ಮಥುರಾದ ಶ್ರೀ ಕೃಷ್ಣನ ಜನ್ಮಸ್ಥಳದ ಸಮೀಪವಿರುವ ಮುಸ್ಲಿಮರ ಗೋರಿ ಹಿಂದೂಗಳಿಗೆ ಸೇರಿದ್ದು ! – ಹಿಂದೂ ವಕೀಲರಿಂದ ಮಾಹಿತಿ

ಮಥುರಾ – ಕಾಶಿಯಲ್ಲಿ ನಡೆದ ಜ್ಞಾನವಾಪಿ ವಿವಾದದ ಹಿನ್ನಲೆಯಲ್ಲಿ ಮಥುರಾದಿಂದ ಹೊಸ ವಿವಾದ ಹುಟ್ಟಿಕೊಂಡಿದೆ. ಮಥುರಾದಲ್ಲಿ ಕೃಷ್ಣನ ಜನ್ಮಸ್ಥಳದ ಬಳಿ ಇರುವ ಮುಸ್ಲಿಂ ಗೋರಿಗಳು ‘ಜ್ಞಾನವಾಪಿ’ (ಹಿಂದೂಗಳ ಸ್ಥಳ) ಎಂದು ಹಿಂದೂ ವಕೀಲರೊಬ್ಬರು ತಿಳಿಸಿದ್ದಾರೆ. ಪೋತ್ರ ಕುಂಡದ ಬಳಿ ಚಕ್ರವತಿ ಸಾಮ್ರಾಟನ ಸಹೋದರ ರಾಜ ಭರ್ತ್ರಿಹರಿಯ ಸಮಾಧಿಯು ಜ್ಞಾಜವಾಪಿಯಾಗಿದೆ ಎಂದು ಹೇಳಲಾಗುತ್ತದೆ.

1. 1987 ರಲ್ಲಿ ಮಥುರಾ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮರುದ್ದೀನ್ ಎಂಬ ತೆರಿಗೆ ಅಧಿಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿ ‘ಜ್ಞಾನವಾಪಿ’ಯನ್ನು ‘ಶಾಹಿ ಬಾವಡಿ’ ಎಂದು ಬದಲಾಯಿಸಿದ್ದ. ನಂತರ ವಕ್ಫ್ ಬೋರ್ಡ್ ವಕ್ಫ್ ನಂ.75 ಆಸ್ತಿ ಎಂದು ಘೋಷಿಸಿತು. ಭರ್ತ್ರಿಹರಿಯ ಸಮಾಧಿಯನ್ನು ‘ಹಜರತ್ ಉಮದರಾಜ್ ಬಾವಡಿವಾಲೆ ಬಾಬಾ’ ಸಮಾಧಿಯಾಗಿ ಪರಿವರ್ತಿಸಲಾಯಿತು. ಪ್ರಸ್ತುತ ಮುಶೀರ್ ಅನ್ಸಾರಿ ಎಂಬ ವ್ಯಕ್ತಿ ಈ ಸಮಾಧಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮುಶೀರ್ ಅನ್ಸಾರಿ ಅವರು, ಈ ಸಮಾಧಿಯ ಮೂರನೇ ತಲೆಮಾರಿನ ಸೇವಕ ಎಂದು ಹೇಳುತ್ತಾರೆ.

2. 1994ರಲ್ಲಿ ಹಿಂದೂ ಪಕ್ಷದ ಯುಕ್ತಿವಾದ ಸರಿ ಎಂದು ಕಂಡ ನಗರಸಭೆ ದಾಖಲೆಗಳಲ್ಲಿ ಸುಧಾರಣೆ ಮಾಡಿತು. 1997ರಲ್ಲಿ ಅಂದಿನ ಅಪರ ಜಿಲ್ಲಾಧಿಕಾರಿ ಹಾಗೂ ವಕ್ಫ್ ಸರ್ವೆ ಅಧಿಕಾರಿ ಆರ್.ಡಿ. ಪಲಿವಾಲ್ ಇವರು ಮುಸ್ಲಿಮರಿಗೆ ಇಲ್ಲಿ ನಮಾಜ್ ಪಠಣ ಮಾಡದಂತೆ ಆದೇಶಿಸಿದರು; ಆದರೆ ಮುಸ್ಲಿಮರು ಇಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರು.

ಪುರಾತತ್ವ ಇಲಾಖೆ ಸಮೀಕ್ಷೆಗೆ ಆಗ್ರಹ ! – ವಕೀಲ ಮಹೇಂದ್ರ ಪ್ರತಾಪ ಸಿಂಗ್

ಈ ಬಗ್ಗೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಲಾಗುವುದು ಎಂದು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಟ್ರಸ್ಟ್ ಮತ್ತು ಜನ್ಮಭೂಮಿ ಪಕ್ಷದ ಅಧ್ಯಕ್ಷ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಜ್ಞಾನವಾಪಿ ಮತ್ತು ಕಾಶಿ ಇಡೀ ಪ್ರಪಂಚದ ಸನಾತನ ಧರ್ಮದ 2 ಪ್ರಮುಖ ಕೇಂದ್ರಗಳಾಗಿವೆ. ಈ ವೇಳೆ ಭಾರತೀಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಮನವಿ ಮಾಡಲಾಗುವುದು. ಕಾಶಿಯಂತೆ ಇಲ್ಲಿಯೂ ಮುಂದೊಂದು ದಿನ ಹಿಂದೂಗಳು ಪೂಜೆ ಸಲ್ಲಿಸುವರು. (ಹಿಂದೂಗಳು ಸಂಘಟಿತರಾಗಿ ತಮ್ಮ ಪರಂಪರೆಯ ತಾಣಗಳನ್ನು ಮರಳಿ ಪಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳೇ ಪಾರಂಪರಿಕ ತಾಣಗಳ ಹಕ್ಕುಗಳನ್ನು ಪಡೆಯಲು ದೀರ್ಘಾವಧಿಯ ಹೋರಾಟಕ್ಕೆ ಸಿದ್ಧರಾಗಿ !