ಶಿಖರ ಭಗ್ನಗೊಳಿಸಿ ಗೋಡೆಯ ಮೇಲೆ ಗುಮ್ಮಟ ಕಟ್ಟಿದರೆ ಅದು ಗಂಗಾ-ಜಮುನಿ ಸಂಸ್ಕೃತಿ ಆಗದು !

ಉತ್ತರಪ್ರದೇಶದಲ್ಲಿನ ವಿಧಾನಸಭೆಯಲ್ಲಿ ಮುಸಲ್ಮಾನರ ಡೋಂಗಿತನ ಬಹಿರಂಗ ಪಡಿಸಿದ ಲೋಕತಾಂತ್ರಿಕ ಪಕ್ಷದ ಅಧ್ಯಕ್ಷ ಮತ್ತು ಸಂಸದ ರಾಜಾ ಭಯ್ಶಾ !

(ಗಂಗಾ-ಜಮುನಿ ಸಂಸ್ಕೃತಿ ಎಂದರೆ ಗಂಗಾ ಮತ್ತು ಯಮುನಾ ನದಿಯ ತೀರದಲ್ಲಿ ವಾಸಿಸುವ ಹಿಂದೂ ಮತ್ತು ಮುಸಲ್ಮಾನರಲ್ಲಿನ ಕಥಿತ ಐಕ್ಯತೆ ತೋರಿಸುವ ಸಂಸ್ಕೃತಿ. ಅದನ್ನು ಪಾಲಿಸಲು ಕೇವಲ ಹಿಂದುಗಳ ಮೇಲೆ ಒತ್ತಡ ಹೇರುತ್ತಾರೆ.)

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶಿಖರ ಧ್ವಂಸಗೊಳಿಸಿ ಗೋಡೆಗಳ ಮೇಲೆ ಗುಮ್ಮಟ ಕಟ್ಟಿದರೆ ಅದು ಗಂಗಾ-ಜಮುನಿ ಸಂಸ್ಕೃತಿ ಆಗದು. ಆಕ್ರಮಣಕಾರರು ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದು ಸ್ಪಷ್ಟವಾಗಿದೆ, ಎಂದು ಉತ್ತರ ಪ್ರದೇಶದಲ್ಲಿನ ಲೋಕತಾಂತ್ರಿಕ ಪಕ್ಷದ ಅಧ್ಯಕ್ಷ ಮತ್ತು ಸಂಸದ ರಘುರಾಜ ಪ್ರತಾಪ ಸಿಂಹ ಅಲಿಯಾಸ್ ರಾಜಾ ಭಯ್ಯ ಇವರು ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಚರ್ಚೆಯಲ್ಲಿ ಮಾತನಾಡುತ್ತಿರುವಾಗ ಹೇಳಿದರು.

‘ಬಾಬರ್ ಮತ್ತು ಔರಂಗಜೇಬ್ ಇವರ ಅನುಕರಣೆ ಮಾಡಿದರೆ, ಎಂದಿಗೂ ಶಾಂತಿ ಸಿಗಲ್ಲ.’ – ಶ್ರೀರಾಮ ಮಂದಿರ, ಕಾಶಿ ವಿಶ್ವನಾಥ ಮಂದಿರ ಮತ್ತು ಶ್ರೀಕೃಷ್ಣ ಜನ್ಮ ಭೂಮಿ ಇವುಗಳನ್ನು ಆಕ್ರಮಣಕಾರರು ಗುರಿ ಮಾಡಿದ್ದರು. – ಸಂಸದ ರಾಜಾ ಭಯ್ಯ

ಸಂಸದ ರಾಜಾ ಭಯ್ಯ ಇವರು ಮಂಡಿಸಿರುವ ಸೂತ್ರಗಳು

೧. ಪ್ರಭು ಶ್ರೀರಾಮನ ಬಗ್ಗೆ ಸಭೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಚರ್ಚೆ ನಡೆಯಿತು. ಲೋಹಿಯಾ ಇವರಿಂದ ಪ್ರತಿವರ್ಷ ರಾಮಾಯಣ ಜಾತ್ರೆಯ ಆಯೋಜನೆ ಸಾಮಾನ್ಯರಿಗಾಗಿ ರಾಮನ ಆದರ್ಶ ಅನುಕರಣೆ ಮಾಡಬೇಕು ಈ ಉದ್ದೇಶದಿಂದ ಮಾಡುತ್ತಿದ್ದರು. ಎಂದು ರಾಮಮನೋಹರ ಲೋಹಿಯಾ ಇವರ ಮೇಲೆ ವಿಶ್ವಾಸ ಇಡುವುವವರು ಕೂಡ ಇದನ್ನು ಸಮ್ಮತಿಸುವರು. (ಲೋಹಿಯಾ ಇವರು ಕಮ್ಯುನಿಸ್ಟ್ ಮತ್ತು ಪ್ರಗತಿಪರ ನಾಯಕರಾಗಿದ್ದರು.)

೨. ಬಾಬರ್, ಗಜನಿ, ಘೋರಿ, ಔರಂಗಜೇಬ್ ಇವರು ದರೋಡೆಕೋರರಾಗಿದ್ದರು, ಎಂದು ಸ್ವತಃ ಲೋಹಿಯಾ ಇವರು ಹೇಳುತ್ತಿದ್ದರು. ರಸ ಖಾನ ಮತ್ತು ರಹೀಮ್ ಇವರು ನಮ್ಮ ಪೂರ್ವಜರಾಗಿದ್ದರು. ಇದು ಇಲ್ಲಿ ಹೇಳುವುದು ಅವಶ್ಯಕವಾಗಿದೆ; ಕಾರಣ ಕಳೆದ ಅನೇಕ ದಿನಗಳಿಂದ ವಾತಾವರಣ ಹದಗೆಡಿಸುವ ಪ್ರಯತ್ನ ನಡೆಯುತ್ತಿರುವುದು ಕಾಣುತ್ತಿದೆ. ಅಷ್ಟೇ ಏಕೆ ಇತ್ತೀಚಿನ ಹಲ್ದ್ವಾನಿಯ ಉದಾಹರಣೆ ನೋಡಿ. ನಮ್ಮ ರಾಜ್ಯದಲ್ಲಿ ಯಾವುದೇ ಅಘಟಿತಘಟಿಸಬಾರದು ಅದಕ್ಕಾಗಿ ಸರಕಾರ ಸಮಗ್ರ ಪ್ರಯತ್ನ ಮಾಡುತ್ತಿದೆ; ಆದರೆ ಎಲ್ಲೋ ವಾತಾವರಣ ಹದಗೆಡಿಸುವ ಪ್ರಯತ್ನ ನಡೆಯುತ್ತಿರುವುದರ ಭಾವನೆಗಳು ವ್ಯಕ್ತವಾಗುತ್ತಿವೆ.

೩. ಜ್ಞಾನವಾಪಿ ಇಲ್ಲಿಯ ವ್ಯಾಸಜಿ ನೆಲಮಾಳಿಗೆಯಲ್ಲಿ ನಡೆಯುವ ಪೂಜೆ ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು. ಈ ಮಾಹಿತಿ ಜಗತ್ತಿನೆದುರು ಬಹಿರಂಗಪಡಿಸಬೇಕು. ೧೯೯೩ ರಲ್ಲಿ ಸ್ಥಳೀಯ ಆಡಳಿತದಿಂದ ಇದನ್ನು ನಿಷೇಧಿಸಲಾಗಿತ್ತು. ಈ ಪೂಜೆಗೆ ಯಾವುದೇ ನ್ಯಾಯಾಲಯ ನಿಷೇಧಿಸಿರಲಿಲ್ಲ.

೪. ಈ ಸದನದ ಮಾಧ್ಯಮದಿಂದ ನಾವು ವ್ಯಾಸಜಿಯ ನೆಲಮಾಳಿಗೆಯ ಬೀಗದ ಕೈಯನ್ನು ೩೧ ವರ್ಷದಿಂದ ಜೋಪಾನವಾಗಿ ಇಟ್ಟಿರುವ ಪುರೋಹಿತರೆಗೆ ಕೂಡ ಅಭಿನಂದನೆ ಸಲ್ಲಿಸುವವರಿದ್ದೇವೆ; ಕಾರಣ ಒಂದಲ್ಲ ಒಂದು ದಿನ ಸರಕಾರ ಬಂದು ಈ ಬೀಗವನ್ನು ತೆರೆಯುವುದು ಎಂಬ ವಿಶ್ವಾಸ ಅವರಿಗೆ ಇತ್ತು.

೫. ಮೊಟ್ಟಮೊದಲು ಬಾರಿಗೆ ಅಲ್ಲಾಮ ಇಕ್ಬಾಲ್ ಈ ವ್ಯಕ್ತಿ, ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದ್ದನು. ‘ಮುಸಲ್ಮಾನರಿಗೆ ಬೇರೆ ದೇಶದ ಅವಶ್ಯಕತೆ ಇದೆ’, ಎಂದು ಪಾಕಿಸ್ತಾನದ ವೈಚಾರಿಕ ಜನಕ ಡಾ. ಜಿನ್ನಾ ಇವರು ಕೂಡ ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು, ಇದರಿಂದಲೇ ವಿಭಜನೆಯಾಯಿತು. ‘ಸಾರೆ ಜಹಾ ಸೆ ಅಚ್ಚಾ’ ಈ ಕವಿತೆ ಕೂಡ ಅರ್ಥದಲ್ಲಿಯೇ ಅರ್ಥ ಕಳೆದುಕೊಂಡಿತು. ೧೯೧೦ ರಲ್ಲಿ ಬರೆದಿರುವ ಈ ಕವಿತೆಯಲ್ಲಿ, ಭಾರತ, ಚೀನಾ, ಅರಬ ಈ ಎಲ್ಲವೂ ನಮ್ಮ ರಾಷ್ಟ್ರಗಳೇ ಆಗಿವೆ ಮತ್ತು ಈಗ ಅವು ಇಸ್ಲಾಮಿ ರಾಷ್ಟ್ರಗಳಾಗಿವೆ.

೬. ನಮ್ಮ ಜೀವಿತಾವಧಿಯಲ್ಲಿ ಭಗವಂತ ಶ್ರೀರಾಮನ ಭವ್ಯ ಮಂದಿರ ನೋಡುವ ಸೌಭಾಗ್ಯ ನಮಗೆ ಲಭಿಸಿದೆ. ಆದಿ ಶಂಕರಾಚಾರ್ಯರ ನಂತರ ಸನಾತನ ಧರ್ಮದ ಉತ್ಥಾನ, ಹಿಂದೂ ಉತ್ಥಾನದ ಕಾರ್ಯ ಯಾರಾದರೂ ಮಾಡುತ್ತಿದ್ದರೆ ಅದು ನರೇಂದ್ರ ಮೋದಿ ಅವರು ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ರಾಜಾ ಭಯ್ಯ ಇವರಿಗೆ ಈಗ ಇದರ ನೆನಪಾಗಿದೆ, ಆದರೂ ಪರವಾಗಿಲ್ಲ ! ಆದರೆ ಈಗ ಅವರು ಜ್ಞಾನವಾಪಿ ಮತ್ತು ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !