ಭಾರತದ ಬೆಂಬಲಿಗ ಎಂದು ಚರ್ಚೆ!
ಜಕಾರ್ತಾ – ಜಗತ್ತಿನಲ್ಲಿನ ಎಲ್ಲಕ್ಕಿಂತ ದೊಡ್ಡ ಮುಸಲ್ಮಾನ ದೇಶ ಆಗಿರುವ ಇಂಡೋನೇಷ್ಯಾದ ನೂತನ ರಾಷ್ಟ್ರಾಧ್ಯಕ್ಷ ಎಂದು ಪ್ರಬೋವೋ ಸುಬಿಯಂತೋ ಆಯ್ಕೆಯಾಗಿದ್ದಾರೆ. ತಜ್ಞರ ಪ್ರಕಾರ ಅಧಿಕಾರಕ್ಕೆ ಬಂದ ನಂತರ ಇಂಡೋನೇಷಿಯಾದ ಸಂಬಂಧ ಭಾರತದ ಜೊತೆಗೆ ಇನ್ನಷ್ಟು ದೃಢವಾಗಬಹುದು. ಸುಬಿಯಾಂತೋ ಇವರು ಈ ಹಿಂದೆ ದೇಶದ ರಕ್ಷಣಾ ಸಚಿವರಾಗಿದ್ದರು. ಈ ಹಿಂದೆ ಸುಬಿಯಾಂತೋ ಇವರು ಫಿಲಿಪಿನ್ಸ್ ನಂತೆ ಭಾರತದ ಸೂಪರ್ ಸ್ಯಾನಿಕ್ ಕ್ರೋಝು ಕ್ಷಿಪಣಿ ಬ್ರಹ್ಮೋಸ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಸುಬಿಯಾಂತೋ ಇವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಜೊತೆಗೆ ತುಲನೆ ಮಾಡುತ್ತಾರೆ.
(ಸೌಜನ್ಯ – AP Archive)
ಸುಬಿಯಾಂತೋ ಇವರು ಸೈನ್ಯದಿಂದ ನಿವೃತ್ತರಾಗಿದ್ದಾರೆ. ಅವರು ಭಾರತದ ಜೊತೆಗೆ ಸದೃಢವಾದ ಸಂಬಂಧವನ್ನು ಬೆಂಬಲಿಸುತ್ತಾರೆ. ಭಾರತ ಮತ್ತು ಇಂಡೋನೇಷ್ಯಾದ ಸಮುದ್ರ ಗಡಿಗಳು ಪರಸ್ಪರ ಕೂಡಿವೆ. ೨೦೨೦ ರಲ್ಲಿ ಕೋರೋನಾ ಸಂಕಷ್ಟದ ನಂತರ ಕೂಡ ಸುಬಿಯಾಂತೋ ಇವರು ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಹ ಇವರನ್ನು ಭೇಟಿ ಮಾಡಿದ್ದರು. ಅವರಿಗೆ ಭಾರತದ ಜೊತೆಗಿನ ರಕ್ಷಣಾ ಸಂಬಂಧ ದೃಢಪಡಿಸುವುದಿದೆ. ಇದರಲ್ಲಿ ಬ್ರಹ್ಮೋಸ ಕ್ಷಿಪಣಿ ಒಪ್ಪಂದದ ಸಮಾವೇಶ ಕೂಡ ಇದೆ.
ಸುಬಿಯಾಂತೋ ಇವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆಗೆ ಇವರನ್ನು ಏಕೆ ಹೋಲಿಸುತ್ತಾರೆ ?
ಸುಬಿಯಾಂತೋ ಇಂಡೋನೇಷ್ಯಾದಲ್ಲಿನ ಶಾಲೆಯಲ್ಲಿ ಭಾರತದ ಅತ್ಯಂತ ಯಶಸ್ವಿ ಮಧ್ಯಾಹ್ನದ ಬಿಸಿ ಊಟ ಮತ್ತು ಹಾಲು ನೀಡುವ ಯೋಜನೆ ಅಳವಡಿಸಬಹುದು. ಸುಬಿಯಾಂತೋ ಅವರು ಅವರ ಚುನಾವಣೆ ಪ್ರಚಾರದ ಸಮಯದಲ್ಲಿ ಅನೇಕ ಬಾರಿ ಉಲ್ಲೇಖಿಸಿದ್ದಾರೆ. ಸುಬಿಯಾಂತೋ ಇವರ ಸಹೋದರ ಹಾಶಿಮ್ ಇವರು ದೇಶದಲ್ಲಿನ ದೊಡ್ಡ ಉದ್ಯಮಿಯಾಗಿದ್ದಾರೆ ಮತ್ತು ಅವರು ಭಾರತದ ಜೊತೆಗೆ ಅನೇಕ ವ್ಯಾಪಾರ ಸಂಬಂಧ ಹೊಂದಿದ್ದಾರೆ. ಸುಬಿಯಾಂತೋ ಏಷ್ಯಾದಲ್ಲಿ ಭಾರತದಲ್ಲಿ ಸಮಾವೇಶ ಇರುವ ಯುತಿಯ ಪರವಾಗಿ ಇರುವರು; ಆದರೆ ಅಮೇರಿಕಾ ಸಹಿತ ಅನೇಕ ಪಶ್ಚಿಮತ್ಯ ದೇಶಗಳು ಅವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಬಗ್ಗೆ ಆರೋಪಿಸುತ್ತಾರೆ. ಅಮೇರಿಕಾವು ಅವರಿಗೆ ವಿಸಾ ನಿರಾಕರಿಸಿತ್ತು. ಪ್ರಧಾನಮಂತ್ರಿ ಆಗುವ ಮೊದಲು ಅಮೆರಿಕದಿಂದ ಮೋದಿಯವರಿಗು ಕೂಡ ವಿಸಾ ನಿಷೇಧಿಸಿತ್ತು, ಈ ವಿಷಯ ಕೂಡ ಅದೇ ರೀತಿ ಇದೆ.