|
ಮುಂಬಯಿ – ನವಿ ಮುಂಬಯಿನ ನವಾ ಶೇವಾ ಬಂದರಿನಲ್ಲಿ ಕಸ್ಟಮ್ಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಬೆಲೆ 11 ಕೋಟಿ ರೂಪಾಯಿ ಇದೆ. ಸ್ವಚ್ಛತೆಗೆ ಬಳಸುವ ಬ್ರಷ್, ಮಾಪ್ ಹೆಸರಿನಲ್ಲಿ ಪಟಾಕಿಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಈ ಪಟಾಕಿಗಳಲ್ಲಿ ಬಳಸಲಾಗುವ ಹೆಚ್ಚಿನ ಮಟ್ಟದ ಸತು ಮತ್ತು ಲಿಥಿಯಂ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೂ ಅವುಗಳನ್ನು ಬಳಸಲಾಗುತ್ತದೆ.
ಸಂಪಾದಕೀಯ ನಿಲುವುಶತ್ರು ರಾಷ್ಟ್ರ ಚೀನಾದಿಂದ ಭಾರತಕ್ಕೆ ಪಟಾಕಿ ಕಳ್ಳಸಾಗಣೆ ಖೇದಕರ ! ಹೀಗೆ ಮಾಡುವವರನ್ನು ಜೀವಾವಧಿ ಶಿಕ್ಷೆಯಾಗಬೇಕು ! |