ಬರೆಲಿ (ಉತ್ತರ ಪ್ರದೇಶ)ಯಲ್ಲಿ ಶಾಯಿದಾ ಘರವಾಪಾಸಿ ಮಾಡಿ ಓಂಪ್ರಕಾಶ ಇವರೊಂದಿಗೆ ಮದುವೆ !

  • ಶಾಯಿದಾ ತನ್ನ ಕುಡುಕ ಮುಸ್ಲಿಂ ಪತಿಯ ಕಿರುಕುಳದಿಂದ ಬಿಡುಗಡೆ ಹೊಂದಿ ಶಾರದಾ ಆದಳು !

  • ಮೊದಲ ಪತಿಯ ಇಬ್ಬರೂ ಮಕ್ಕಳ ಹಿಂದೂ ಧರ್ಮದ ಪ್ರಕಾರ ಆಚರಣೆ ಮಾಡವರು !

ಬರೆಲಿ (ಉತ್ತರಪ್ರದೇಶ) – ಇಲ್ಲಿಯ ಶಾಹಿದಾಳು ಫೆಬ್ರವರಿ ೧೪ ರಂದು ಹಿಂದೂ ಧರ್ಮ ಸ್ವೀಕರಿಸಿ ಓಂ ಪ್ರಕಾಶ ಎಂಬ ಹಿಂದೂ ಪುರುಷನ ಜೊತೆಗೆ ವಿವಾಹ ಮಾಡಿಕೊಂಡಳು. ಈ ಸಮಯದಲ್ಲಿ ಶಾಹಿದಾಗೆ ಶಾರದಾ ಎಂದು ನಾಮಕರಣ ಮಾಡಿದರು. ಶಾಹಿದಾ ಆಕೆಯ ಕುಡುಕ ಮುಸಲ್ಮಾನ ಪತಿಗೆ ಹಿಂದೆಯೇ ವಿಚ್ಛೇದನ ನೀಡಿದ್ದಳು. ಅವರಿಗೆ ಎರಡು ಮಕ್ಕಳು ಇವೆ. ಇನ್ನು ಮುಂದೆ ಅವುಗಳು ಕೂಡ ಹಿಂದೂ ಧರ್ಮದ ಪ್ರಕಾರ ಆಚರಣೆ ಮಾಡುವರು. ಈಗ ಅವರು ಹೆಸರು ಆಹರಾಮ ಬದಲು ರೋಹಿತ ಮತ್ತು ಸಾದ ಬದಲು ರೋಹನ್ ಎಂದು ಆಗಿದೆ. ಈ ಘರವಾಪಸಿಗಾಗಿ ಅವರಿಗೆ ಹಿಂದುತ್ವನಿಷ್ಠ ಸಂಘಟನೆಗಳು ಸಹಾಯ ಮಾಡಿದೆ.

ಶಾಹಿದಾಳ ಬುಲಂದಶಾಹರದ ಮುಸಲ್ಮಾನ ಯುವಕನ ಜೊತೆಗೆ ವಿವಾಹವಾಗಿತ್ತು; ಆದರೆ ಅವನು ಕುಡಿದು ಬಂದು ಆಕೆಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದನು. ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ ಆದ್ದರಿಂದ ಮನೆಯ ಜವಾಬ್ದಾರಿ ಆಕೆಯ ಮೇಲೆ ಇತ್ತು. ಮುಂದೆ ಆಕೆಗೆ ಎರಡು ಮಕ್ಕಳಾದವು, ಆದರೂ ಕೂಡ ಪತಿಯಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಪತಿಯ ಜೊತೆಗೆನ ಜಗಳ ವಿಕೋಪಕ್ಕೆ ಹೋಗಿ ಶಾಹಿದಾ ಅವನಿಂದ ವಿಚ್ಛೇದನ ಪಡೆದಳು.

೧. ಶಾಹಿದಾಗೆ ತವರು ಮನೆಯಿಂದ ಯಾವುದೇ ಸಹಾಯ ದೊರೆಯಲಿಲ್ಲ. ಆದ್ದರಿಂದ ಆಕೆ ಗಾಝಿಯಾಬಾದಗೆ ಬಂದಳು ಮತ್ತು ಅಲ್ಲಿ ನೌಕರಿ ಮಾಡುತ್ತಿದ್ದಳು. ಅಲ್ಲಿಯೇ ಓಂಪ್ರಕಾಶ ಇವರು ಕೂಡ ನೌಕರಿ ಮಾಡುತ್ತಿದ್ದರು. ಅವರ ವಿವಾಹವಾಗಿರಲಿಲ್ಲ. ಅವರು ಶಾಹಿದಾಗೆ ವಿವಿಧ ಸಮಸ್ಯೆಯ ಸಮಯದಲ್ಲಿ ಅನೇಕ ಬಾರಿ ಬಹಳಷ್ಟು ಸಹಾಯ ಮಾಡಿದರು. ಇಬ್ಬರಲ್ಲಿ ಪ್ರೇಮ ಅಂಕುರಿತವಾಗಿತ್ತು ಮತ್ತು ಶಾಹಿದಾ ಅವರ ಜೊತೆಗೆ ವಿವಾಹ ಮಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದಳು.

೨. ಇದಕ್ಕಾಗಿ ಓಂಪ್ರಕಾಶ ಇವರು ಕಾನೂನು ತಜ್ಞರ ಸಲಹೆ ಪಡೆದರು. ಹಾಗೂ ಬರೆಲಿಯ ಹಿಂದೂ ಜಾಗರಣ ವೇದಿಕೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ಫೆಬ್ರವರಿ ೧೪ ರಂದು ಭಿದನಾಥ ದೇವಸ್ಥಾನದಲ್ಲಿ ಇಬ್ಬರ ವಿವಾಹ ವೈದಿಕವಿಧಿಯ ಪ್ರಕಾರ ನಡೆಯಿತು. (ಎಲ್ಲಿ ತಮ್ಮ ಮುಸಲ್ಮಾನ ಗುರುತು ಮರೆಮಾಚಿ ಹಿಂದೂ ಮಹಿಳೆಯರನ್ನು ಪ್ರೇಮದ ಬಲಗೆ ಸಿಲುಕಿಸಿ ಮತ್ತು ಮುಂದೆ ಕೊಲೆ ಮಾಡುವ ಅಥವಾ ಅರಬ್ ದೇಶಗಳಿಗೆ ಮಾರುವ ಮತಾಂಧ ಮುಸಲ್ಮಾನರು ಹಾಗೂ ಎಲ್ಲಾ ಕಡೆಯಿಂದ ಯೋಚಿಸಿ ಅಸಹಾಯಕ ಮುಸಲ್ಮಾನ ಮಹಿಳೆಯ ಜೊತೆಗೆ ವಿವಾಹ ಮಾಡಿಕೊಳ್ಳುವ ಹಿಂದೂ ! – ಸಂಪಾದಕರು)

ಸ್ವಯಿಚ್ಚೆಯಿಂದ ಘರವಾಪಸಿಗಾಗಿ ಇಚ್ಛೆ ಇರುವವರಿಗೆ ಎಲ್ಲಾ ರೀತಿಯ ಸಹಾಯ ಮಾಡುವೆವು ! – ಹಿಂದೂ ಜಾಗರಣ ವೇದಿಕೆ

ಇಂತಹ ಹಿಂದುತ್ವನಿಷ್ಠ ಸಂಘಟನೆಯೆ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದೆ !

ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿ ಹಿಮಾಂಶ ಪಟೇಲ್ ಇವರು, ಪತಿ-ಪತ್ನಿ ಇಬ್ಬರು ಕೂಡ ಪ್ರೌಢರಿದ್ದಾರೆ. ಶಾಹಿದಾ ಈಕೆಯ ಪತಿ ಓಂಪ್ರಕಾಶ ಜೊತೆಗೆ ಬಹಳ ಸಂತೋಷವಾಗಿದ್ದಾಳೆ ಮತ್ತು ಆಕೆ ಯಾವುದೇ ಒತ್ತಡ ಇಲ್ಲದೆ ವಿವಾಹ ಮಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಳು. ಸ್ವಇಚ್ಛೆಯಿಂದ ಘರವಾಪಸಿ ಮಾಡುವ ಇಚ್ಛೆ ಇರುವವರಿಗೆ ಎಲ್ಲಾ ರೀತಿಯ ಸಹಾಯ ಮಾಡುವೆವು ಎಂದು ಹೇಳಿದರು.