ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯವು ಬೆಲ್ಜಿಯಂನಲ್ಲಿ ಧಾರ್ಮಿಕ ವಿಧಿಯ ಅಡಿಯಲ್ಲಿ ಬರುವ ಪಶು ಹತ್ಯೆಯ ಮೇಲಿನ ನಿಷೇಧ ಎತ್ತಿ ಹಿಡಿದಿದೆ !

ಮುಸಲ್ಮಾನ ಮತ್ತು ಜ್ಯೂ ಜನರಿಂದ ಅರ್ಜಿ !

ಪ್ಯಾರಿಸ್ (ಫ್ರಾನ್ಸ್) – ಬೆಲ್ಜಿಯಂನಲ್ಲಿ ಧಾರ್ಮಿಕ ವಿಧಿಯ ಅಡಿಯಲ್ಲಿ ಬರುವ ಪ್ರಾಣಿಗಳ ಹತ್ಯೆಯ ಬಗ್ಗೆ ಇಲ್ಲಿಯ ರಾಜ್ಯ ಸರಕಾರ ನಿಷೇಧ ಹೇರಿತ್ತು. ಅದಕ್ಕೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪು ನೀಡುತ್ತಾ ಬೆಲ್ಜಿಯಂನಲ್ಲಿ ರಾಜ್ಯ ಸರಕಾರದ ಆದೇಶಕ್ಕೆ ಸಮ್ಮತಿಸಿತು. ಬೆಲ್ಜಿಯಂ ದೇಶದಲ್ಲಿನ ಫ್ಲಡರ್ಸ್ ಮತ್ತು ವೆಲೋನಿಯ ಈ ರಾಜ್ಯದ ಸರಕಾರದಿಂದ ಧಾರ್ಮಿಕ ವಿಧಿಯ ಅಡಿಯಲ್ಲಿ ನಡೆಯುವ ಪ್ರಾಣಿ ಹತ್ಯೆಯನ್ನು ನಿಷೇಧಿಸಿತ್ತು. ಇದರ ವಿರುದ್ಧ ಅನೇಕ ಇಸ್ಲಾಮಿ ಮತ್ತು ಜ್ಯೂ ಪ್ರತಿನಿಧಿ ಹಾಗೂ ಸ್ವಯಂ ಸೇವೆ ಸಂಸ್ಥೆ ಇವುಗಳು ಬೆಲ್ಜಿಯಂನ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಸರಕಾರದಿಂದ ಹೇರಲಾದ ನಿಷೇಧ ಯೋಗ್ಯವಾಗಿ ಇದೆ ಎಂದು ತೀರ್ಪು ನೀಡಿತು. ಇದರಿಂದ ಈ ಅರ್ಜಿದಾರರು ಫ್ರಾನ್ಸಿನ ಸ್ಟಾರ್ಸ್ ಬರ್ಗ್ ಇಲ್ಲಿಯ ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಮೊರೆ ಹೋದರು; ಆದರೆ ಅಲ್ಲಿಯೂ ಕೂಡ ಅವರಿಗೆ ಮುಖಭಂಗವಾಯಿತು. ಅರ್ಜಿದಾರರು ನ್ಯಾಯಾಲಯದ ಎದುರು ಯುಕ್ತಿವಾದ ಮಂಡಿಸಿದರು, ಸರಕಾರವು ಧಾರ್ಮಿಕ ಪದ್ಧತಿಗಳಲ್ಲಿ ಪ್ರಾಣಿ ಹತ್ಯೆಯ ಮೇಲೆ ನಿಷೇಧ ಹೇರುವುದು ಇದು ನಮ್ಮ ಧರ್ಮ ಸ್ವಾತಂತ್ರ್ಯ ಅಧಿಕಾರದ ಉಲ್ಲಂಘನೆ ಆಗಿದೆ. ಯುರೋಪಿಯನ್ ನ್ಯಾಯಾಲಯದಲ್ಲಿ ೭ ನ್ಯಾಯಾಧೀಶರ ವಿಭಾಗೀಯಪೀಠವು ಈ ಯುಕ್ತಿವಾದವನ್ನು ಒಮ್ಮತದಿಂದ ತಪ್ಪಾಗಿದೆ ಎಂದು ನಿರ್ಧರಿಸಿ ಸರಕಾರಿ ಆದೇಶ ಸರಿ ಇದೆ ಎಂದು ತೀರ್ಪು ನೀಡಿತು. ವಿಶೇಷವೆಂದರೆ ಈ ನ್ಯಾಯಾಧೀಶರಲ್ಲಿ ಓರ್ವ ಟರ್ಕಿಯ ಮುಸಲ್ಮಾನ ನ್ಯಾಯಾಧೀಶರು ಇದ್ದರು.

ಪ್ರಾಣಿ ಕಲ್ಯಾಣ ಮತ್ತು ಧರ್ಮ ಸ್ವಾತಂತ್ರ್ಯದ ಗೌರವ ಈ ಎಲ್ಲದರ ವಿಚಾರ ಮಾಡಿದೆ ! – ನ್ಯಾಯಾಲಯ

ನ್ಯಾಯಾಲಯವು, ಸಾರ್ವಜನಿಕ ನೈತಿಕತೆಯ ರಕ್ಷಣೆ ಕೇವಲ ಮನುಷ್ಯ ಪ್ರತಿಷ್ಠೆಗೆ ಸೀಮಿತವಾಗದೆ ಪ್ರಾಣಿಗಳ ಕಲ್ಯಾಣದ ವರೆಗೆ ವಿಸ್ತರಿಸಿದೆ. ರಾಜ್ಯ ಸರಕಾರವು ಅದರ ಮೂಲ ಆದೇಶದಲ್ಲಿ, ಪ್ರಾಣಿಗಳ ಕಲ್ಯಾಣ ಮತ್ತು ಧರ್ಮಸ್ವಾತಂತ್ಯ್ರದ ಗೌರವ ಮುಂತಾದ ಎಲ್ಲಾ ಉದ್ದೇಶಗಳು ಗಮನಿಸಿ ಈ ನಿರ್ಣಯ ತೆಗೆದುಕೊಂಡಿದೆ. ಹತ್ಯೆಯ ಮೊದಲು ಆಗುವ ದುಃಖ ಕಡಿಮೆ ಮಾಡುವುದಕ್ಕಾಗಿ ಎಲ್ಲಕ್ಕಿಂತ ಪ್ರಭಾವಿ ಪದ್ಧತಿ ಎಂದು ಅವುಗಳನ್ನು ಪ್ರಜ್ಞೆ ತಪ್ಪಿಸುವುದು ಅವಶ್ಯಕವಾಗಿದೆ.

ಸಂಪೂರ್ಣ ಯುರೋಪಿನಲ್ಲಿ ಸಾಂಪ್ರದಾಯಿಕ ಪದ್ಧತಿಯಿಂದ ಪ್ರಾಣಿ ಹತ್ಯೆಯ ಮೇಲೆ ನಿಷೇಧ ಹೇರಬಹುದು !

ನ್ಯಾಯಾಲಯದ ತೀರ್ಪಿನ ನಂತರ ಮುಸಲ್ಮಾನ ಪಕ್ಷದವರು ಮೆಹಮೆಟ್ ಉಷ್ಟನ್ ಇವರು, ”ಈ ತೀರ್ಪು ಅತ್ಯಂತ ನಿರಾಶಾದಾಯಕ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧವಾಗಿದೆ.” ಎಂದು ಹೇಳಿದೆ. ಇನ್ನೊಂದು ಕಡೆ ಪ್ಲಡರ್ಸ್ ರಾಜ್ಯದ ಪ್ರಾಣಿ ಕಲ್ಯಾಣ ಸಚಿವೆ ಬೇನ್ ವೇಟ್ಸ್ ಇವರು, ”ಯುರೋಪಿಯನ್ ನ್ಯಾಯಾಲಯದ ಈ ತೀರ್ಪಿನಿಂದ ಕೇವಲ ಬೆಲ್ಜಿಯಂನಲ್ಲಿ ಅಷ್ಟೇ ಅಲ್ಲದೆ, ಸಂಪೂರ್ಣ ಯುರೋಪಿನಲ್ಲಿ ಪ್ರಾಣಿಗಳ ಅನೈಸರ್ಗಿಕ ಹತ್ಯೆಯ ಮೇಲೆ ನಿಷೇಧ ಹೇರುವ ಹೆಬ್ಬಾಗಿಲು ತೆರೆದಿದೆ”, ಎಂದು ಹೇಳಿದರು.