ಮುಂಬಯಿ ಹತ್ತಿರದ ಘಾರಾಪುರಿ ಗುಹೆಯಲ್ಲಿ ಪೂಜೆಯ ಅಧಿಕಾರಕ್ಕಾಗಿ ಹಿಂದೂಗಳಿಂದ ಆಂದೋಲನ !

  • ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಪೂಜೆಯ ಅಧಿಕಾರ ಪಡೆಯಲು ಪ್ರಯತ್ನ !

  • ಸುದರ್ಶನ ವಾರ್ತಾ ವಾಹಿನಿ ಸಹಿತ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಪೂಜಾರ್ಚನೆ !

ಮುಂಬಯಿ, ಫೆಬ್ರವರಿ ೧೫ (ವಾರ್ತೆ.) – ಯುನೆಸ್ಕೊ ಇಂದ (ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಂತರಾಷ್ಟ್ರೀಯ ಪರಂಪರೆ ಎಂದು ಮಾನ್ಯತೆ ಪಡೆದಿರುವ ಘಾರಾಪುರಿ ಗುಹೆ ಇದು ಭಗವಾನ್ ಶಿವನ ಪ್ರಾಚೀನ ಸ್ಥಳವಾಗಿದೆ. ಹಿಂದೂಗಳ ಸಾಂಸ್ಕೃತಿಕ ಗುರುತು ಮತ್ತು ಧಾರ್ಮಿಕ ಸ್ಥಳ ಇರುವ ಘಾರಾಪುರಿ ಗುಹೆಯಲ್ಲಿ ಹಿಂದುಗಳಿಗೆ ಪೂಜೆಯ ಅಧಿಕಾರ ದೊರೆಯಬೇಕು, ಇದಕ್ಕಾಗಿ ಹಿಂದುಗಳು ಫೆಬ್ರುವರಿ ೧೫ ರಂದು ಆಂದೋಲನ ನಡೆಸಿದರು.

ಸುದರ್ಶನ ವಾಹಿನಿಯ ನೇತೃತ್ವದಲ್ಲಿ ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಹಿಂದೂಗಳಿಂದ ಧಾರಪುರಿಯಲ್ಲಿನ ಶಿವಲಿಂಗಕ್ಕೆ ಪೂಜಾ ಅರ್ಚನೆ ಮಾಡಿದರು. ಸುದರ್ಶನ ವಾಹಿಯ ಮುಖ್ಯ ಸಂಪಾದಕರು ಶ್ರೀ. ಸುರೇಶ ಚೌಹಾನಕೆ, ಸ್ವಾತಂತ್ರ್ಯ ವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂದೆ ಇವರು ಈ ಆಂದೋಲನದ ನೇತೃತ್ವ ವಹಿಸಿದ್ದರು. ಈ ಪೂಜಾ ವಿಧಿಗಾಗಿ ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಾಗಿದ್ದರು. ಈ ಸಮಯದಲ್ಲಿ ಘಾರಾಪುರಿ ಗ್ರಾಮ ಪಂಚಾಯತಿಯ ಉಪಸರಪಂಚ ಬಳಿರಾಮ ಠಾಕೂರ್ ಇವರು ಸಹ ಉಪಸ್ಥಿತರಿದ್ದರು. ಮುಂಬಯಿಯಲ್ಲಿನ ‘ಗೇಟ ವೆ ಆಫ್ ಇಂಡಿಯಾ’ ಇಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಒಟ್ಟಾಗಿ ಸೇರಿ ಎಲ್ಲಾ ಧರ್ಮ ಪ್ರೇಮಿಗಳು ದೋಣಿಯ ಮೂಲಕ ಘಾರಾಪುರಿಗೆ ಹೋದರು.

ಕೈಯಲ್ಲಿ ಕೇಸರಿ ಧ್ವಜ ಹಿಡಿದು ‘ಹರ ಹರ ಮಹಾದೇವ’, ‘ಜಯ ಶ್ರೀ ರಾಮ’, ‘ಛತ್ರಪತಿ ಶಿವಾಜಿ ಮಹಾರಾಜ ಕಿ ಜೈ’ ಎಂದು ಘೋಷಣೆ ನೀಡುತ್ತಾ, ಹಿಂದುಗಳು ಘಾರಾಪುರಿಯಲ್ಲಿನ ಶಿವಮಂದಿರದಲ್ಲಿ ಪ್ರವೇಶಿಸಿದರು. ಇಲ್ಲಿಯ ಶಿವಲಿಂಗಕ್ಕೆ ಗಂಗಾಜಲದಿಂದ ಅಭಿಷೇಕ ಮಾಡಿ ಪುಷ್ಪಗಳನ್ನು ಸಮರ್ಪಿಸಿ ಸಾಮೂಹಿಕ ಆರತಿ ಮಾಡಿದರು. ಈ ಸ್ಥಳದಲ್ಲಿ ಶಿವ ಸ್ತೋತ್ರದ ಪಠಣೆ ಮಾಡಿ ಹಿಂದುಗಳು ‘ಹರ ಹರ ಮಹಾದೇವ’ನ ಜಯಭೋಷ ಮಾಡಿದರು. ಈ ಸಮಯದಲ್ಲಿ ಉಪಸ್ಥಿತ ಎಲ್ಲಾ ಹಿಂದುಗಳಲ್ಲಿ ಉತ್ಸಾಹದ ವಾತಾವರಣವಿತ್ತು.