ಹಲ್ದ್ವಾನಿಯಲ್ಲಿ (ಉತ್ತರಾಖಂಡ) ಅಕ್ರಮ ಮಸೀದಿ ಜಾಗದಲ್ಲಿ ಪೋಲೀಸ್ ಠಾಣೆ ನಿರ್ಮಾಣ !

  • ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !

  • ಮತಾಂಧರಿಂದ ಹಲ್ಲೆಗೊಳಗಾದ ೨ ಮಹಿಳಾ ಪೋಲೀಸರಿಂದ ಉದ್ಘಾಟನೆ !

ಡೆಹರಾಡೂನ್ (ಉತ್ತರಾಖಂಡ) – ಫೆಬ್ರವರಿ ೮ ರಂದು ರಾಜ್ಯದ ಹಲ್ದ್ವಾನಿಯ ಬನಭೂಲಪುರ ಪ್ರದೇಶದಲ್ಲಿ ಮತಾಂಧ ಮುಸಲ್ಮಾನರು ಗಲಭೆ ನಡೆಸಿದ್ದರು. ಸ್ಥಳೀಯ ಆಡಳಿತವು ಬುಲ್ಡೋಜರ್‌ಮೂಲಕ ಅಲ್ಲಿನ ಕಾನೂನುಬಾಹಿರ ಮಸೀದಿ ಮತ್ತು ಮದರಸಾಗಳನ್ನು ಕೆಡವಿದ ನಂತರ ಆಕ್ರೋಶಗೊಂಡ ಮುಸ್ಲೀಮರು ಪೋಲೀಸರ ಮೇಲೆ ದಾಳಿ ಮಾಡಿದರು. ಆ ವೇಳೆ ಅವರು ಪೋಲೀಸರ ಶಸ್ತ್ರಾಸ್ತ್ರಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಈ ದಾಳಿಯಲ್ಲಿ ೫ ಗಲಭೆಕೋರರು ಸೇರಿದಂತೆ ೬ ಜನರು ಸಾವನ್ನಪ್ಪಿದ್ದಾರೆ ಹಾಗೂ ೩೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆನಂತರ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ‘ಎಲ್ಲಿ ಆಕ್ರಮ ಮಸೀದಿ ಇತ್ತೋ, ಅಲ್ಲಿ ಪೋಲೀಸ್ ಠಾಣೆ ನಿರ್ಮಿಸಲಾಗುವುದು‘, ಎಂದು ಘೋಷಣೆ ಮಾಡಿದರು. ಅದರಂತೆ ೨೪ ಗಂಟೆಯೊಳಗೆ ಅಲ್ಲಿ ಪೋಲೀಸ್ ಚೌಕಿ ನಿರ್ಮಿಸಲಾಗಿದೆ. ಹಿಂಸಾಚಾರದಲ್ಲಿ ಗಾಯಗೊಂಡ ಇಬ್ಬರು ಮಹಿಳಾ ಪೋಲಿಸರಿಂದ ಈ ಪೋಲೀಸ್ ಠಾಣೆಯ ಉದ್ಘಾಟನೆ ಮಾಡಲಾಗಿದೆ. ಈ ಸ್ಥಳದಲ್ಲಿ ಈಗ ೨೪ ಗಂಟೆ ಪೋಲೀಸ್ ಬಂದೋಬಸ್ತ್ ಇರುವುದು. ನೈನಿತಾಲ್‌ನ ಹಿರಿಯ ಪೋಲೀಸ್ ಆಯುಕ್ತ ಪ್ರಹ್ಲಾದ ನಾರಯಣ ಮೀನಾ ಇವರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಪೋಲೀಸ್ ಚೌಕಿಯ ಜವಾಬ್ದಾರಿಯನ್ನು ಮುಖ್ಯ ಹವಾಲ್ದಾರರಿಗೆ ವಹಿಸಲಾಗಿದ್ದು, ಅವರೊಂದಿಗೆ ೪ ಹವಾಲ್ದಾರರು ಮತ್ತು ಸಿಪಾಯಿ ಕರ್ಮಚಾರಿಗಳನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದನೆಯನ್ನು ನಾಶಮಾಡಲು ಹೇಗೆ ಪ್ರಯತ್ನ ಮಾಡಬೇಕು ?, ಇದನ್ನು ಉತ್ತರಪ್ರದೇಶ ಮತ್ತು ಅಸ್ಸಾಂ ನಂತರ ಉತ್ತರಾಖಂಡದ ಹೆಸರು ಮುಂದೆ ಬರುತ್ತಿದೆ. ದೇಶಾದ್ಯಂತ ಈ ರೀತಿಯ ಕಾರ್ಯಾಚರಣೆ ನಡೆಸಿದರೆ, ಕೆಲವೇ ಕೆಲಸಮಯದಲ್ಲಿ ‘ಜಿಹಾದಿ ಭಯೋತ್ಪಾದನೆ‘ಯ ಪೂರ್ಣ ನಾಶವಾಗುವುದರಲ್ಲಿ ಸಂಶಯವಿಲ್ಲ !