‘ಹಲ್ಲೆಯನ್ನು ನಿಲ್ಲಿಸಲು ನಾವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ !’ (ಅಂತೆ) – ಅಮೇರಿಕಾ

ಅಮೇರಿಕಾದಲ್ಲಿ ಭಾರತೀಯರ ಮೇಲಿನ ದಾಳಿ ಪ್ರಕರಣ

ವಾಷಿಂಗ್ಟನ (ಅಮೆರಿಕಾ) – ಕಳೆದ ತಿಂಗಳು ಅಮೇರಿಕಾದಲ್ಲಿ ಭಾರತೀಯ ಮೂಲದ ನಾಗರಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ 4 ಭಾರತೀಯರು ಮತ್ತು ಮೂವರು ಭಾರತೀಯ ಮೂಲದ ಜನರು ಸಾವನ್ನಪ್ಪಿದರು. ಹಾಗೆಯೇ ಕೆಲವರು ಗಾಯಗೊಂಡರು. ಈ ಸಂದರ್ಭದಲ್ಲಿ ಶ್ವೇತಭವನದ ಅಮೇರಿಕಾದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಅವರಿಗೆ ಪತ್ರಿಕಾ ಗೋಷ್ಟಿಯಲ್ಲಿ ಒಂದು ಪ್ರಶ್ನೆಯನ್ನು ಕೇಳಲಾಯಿತು. ಆ ಸಮಯದಲ್ಲಿ ಅವರು ಮಾತನಾಡಿ, ಅಮೇರಿಕಾದಲ್ಲಿ ಖಂಡಿತವಾಗಿಯೂ ಜನಾಂಗ, ಲಿಂಗ, ಧರ್ಮ ಅಥವಾ ಹಿಂಸಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡನ ಮತ್ತು ಅವರ ಆಡಳಿತವು ಈ ದಾಳಿಯನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ 7 ಜನರು ಮರಣ ಹೊಂದಿರುವಾಗ, ಮತ್ತೊಬ್ಬರು ಸಾವನ್ನಪ್ಪಿದ್ದಾರೆ, ಆಗಲೇ ಅಮೇರಿಕನ್ನರು ಗಂಭೀರವಾಗಿ ಪ್ರಯತ್ನಗಳನ್ನು ಮಾಡಿದ್ದರೆ, ಇತರರ ಸಾವನ್ನು ತಪ್ಪಿಸಬಹುದಿತ್ತು. ಈಗಲೂ ಅಮೇರಿಕಾ ಈ ಸಂದರ್ಭದಲ್ಲಿ ಏನಾದರೂ ಮಾಡುತ್ತಿದೆಯೆಂದು ಅನಿಸುತ್ತಿಲ್ಲ !

ಅಮೇರಿಕಾ ಭಾರತದ ಸ್ನೇಹಿತನಲ್ಲ, ಬದಲಿಗೆ ಸಮಯಸಾಧಕ ಮತ್ತು ಸ್ವಾರ್ಥಿಯಾಗಿದೆ, ಇದಷ್ಟನ್ನೇ ನೆನಪಿನಲ್ಲಿಟ್ಟುಕೊಳ್ಳಬೇಕು !