ರಾಜಕೀಯ ಪಕ್ಷಗಳಿಗೆ ಅನಿಯಂತ್ರಿತ ಹಣಕಾಸು ಸಿಗಲು ಕಾನೂನು ತಿದ್ದುಪಡಿ ಮಾಡುವುದು ತಪ್ಪು ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಚುನಾವಣೆ ನಿಧಿ ಯೋಜನೆ ರದ್ದು !

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಪಕ್ಷಗಳಿಗಾಗಿ ಚುನಾವಣೆ ನಿಧಿ ಯೋಜನೆ’ ರದ್ದುಪಡಿಸಿದೆ. ಈ ಯೋಜನೆಯನ್ನು ಪ್ರಶ್ನಿಸಿದ್ದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ಈ ತೀರ್ಪು ನೀಡಿದೆ. ನ್ಯಾಯಾಲಯವು ತೀರ್ಪಿನಲ್ಲಿ, ಬೆನಾಮಿ ಚುನಾವಣೆ ನಿಧಿಯಿಂದ ಸಂವಿಧಾನದ ಕಲಂ ೧೯ (೧)(ಅ) ಅಡಿಯಲ್ಲಿರುವ ಮಾಹಿತಿಯ ಅಧಿಕಾರದ ಹನನವಾಗುತ್ತಿದೆ. ಆದ್ದರಿಂದ ಚುನಾವಣೆ ನಿಧಿ ಯೋಜನೆ ಸಂವಿಧಾನದ ವಿರುದ್ಧವಾಗಿದೆ. ರಾಜಕೀಯ ಪಕ್ಷಗಳಿಗೆ ಅನಿಯಂತ್ರಿತ ನಿಧಿ ದೊರೆಯಬೇಕೆಂದು ಕಾನೂನಿನಲ್ಲಿ ಬದಲಾವಣೆ ಮಾಡುವುದು ತಪ್ಪಾಗುತ್ತದೆ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡುವಾಗ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಗೆ ಚುನಾವಣೆ ನಿಧಿ ಯೋಜನೆ ಪ್ರಸಾರ ಮಾಡುವುದು ನಿಲ್ಲಿಸಬೇಕು ಹಾಗೂ ಏಪ್ರಿಲ್ ೧೨, ೨೦೧೯ ರಂದು ಚುನಾವಣೆ ಆಯೋಗಕ್ಕೆ ನೀಡಿರುವ ಆದೇಶದ ನಂತರ ಬ್ಯಾಂಕಿನಿಂದ ಇಲ್ಲಿಯವರೆಗೆ ಎಷ್ಟು ಚುನಾವಣೆ ನಿಧಿ ಬಾಂಡ್ ನೀಡಿದೆ ? ಇದರ ವಿಸ್ತೃತ ಮಾಹಿತಿ ನೀಡಬೇಕೆಂದು ಆದೇಶ ನೀಡಿದೆ. ವಿಶೇಷವೆಂದರೆ ಏಪ್ರಿಲ್ ೨೦೧೯ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಚುನಾವಣೆ ಬಾಂಡ್ ಯೋಜನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

ಚುನಾವಣೆ ನಿಧಿ ಯೋಜನೆ ಅಂದರೆ ಏನು ?

೨೦೧೮ ರಲ್ಲಿ ಕೇಂದ್ರದಲ್ಲಿ ಭಾಜಪ ಸರಕಾರವು ಈ ಯೋಜನೆಗೆ ಚಾಲನೆ ನೀಡಿತ್ತು. ರಾಜಕೀಯ ಪಕ್ಷಗಳಿಗೆ ನಿಧಿ ನೀಡುವ ಮಾಧ್ಯಮವೆಂದರೆ ಚುನಾವಣೆ ಬಾಂಡ್ ಆಗಿದೆ. ಈ ಯೋಜನೆಯ ಮಾಧ್ಯಮದಿಂದ ನಿಧಿ ನೀಡುವವರ ಹೆಸರು ರಹಸ್ಯವಾಗಿ ಇಟ್ಟು ಯಾವುದೇ ರಾಜಕೀಯ ಪಕ್ಷಕ್ಕೆ ನಿಧಿ ನೀಡುವ ಸೌಲಭ್ಯ ಒದಗಿಸಿತ್ತು. ಕೇವಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಶಾಖೆಯಲ್ಲಿ ವರ್ಷದಲ್ಲಿ ಪೂರ್ವ ನಿರ್ಧರಿಸಿರುವ ದಿನಗಳಲ್ಲಿ ಈ ಬಾಂಡ್ ಗಳ ಪ್ರಸಾರ ಮಾಡುತ್ತಿದ್ದರು. ಇದರ ಸ್ವರೂಪ ಪ್ರಾಮಿಸರಿ ನೋಟಿನಂತೆ ಇರುತ್ತದೆ. ಈ ಬಾಂಡಿನ ಮೌಲ್ಯ ೧ ಸಾವಿರ, ೧೦ ಸಾವಿರ, ೧ ಲಕ್ಷ, ೧೦ ಲಕ್ಷ ಮತ್ತು ೧ ಕೋಟಿ ಅಷ್ಟು ಇತ್ತು. ಈ ಬಾಂಡ್ ಸಂಬಂಧಿತ ವ್ಯಕ್ತಿ ಅಥವಾ ಉದ್ಯೋಗ ಸಮೂಹ ಖರೀದಿಸಿ ಅವರು ಅವನ್ನು ಇಷ್ಟ ಇರುವ ರಾಜಕೀಯ ಪಕ್ಷಕ್ಕೆ ನೀಡುತ್ತಿದ್ದರು. ಈ ಬಾಂಡ್ ೧೫ ದಿನದಲ್ಲಿ ಹಣದಲ್ಲಿ ಬದಲಾಯಿಸಲು ರಾಜಕೀಯ ಪಕ್ಷಗಳಿಗೆ ಸವಲತ್ತು ನೀಡಿತ್ತು.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಇವರಿಂದ ಭಾಜಪದ ಕುರಿತು ಟೀಕೆ

ಸರ್ವೋಚ್ಚ ನ್ಯಾಯಾಲಯವು ಚುನಾವಣೆ ನಿಧಿ ಯೋಜನೆ ರದ್ದುಪಡಿಸಿದ ನಂತರ ರಾಹುಲ್ ಗಾಂಧಿ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ, ನರೇಂದ್ರ ಮೋದಿ ಇವರ ಭ್ರಷ್ಟ ವ್ಯವಹಾರದ ಇನ್ನೊಂದು ಸಾಕ್ಷಿ ಬೆಳಕಿಗೆ ಬಂದಿದೆ. ಭಾಜಪವು ಚುನಾವಣೆ ನಿಧಿಯ ಮಾಧ್ಯಮದಿಂದ ಲಂಚ ಮತ್ತು ದಲ್ಲಾಳಿ ಸ್ವೀಕರಿಸುವ ಮಾಧ್ಯಮವಾಗಿಸಿಕೊಂಡಿತ್ತು. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಇಂದು ಅದು ಸಾಬೀತು ಆಗಿದೆ ಎಂದು ಹೇಳಿದರು.

ಮೋದಿ ಸರಕಾರವು ಲಂಚ, ದಲ್ಲಾಳಿ ಮತ್ತು ಕಪ್ಪು ಹಣ ಮರೆಮಾಚುವುದಕ್ಕಾಗಿ ಚುನಾವಣ ನಿಧಿಯ ಯೋಜನೆ ತಂದಿತ್ತು. ಚುನಾವಣೆ ನಿಧಿಯ ಮಾಧ್ಯಮದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಭ್ರಷ್ಟಾಚಾರದ ಹೊಸ ಪರಿಪಾಠ ಆರಂಭಿಸಿದ್ದರು. ಅದು ದೇಶದ ಎದುರು ಇಂದು ಬಹಿರಂಗವಾಯಿತು. ಪ್ರಧಾನಮಂತ್ರಿ ಇವರ ಭ್ರಷ್ಟ ನೀತಿಗಳು ದೇಶಕ್ಕೆ ಅಪಾಯಕಾರಿ ಆಗಿದೆ, ಎಂದು ಕಾಂಗ್ರೆಸ್ ಹೇಳಿದೆ.

ಸಂಪಾದಕೀಯ ನಿಲುವು

ಯಾವ ಪಕ್ಷದ ಗುರುತು ಭ್ರಷ್ಟಾಚಾರ ಇರುವುದು ಅಂತಹ ಕಾಂಗ್ರೆಸ್ ಪಕ್ಷವು ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವುದು ಇದು ಹಾಸ್ಯಾಸ್ಪದವಾಗಿದೆ !