ಮುಸ್ಲಿಂ ಬಾಹುಳ್ಯವಿರುವ ಕಝಾಕಿಸ್ತಾನದ ಶಾಲೆಗಳಲ್ಲಿ ಹಿಜಾಬ್ ನಿಷೇಧ ! 

ಕಝಾಕಿಸ್ತಾನ್ (ಅಸ್ತಾನಾ) – ರಾಜಸ್ಥಾನದ ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲು ಪ್ರಯತ್ನ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ ಭಾಜಪ ಸರಕಾರವಿರುವಾಗ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು, ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ತೆಗೆದುಹಾಕಲಾಯಿತು. ಮುಸಲ್ಮಾನರಿಂದ ಹಿಜಾಬ ನಿಷೇಧಕ್ಕೆ ವಿರೋಧ ವ್ಯಕ್ತವಾಗುತ್ತಿರುವಾಗ, ರಷ್ಯಾದಿಂದ ಪ್ರತ್ಯೇಕವಾಗಿರುವ ಮುಸಲ್ಮಾನ ಬಹುಸಂಖ್ಯಾತವಿರುವ ಕಝಾಕಿಸ್ತಾನ್‌ದ ಶಾಲೆಗಳಲ್ಲಿ ಮಾತ್ರ ಹಿಜಾಬ್ ಧರಿಸುವುದನ್ನು ಸರಕಾರ ನಿಷೇಧಿಸಿದೆ. ಈ ನಿಷೇಧ ವಿದ್ಯಾರ್ಥಿನಿ ಮತ್ತು ಶಿಕ್ಷಕಿ ಇಬ್ಬರಿಗೂ ಅನ್ವಯಿಸುತ್ತದೆ. ಮುಸಲ್ಮಾನ ಬಹುಸಂಖ್ಯಾತವಿರುವಾಗಲೂ ಕಝಾಕಿಸ್ತಾನ ಜಾತ್ಯತೀತ ದೇಶವಾಗಿದೆ. ಇಲ್ಲಿ ಸರಿಸುಮಾರು ಶೇ. 70 ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಸರಕಾರದ ನಿರ್ಣಯದ ವಿರುದ್ಧ ಅಲ್ಲಿನ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು; ಆದರೆ ಸರಕಾರ ಹಿಂದಕ್ಕೆ ಬಗ್ಗಲಿಲ್ಲ.

ಕಝಾಕಿಸ್ತಾನ್ ಸರಕಾರವು ಶಾಲಾ ಸಮವಸ್ತ್ರದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ. ಯಾವುದೇ ನಿರ್ದಿಷ್ಟ ಚಿಹ್ನೆಯು ಯಾವ ಧರ್ಮಕ್ಕೆ ಸೇರಿದೆ ಎಂಬುದನ್ನು ತೋರಿಸುತ್ತದೆ. ಇದು ಶಾಲೆಯಲ್ಲಿ ಸರಿಯಲ್ಲ. ಕಾನೂನಿನ ಮುಂದೆ ಎಲ್ಲಾ ಧರ್ಮಗಳ ಸಮಾನತೆಯನ್ನು ಖಾತ್ರಿಪಡಿಸುವುದು ಅವಶ್ಯಕವಾಗಿದೆ. ಕಝಾಕ ಸರಕಾರವು ಜಾತ್ಯತೀತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿಷೇಧ ಶಾಲೆಗಳ ಹೊರಗೆ ಅನ್ವಯವಾಗುವುದಿಲ್ಲ.

ಕಝಾಕಿಸ್ತಾನ್ ಜಾತ್ಯತೀತ ರಾಷ್ಟ್ರವಾಗಿದೆ ಮತ್ತು ಮುಂದೆಯೂ ಇರಲಿದೆ ! – ಅಧ್ಯಕ್ಷ ಕಸ್ಸಿಮ್-ಜೋಮಾರ್ಟ್ ಟೋಕಾಯೇವ

ಈ ಸಂದರ್ಭದಲ್ಲಿ ಕಝಾಕಿಸ್ತಾನ್ ಅಧ್ಯಕ್ಷ ಕಸ್ಸಿಮ್-ಜೋಮಾರ್ಟ್ ಟೊಕಾಯೆವ್ ಮಾತನಾಡಿ, ನಾವು ಜಾತ್ಯತೀತ ದೇಶದವರಾಗಿದ್ದೇವೆ ಮತ್ತು ನಾವು ಹಾಗೆಯೇ ಇರುತ್ತೇವೆ. ಶಾಲೆಯು ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ಇಲ್ಲಿ ಮಕ್ಕಳು ಜ್ಞಾನವನ್ನು ಪಡೆಯಲು ಬರುತ್ತಾರೆ. ಧಾರ್ಮಿಕ ಶ್ರದ್ಧೆ ಪ್ರತಿಯೊಬ್ಬರ ವೈಯಕ್ತಿಕ ವಿಷಯವಾಗಿದೆ. ನಮ್ಮ ದೇಶದ ಕಾನೂನು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಮಕ್ಕಳು ದೊಡ್ಡವರಾದಾಗ ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಬೇಕು ಎಂದು ನನಗೆ ಅನಿಸುತ್ತದೆಯೆಂದು ಹೇಳಿದರು.

ಸಂಪಾದಕೀಯ ನಿಲುವು

ತಾವು ಇಸ್ಲಾಂ ಧರ್ಮವನ್ನು ಹೆಚ್ಚು ಪಾಲಿಸುತ್ತೇವೆಂದು ತಿಳಿಯುವ ಭಾರತದ ಮತಾಂಧ ಮುಸಲ್ಮಾನರಿಗೆ ಇದು ತಪರಾಕಿಯಾಗಿದೆ !