ನಸೀಮಾ ಖಾತೂನ ಇಸ್ಲಾಂ ತ್ಯಜಿಸಿ ಮೀನಾಕ್ಷಿ ಶರ್ಮ ಆದಳು !

ಹಿಂದೂ ಧರ್ಮ ಸ್ವೀಕರಿಸಿ ಹಿಂದೂ ಪ್ರಿಯಕರನ ಜೊತೆಗೆ ವಿವಾಹ

ಪಾಟಲಿಪುತ್ರ – ಬಿಹಾರದ ಪೂರ್ಣಿಯಾದ ನಿವಾಸಿ ನಸೀಮಾ ಖಾತೂನ ಇಸ್ಲಾಂ ಧರ್ಮ ತ್ಯಜಿಸಿ ಸನಾತನ ಧರ್ಮ ಸ್ವೀಕರಿಸಿ ಪ್ರಿಯಕರ ಮಹೇಶ ಶರ್ಮಾ ಜೊತೆಗೆ ಹಿಂದೂ ಪದ್ಧತಿಯ ಪ್ರಕಾರ ವಿವಾಹ ಮಾಡಿಕೊಂಡಳು. ನಸೀಮಾ ಖಾತೂನ ಈಗ ಮೀನಾಕ್ಷಿ ಶರ್ಮಾ ಆಗಿದ್ದಾಳೆ. ‘ಮೊಘಲರ ದಾಳಿಯಿಂದ ನಮ್ಮ ಪೂರ್ವಜರು ಮುಸಲ್ಮಾನರಾಗಿದ್ದರು. ನನಗೆ ಸನಾತನ ಧರ್ಮದ ಬಗ್ಗೆ ಶ್ರದ್ಧೆ ಇದೆ. ನಾನು ಹಿಂದೂ ದೇವತೆಗಳನ್ನು ಪೂಜಿಸುತ್ತೇನೆ. ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಗೌರವ ನೀಡುವುದಿಲ್ಲ. ಅದರಲ್ಲಿ ತ್ರಿವಳಿ ತಲಾಕದಂತಹ ಕೆಟ್ಟ ಪದ್ಧತಿಗಳು ಪ್ರಚಲಿತವಿದೆ. ನಾನು ಸ್ವ ಇಚ್ಛೆಯಿಂದ ‘ಘರವಾಪಸಿ ಮಾಡಿದ್ದೇನೆ’ ಎಂದು ಹೇಳಿದಳು.

‘ನಿಕಾಹ ಹಲಾಲ’ಗೆ ವಿರೋಧ !

ನಸೀಮಾಳ ವಿವಾಹ ಆಗ್ರಾದಲ್ಲಿರುವ ಮುಸಲ್ಮಾನನ ಜೊತೆಗೆ ನಡೆದಿತ್ತು. ಅವರಿಗೆ ಒಂದುವರೆ ವರ್ಷದ ಮಗಳು ಇದ್ದಾಳೆ. ಆಕೆಯ ಪತಿ ಆಕೆಗೆ ಆರು ತಿಂಗಳ ಹಿಂದೆ ತಲಾಕ್ ನೀಡಿದ್ದನು. ಅದರ ನಂತರ ನಿಕಾಹ ಹಲಾಲಿಗಾಗಿ ಆಕೆಯ ಮೇಲೆ ಒತ್ತಡ ಹೇರುತ್ತಿದ್ದರು. ಆಕೆ ಅದನ್ನು ವಿರೋಧಿಸಿರುವುದರಿಂದ ಆಕೆಯನ್ನು ಕುಟುಂಬದವರು ಮನೆಯಿಂದ ಹೊರಗೆ ಹಾಕಿದರು. ಅದರ ನಂತರ ಆಕೆ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಳು.

‘ನಿಕಾಹ ಹಲಾಲ’ ಇದು ಇಸ್ಲಾಮಿನಲ್ಲಿನ ಕೆಟ್ಟ ಪದ್ಧತಿ ಆಗಿದೆ. ಮೊದಲನೆಯ ಪತಿ ತಲಾಕ್ ನೀಡಿದ ನಂತರ ಮತ್ತೆ ಅವನ ಜೊತೆಗೆ ವಿವಾಹ ಆಗಬೇಕಿದ್ದರೆ ಆ ಮಹಿಳೆ ಬೇರೆಯವರ ವಿವಾಹ ಮಾಡಿಕೊಂಡು ಅವನ ಜೊತೆಗೆ ದೈಹಿಕ ಸಂಬಂಧ ಇಟ್ಟುಕೊಳ್ಳಬೇಕು. ನಂತರ ಅವನು ತಲಾಕ ನೀಡಿದ ನಂತರ ಮೊದಲ ಪತಿಯ ಜೊತೆ ವಿವಾಹ ಮಾಡಿಕೊಳ್ಳುವ ಪದ್ಧತಿಗೆ ನೀಕಾಹ ಹಲಾಲ್ ಎನ್ನುತ್ತಾರೆ.

ಹಿಂದೂ ಧರ್ಮ ಸ್ವೀಕರಿಸಿ ವಿವಾಹ

ನಸೀಮ ಖಾತೂನ್ ಇನ್ಸ್ಟಾಗ್ರಾಂನ ಮೂಲಕ ಉತ್ತರ ಪ್ರದೇಶದಲ್ಲಿನ ಬರೆಲಿಯ ನಿವಾಸಿ ಮಹೇಶ್ ಶರ್ಮಾ ಇವರ ಸಂಪರ್ಕಕ್ಕೆ ಬಂದಳು. ಅದರ ನಂತರ ನಿಧಾನವಾಗಿ ಇಬ್ಬರಲ್ಲಿ ಸ್ನೇಹ ಮತ್ತು ನಂತರ ಪ್ರೀತಿ ನಿರ್ಮಾಣವಾಯಿತು. ಅದರ ನಂತರ ಇಬ್ಬರು ವಿವಾಹ ಮಾಡಿಕೊಳ್ಳುವ ನಿರ್ಣಯ ತೆಗೆದುಕೊಂಡರು. ಆಕೆ ಬರೆಲಿಯ ಅಗಸ್ತ್ಯಮುನಿ ಆಶ್ರಮಕ್ಕೆ ತಲುಪಿದಳು. ಅಲ್ಲಿ ಆಕೆ ವೈದಿಕ ಪದ್ಧತಿಯ ಪ್ರಕಾರ ಸನಾತನ ಧರ್ಮ ಸ್ವೀಕರಿಸಿದಳು. ಅದರ ನಂತರ ಮೀನಾಕ್ಷಿಯಾಗಿರುವ ನಸೀಮಾಳ ವಿವಾಹ ಮಹೇಶ ಶರ್ಮಾ ಇವನ ಜೊತೆಗೆ ನಡೆಯಿತು.

ವಿವಾಹದ ನಂತರ ನಸಿಮಾಳಿಗೆ ಬೆದರಿಕೆ 

ವಿವಾಹವಾದ ನಂತರ ನಸೀಮಾಗೆ ಆಕೆಯ ಮುಸಲ್ಮಾನ ಕುಟುಂಬದವರಿಂದ ಬೆದರಿಕೆ ಬರಲು ಆರಂಭವಾದವು. (ಹಿಂದುಗಳು ಲವ್ ಜಿಹಾದ್ ಗೆ ವಿರೋಧಿಸಿದರೆ ಅವರಿಗೆ ಸರ್ವ ಧರ್ಮ ಸಮಭಾವದ ಉಪದೇಶ ನೀಡುವವರು ಈ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ! – ಸಂಪಾದಕರು) ‘ಅವರು ನನಗೆ ಮತ್ತು ನನ್ನ ಅತ್ತೆಯ ಮನೆಯರಿಗೆ ಜೀವ ಬೆದರಿಕೆ ನೀಡುತ್ತಿದ್ದಾರೆ. ನಾನು ಬರೆಲಿಯ ಪೊಲೀಸ ಅಧಿಕಾರಿಗಳಿಗೆ ಪತ್ರ ಬರೆದು ರಕ್ಷಣೆ ನೀಡಲು ವಿನಂತಿಸಿದ್ದೇನೆ ಎಂದು ಹೇಳಿದಳು.