ತಮ್ಮ ಪ್ರದೇಶವನ್ನು ಭಾರತದಲ್ಲಿ ವಿಲೀನಗೊಳಿಸಲು ಹಾತೊರೆಯುತ್ತಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಗರಿಕರು !

ನಾಗರಿಕರ ಸ್ಥಿತಿ ಗುಲಾಮರಿಗಿಂತ ಕಡೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಗರಿಕರು ಈಗ ಯಾವುದೇ ವಿಳಂಬವಿಲ್ಲದೆ ತಮ್ಮ ಪ್ರದೇಶವನ್ನು ಭಾರತದೊಂದಿಗೆ ವಿಲೀನಗೊಳಿಸಲು ಇಚ್ಛಿಸುತ್ತಿದ್ದಾರೆ. ಭಾರತದೊಂದಿಗೆ ವಿಲೀನವಾಗುವ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಾಕಿಸ್ತಾನ ಸೇನೆಯಿಂದ ಜೀವಕ್ಕೆ ಅಪಾಯವಿರುವುದರಿಂದ ಬ್ರಿಟನ್‌ನಲ್ಲಿ ನಿರಾಶ್ರಿತ ಜೀವನವನ್ನು ಜೀವಿಸುತ್ತಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿವಾಸಿ ಅಜ್ಮದ ಅಯೂಬ್ ಮಿರ್ಜಾ ಮಾತನಾಡಿ, “ಪಾಕ್ ಆಕ್ರಮಿತ ಕಾಶ್ಮೀರದ ನೂರಾರು ಜನರು ಪ್ರತಿದಿನ ನನಗೆ “ನಮಗೆ ಇನ್ನೂ ಎಷ್ಟು ದಿನ ಪಾಕಿಸ್ತಾನಿ ಸೇನೆಯ ದೌರ್ಜನ್ಯವನ್ನು ಸಹಿಸಬೇಕಾಗಲಿದೆ ? ಎಂದು ಕೇಳುತ್ತಾರೆ ಎಂದು ಹೇಳಿದರು.

ಮಿರ್ಜಾ ತಮ್ಮ ಮಾತು ಮುಂದುವರಿಸಿ,

1. ಪಾಕಿಸ್ತಾನಿ ಆಡಳಿತಗಾರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ ಕಾಶ್ಮೀರ’ ಎಂದು ಕರೆಯುತ್ತಾರೆ; ಆದರೆ ಇಲ್ಲಿನ ಜನರ ಸ್ಥಿತಿ ಜೀತದಾಳುಗಳಿಗಿಂತ ಕಡೆಯಾಗಿದೆ.

2. ಹಲವು ದಶಕಗಳಿಂದ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಪಾಕಿಸ್ತಾನಿ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದೌರ್ಜನ್ಯ ನಡೆಸುತ್ತಿದೆ ಮತ್ತು ಕಾಶ್ಮೀರದಲ್ಲಿ ಆತಂಕ ನಿರ್ಮಿಸುತ್ತಿದೆ.

3. ಆರ್ಥಿಕ ಅಸ್ಥಿರತೆಯ ಅಂಚಿನಲ್ಲಿರುವ ದೇಶವು ತಮಗೆ ಏನು ಒಳ್ಳೆಯದನ್ನು ಮಾಡಬಹುದು ? ಇಂತಹ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಇಸ್ಲಾಂ ಹೆಸರಿನಡಿಯಲ್ಲಿ ಹರಡಿರುವ ವಿಷದ ಪರಿಣಾಮವೂ ಜಿನುಗುತ್ತಿದೆ. ಎಂದು ಜನರಿಗೆ ಅನಿಸುತ್ತಿದೆ.

4. ಅಲ್ಲಿನ ಎಲ್ಲಾ ಮೂಲಸೌಕರ್ಯ ಸೌಲಭ್ಯಗಳು ಪಾಕಿಸ್ತಾನಿ ಸೇನೆ ಮತ್ತು ಸರಕಾರದ ವಶದಲ್ಲಿದೆ. ಇಲ್ಲಿ ಜನಸಾಮಾನ್ಯರಿಗೆ ದಿನಕ್ಕೆರಡು ಬಾರಿ ಊಟ ಸಿಗುವುದೇ ದುಸ್ತರವಾಗಿದೆ.

ಸಂಪಾದಕೀಯ ನಿಲುವು

ಈ ಪರಿಸ್ಥಿತಿಯನ್ನು ಭಾರತವು ಜಗತ್ತಿನ ಮುಂದೆ ಇಟ್ಟು ನೇರವಾಗಿ ಸೇನಾ ಕಾರ್ಯಾಚರಣೆಯನ್ನು ನಡೆಸಬೇಕು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಕೇವಲ ಭೂಪಟದಲ್ಲಿ ಅಲ್ಲ, ನಿಜವಾಗಿ ಭಾರತದ ಅವಿಭಾಜ್ಯ ಅಂಗವಾಗಬೇಕು. ಇಂದಿನ ಕಾಲ ರಾಜತಾಂತ್ರಿಕ, ಆರ್ಥಿಕ, ಸೇನಾ, ಭೂರಾಜಕೀಯ ಮುಂತಾದ ಎಲ್ಲ ಹಂತಗಳಲ್ಲಿ ಭಾರತಕ್ಕೆ ಬಹಳ ಅನುಕೂಲಕರವಾಗಿದೆ ಎಂದು ಜಗತ್ತು ಕೂಡ ನಂಬುತ್ತದೆ !