ಜೋಧಪುರ (ರಾಜಸ್ಥಾನ) ಇಲ್ಲಿ ಹಿಜಾಬ ಧರಿಸಿ ಶಾಲೆಗೆ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅನುಮತಿಯ ನಿರಾಕರಣೆಯಿಂದಾಗಿ ಗದ್ದಲ

ಸ್ಥಳೀಯ ನಗರಸೇವಕ ಖಲೀಫಾನಿಂದ ಶಿಕ್ಷಕರಿಗೆ ಬೆದರಿಕೆ !

ಜೋಧಪುರ (ರಾಜಸ್ಥಾನ) – ಇಲ್ಲಿಯ ಪಿಪರ ಪ್ರದೇಶದಲ್ಲಿ 10 ಕ್ಕಿಂತ ಹೆಚ್ಚು ಮುಸಲ್ಮಾನ ವಿಧ್ಯಾರ್ಥಿನಿಯರು ಶಾಲೆಗೆ ಹಿಜಾಬ ಧರಿಸಿ ಹೋಗಲು ಪಟ್ಟು ಹಿಡಿದಿರುವದರಿಂದ ಗೊಂದಲವಾಯಿತು. ಈ ಸಮಯದಲ್ಲಿ ನಗರಸೇವಕ ಮುಝಫ್ಫರ ಖಲಿಫಾ ಅಲ್ಲಿಗೆ ತಲುಪಿದನು. ಅವನು ಬೆದರಿಕೆ ಹಾಕುತ್ತಾ, `ಈ ಸರಕಾರ ಇಂದು ಇದೆ. ನಾಳೆ ಹೋಗುವುದು; ಆದರೆ ಶಿಕ್ಷಕರಿಗೆ ಇಲ್ಲಿಯೇ ಇರಬೇಕಾಗುವುದು’ ಎಂದು ಹೇಳಿದನು.

1. ಹಿಜಾಬ ಧರಿಸಿ ಶಾಲೆಗೆ ಬಂದ ಮುಸಲ್ಮಾನ ವಿದ್ಯಾರ್ಥಿನಿಗೆ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಶಾಲೆಯ ಮುಖ್ಯಾಧ್ಯಾಪಕರು ಪೋಷಕರನ್ನು ಕರೆತರುವಂತೆ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿದರು. ವಿದ್ಯಾರ್ಥಿನಿಯರು ತಮ್ಮ ಪೋಷಕರೊಂದಿಗೆ ಶಾಲೆಗೆ ಮರಳಿ ಬಂದಾಗ ಗೊಂದಲವಾಯಿತು.

2. ಮುಖ್ಯಾಧ್ಯಾಪಕ ರಾಮಕಿಶೋರ ಸಾಂಖಲಾ ಇವರು ಮಾತನಾಡಿ, ಬಾಲಕಿಯರು ತಲೆ ಮತ್ತು ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡು ಶಾಲೆಗೆ ಬಂದಿದ್ದರು. ಇದರಿಂದ ಅವರನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಅನುಮತಿ ನಿರಾಕರಿಸಲಾಯಿತು. ಸರಕಾರ ನಿರ್ಧರಿಸಿರುವ ಸಮವಸ್ತ್ರದಲ್ಲಿಯೇ ಶಾಲೆಗೆ ಬರಲು ಅನುಮತಿಯಿದೆ; ಆದರೆ ಕುಟುಂಬದವರು ವಿರೋಧಿಸಿ ಗೊಂದಲ ಮಾಡಿದರು. ಈ ಸಮಯದಲ್ಲಿ ನಗರಸೇವಕ ಖಲಿಫಾ ಅಲ್ಲಿಗೆ ತಲುಪಿದರು. ಈ ಪ್ರಕರಣದ ಮಾಹಿತಿ ಸಿಗುತ್ತಲೇ ಪೊಲೀಸರು ಅಲ್ಲಿಗೆ ತಲುಪಿದರು ಮತ್ತು ಅವರು ಪ್ರಕರಣವನ್ನು ಶಾಂತಗೊಳಿಸಿದರು.

ಸಂಪಾದಕೀಯ ನಿಲುವು

ಎಲ್ಲರಿಗೂ ಸಮಾನವಾದ ಸಮವಸ್ತ್ರವಿರುವಾಗ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮನ್ನು ಪ್ರತ್ಯೇಕವೆಂದು ತೋರಿಸಿಕೊಳ್ಳಲು ಪ್ರಯತ್ನಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಿರಿ!

ನಿಯಮಗಳನ್ನು ಪಾಲಿಸದಿರುವವರಿಗೆ ಶಾಲೆಯಿಂದ ಒದ್ದು ಕಳಿಸಬೇಕು ಎಂದು ಯಾರಿಗಾದರಿಗೆ ಅನಿಸಬಹುದು !

ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವುದರಿಂದ ಶಿಕ್ಷಕರಿಗೆ ಬೆದರಿಕೆ ಹಾಕುವ ನಗರಸೇವಕನನ್ನು ಬಂಧಿಸಿ ಜೈಲಿಗೆ ಅಟ್ಟಬೇಕು !