ಪ್ರಕಟಿಸಲಾಗುವುದು !’

– ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೭.೨೦೨೩)

ಬಾಲಸಾಧಕರ ಪಾಲಕರಿಗೆ, ಜಿಲ್ಲಾ ಸಮನ್ವಯಕರು ಮತ್ತು ಜಿಲ್ಲಾಸೇವಕರಿಗೆ ಸೂಚನೆ

ಪಾಲಕರು ದೈವೀ ಬಾಲಕರಲ್ಲಿನ ಬದಲಾವಣೆಗಳನ್ನು ಆಯಾ ಸಮಯದಲ್ಲಿ ಅಧ್ಯಯನ ಮಾಡಲು ಹಾಗೆಯೇ ಜಿಲ್ಲಾ ಸಮನ್ವಯಕರು ಮತ್ತು ಜಿಲ್ಲಾಸೇವಕರು ‘ಮೇಲಿನ ಅಂಶಗಳಿಗನುಸಾರ ಬಾಲಸಾಧಕರ ಬಗ್ಗೆ ಲೇಖನಗಳು ಬರುತ್ತವೆಯಲ್ಲ ?, ಎಂಬುದನ್ನು ನೋಡಲು ಇಲ್ಲಿ ನೀಡಿದ ಎಲ್ಲ ಅಂಶಗಳನ್ನು ತಮ್ಮ ಸಂಗ್ರಹದಲ್ಲಿಡಬೇಕು.