ಮಂಗ ಪೇಟೆ (ತೆಲಂಗಾಣ) – ಮೇಡಾರಂನಲ್ಲಿ ನಡೆಯಲಿರುವ ಸಮ್ಮಕ್ಕ-ಸಾರಾಲಕ್ಕ ದೇವಿ ಜಾತ್ರೆಯಲ್ಲಿ ಹಲಾಲ್ ಪದ್ದತಿಯಂತೆ ಪ್ರಾಣಿ ಬಲಿ ನೀಡಲು ಅಲ್ಲಿನ ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾದುದಾದರೆ ಅದು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನ ಅರ್ಚಕ ಸಿದ್ದಬೋಯಿನಾ ಅರುಣ ಕುಮಾರ ಹೇಳಿದರು. ಈ ಸಂಬಂಧ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ.
1. ಈ ವಿಡಿಯೋದಲ್ಲಿ ಸಿದ್ದಬೋಯಿನಾ ಅರುಣ ಕುಮಾರ ಇವರು, ಬಲಿ ಕೊಡಲು ಬರುವವರು ಬುಡಕಟ್ಟು ಜನಾಂಗದ ಆಚಾರ-ವಿಚಾರಗಳನ್ನು ಗೌರವಿಸಿ ಅದನ್ನು ಪಾಲಿಸಬೇಕು. ‘ಬಲಿ ಕೊಡಲು ಬರುವ ಭಕ್ತರು ಈ ಪದ್ಧತಿಗಳಿಗೆ ಅಗೌರವ ತೋರಬಾರದು’ ಎಂದೂ ಅವರು ಮನವಿ ಮಾಡಿದ್ದಾರೆ.
2. ಕಳೆದ ಹಲವು ದಶಕಗಳಿಂದ ಮೇಡಾರಂ ಜಾತ್ರೆಯನ್ನು ಆಯೋಜಿಸಲಾಗುತ್ತಿದೆ. ಈ ಯಾತ್ರೆಗೆ 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇಲ್ಲಿ ಸಮ್ಮಕ್ಕ ಮತ್ತು ಸರಳಕ್ಕ ವನದೇವತೆಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಭಕ್ತರು ಇಲ್ಲಿ ಆಡು, ಕೋಳಿಗಳನ್ನು ಬಲಿ ಕೊಡುತ್ತಾರೆ. ಈ ವರ್ಷ ಈ ಜಾತ್ರೆಯನ್ನು ಫೆಬ್ರವರಿ 21 ರಿಂದ 24 ರವರೆಗೆ ಆಯೋಜಿಸಲಾಗಿದೆ.
‘ಹಲಾಲ್’ ವಿಧಾನದಲ್ಲಿ ಪ್ರಾಣಿ ಬಲಿಯನ್ನು ಹೇಗೆ ನೀಡಲಾಗುತ್ತದೆ ?
ಹಲಾಲ್ ಪದ್ದತಿಯಿಂದ ಮಾಂಸವನ್ನು ಪಡೆಯಲು, ಪ್ರಾಣಿಗಳ ಕಂಠನಾಳವನ್ನು ಕತ್ತರಿಸಿ ಅದನ್ನು ಬಿಟ್ಟುಬಿಡಲಾಗುತ್ತದೆ. ಇದರಿಂದ ವಿಪರೀತವಾಗಿ ರಕ್ತಸ್ರಾವವಾಗುತ್ತದೆ ನಂತರ ಪ್ರಾಣಿಗಳು ಒದ್ದಾಡುತ್ತಾ ಸಾಯುತ್ತದೆ. ಈ ಪ್ರಾಣಿಯನ್ನು ಬಲಿ ನೀಡಿದಾಗ, ಅದರ ಮುಖವು ಮೆಕ್ಕಾ ಕಡೆಗೆ ತಿರುಗಿಸಲಾಗುತ್ತದೆ.
Do not offer animal sacrifice carried out in Halal method in #MedaramJatara (Telangana) ! – Chief Priest
Animal sacrifice carried out in Halal method being offered in Hindu mandir’s Dharmik Jatara showcases the lack of Dharmashikshan among Hindus.
It is necessary for Hindu… pic.twitter.com/CFSJ2MwQYQ
— Sanatan Prabhat (@SanatanPrabhat) February 19, 2024
ಸಂಪಾದಕೀಯ ನಿಲುವುಹಿಂದೂ ದೇವಾಲಯಗಳ ಧಾರ್ಮಿಕ ಜಾತ್ರೆಗಳಲ್ಲಿ ಹಲಾಲ್ ವಿಧಾನದಲ್ಲಿ ಪ್ರಾಣಿ ಬಲಿ ಕೊಡುವುದು ಇದು ಹಿಂದೂಗಳಲ್ಲಿ ಧರ್ಮಶಿಕ್ಷಣದ ಕೊರತೆಯ ಸೂಚನೆಯಾಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಹಿಂದೂ ಸಂಘಟನೆಗಳು ಪ್ರಯತ್ನಿಸಬೇಕು ! |