ಮುಜಾಫರ್ ನಗರ (ಉತ್ತರಪ್ರದೇಶ)ದಲ್ಲಿ ಪೋಲೀಸರಿಂದ ೪ ಬಾಂಬ್ ವಶ !

ಜಾವೇದ್‌ನ ಬಂಧನ

ಮುಜಾಫ್ಫರ್‌ನಗರ(ಉತ್ತರಪ್ರದೇಶ) – ಉತ್ತರಪ್ರದೇಶದ ಪೋಲೀಸರ ‘ವಿಶೇಷ ತನಿಖಾ ತಂಡ‘ವು (ಎಸ್.ಟಿ.ಎಫ್.ನ) ಮುಜಫ್ಫರ್‌ನ ಖಾಲಾಪಾರ ಪ್ರದೇಶದಿಂದ ೪ ಟೈಮರ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ. ‘ಟೈಮರ್‌ ಬಾಂಬ್‘ ನಲ್ಲಿ ಒಂದು ಉಪಕರಣವನ್ನು ಅಳವಡಿಸಲಾಗಿರುತ್ತದೆ. ಈ ಮೂಲಕ ಸಮಯವನ್ನು ನಿರ್ಧರಿಸನಹುದು. ಅದೇ ಸಮಯದಲ್ಲಿ ಬಾಂಬ್ ಸ್ಫೋಟಗೊಳ್ಳುತ್ತದೆ. ಈ ಪ್ರಕರಣದಲ್ಲಿ ಪೋಲೀಸರು ಜಾವೇದ್ ಹೆಸರಿನ ಮುಸಲ್ಮಾನ ಯುವಕನನ್ನು ವಶಕ್ಕೆ ಪಡೆದಿದ್ದು ಅವನ ವಿಚಾರಣೆ ನಡೆಸುತ್ತಿದ್ದಾರೆ. ಮೆರಠನಿಂದ ಬಾಂಬ್ ನಿಷ್ಕ್ರಿಯ ತಂಡವನ್ನು ಕರೆಸಲಾಗಿದೆ. ಈ ಟೈಮರ್‌ ಬಾಂಬ್‌ಗಳನ್ನು ಮುಜಾಫರ್‌ನಗರದಲ್ಲಿಯೇ ತಯಾರಿಸಲಾಗಿದೆ ಎಂದು ಹೇಳಲಾಗಿದೆ. (ಮುಜಫ್ಫರ್‌ನಗರದಲ್ಲಿ ಬಾಂಬ್‌ಗಳನ್ನು ತಯಾರಿಸುತ್ತಿದ್ದು, ಅದರ ಪತ್ತೆಯಾಗುತ್ತಿಲ್ಲ ಇದು ಪೋಲೀಸರಿಗೆ ನಾಚಿಕೆಗೇಡಿನ ಸಂಗತಿ ! – ಸಂಪಾದಕರು)

(ಸೌಜನ್ಯ – Republic Bharat)

೧. ಈ ಬಾಂಬ್‌ಅನ್ನು ಖಾಲಾಪಾರ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯು ತರಿಸಿರುವುದನ್ನು ಜಾವೇದ್ ವಿಚಾರಣೆ ವೇಳೆ ಹೇಳಿದ್ದಾನೆ. ಈ ಮಹಿಳೆಯ ಹುಡುಕಾಟದಲ್ಲಿ ಪೋಲೀಸ್‌ ತಂಡ ನಿರತವಾಗಿದೆ. (ಜಿಹಾದಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಮಹಿಳೆಯರೂ ಅಗ್ರಸ್ಥಾನದಲ್ಲಿರುವುದಕ್ಕೆ ಉದಾಹರಣೆ ! – ಸಂಪಾದಕರು)

೨. ‘ಎಸ್.ಟಿ.ಎಫ್.ನ ಪೋಲಿಸ್ ವರಿಷ್ಟಾಧಿಕಾರಿ ಬ್ರಿಜೇಷ ಕುಮಾರ ಸಿಂಗ್ ಅವರು ಈ ಹಿಂದೆಯೂ ಟೈಮರ್‌ ಬಾಂಬ್ ತಯಾರಿಸಿದ್ದರು ಎಂದು ಹೇಳಿದ್ದಾರೆ. (ಅಂದು ಪೋಲೀಸರು ಅವರ ಮೇಲೆ ಕ್ರಮ ಕೈಗೊಂಡಿದ್ದರೆ, ಇಂದು ಈ ಸಮಯ ಬರುತ್ತಿರಲಿಲ್ಲ ! – ಸಂಪಾದಕರು)

೩. ಜಾವೇದ್ ನ ಅಜ್ಜ ಪಟಾಕಿ ತಯಾರಿಸುವ ಕೆಲಸ ಮಾಡುತ್ತಿದ್ದರು. ಅವನಿಗೆ ‘ಬಾಂಬ್ ಹೇಗೆ ತಯಾರಿಸುವುದು?‘, ಇದನ್ನು ಅಜ್ಜ ಕಲಿಸಿದರು. ಆನಂತರ ಅವನು ‘ಯೂಟ್ಯೂಬ್’ ಮೂಲಕ ಅತ್ಯಾಧುನಿಕ ಬಾಂಬ್ ಹೇಗೆ ತಯಾರಿಸುವುದು?‘, ಇದನ್ನು ಕಲಿತನು.

ಸಂಪಾದಕೀಯ ನಿಲುವು

‘ಭಯೋತ್ಪಾದನೆಯ ಪ್ರಕರಣದಲ್ಲಿ ಯಾವಾಗಲೂ ಒಂದು ನಿರ್ದಿಷ್ಟ ಧರ್ಮದ ಜನರನ್ನೇ ಏಕೆ ಬಂಧಿಸಲಾಗುತ್ತದೆ‘?, ಇದಕ್ಕೆ ಜಾತ್ಯತೀತವಾದಿಗಳೆಂದು ಕೂಗಾಡುವವರು ಉತ್ತರ ಕೊಡಬಲ್ಲರೇ ?