ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೂ, ಇಮ್ರಾನ್ ಖಾನ್ ಅವರನ್ನು ಬೆಂಬಲಿಸುವ ಪಕ್ಷೇತರ ಅಭ್ಯರ್ಥಿಗಳು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮುಂದಿದ್ದಾರೆ, ನವಾಝ ಶರೀಫರ ಪಾಕಿಸ್ತಾನ ಮುಸ್ಲಿಂ ಲೀಗ ಈ ಪಕ್ಷಕ್ಕೆ 71 ಮತ್ತು ಬಿಲಾವಲ ಭುಟ್ಟೊ ಝರದಾರಿ ಇವರ ಪಾಕಿಸ್ತಾನ ಪೀಪಲ್ಸ ಪಾರ್ಟಿ ಈ ಪಕ್ಷಕ್ಕೆ 53 ಸ್ಥಳಗಳಲ್ಲಿ ಗೆಲುವು ಸಿಕ್ಕಿದೆ. ಪಾಕಿಸ್ತಾನದಲ್ಲಿ ಒಟ್ಟು 336 ಸ್ಥಾನಗಳಿವೆ. ಇದರಲ್ಲಿ 265 ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಂದು ಸ್ಥಾನದ ಚುನಾವಣೆಯನ್ನು ಮುಂದೂಡಲಾಗಿದೆ. ಇನ್ನುಳಿದ 70 ಸ್ಥಾನಗಳು ಮೀಸಲಿಡಲಾಗಿದೆ. ಸರಕಾರ ಸ್ಥಾಪನೆಗಾಗಿ 134 ಸ್ಥಾನಗಳ ಬಹುಮತ ಸಿಗುವುದು ಆವಶ್ಯಕವಾಗಿದೆ. ಈ ಮತ ಎಣಿಕೆಯಲ್ಲಿ ಮೋಸದಾಟ ನಡೆದಿದೆಯೆಂದು ಎಲ್ಲ ಪಕ್ಷಗಳೂ ಆರೋಪಿಸಿವೆ.
ಇಮ್ರಾನ್ ಖಾನ್ ಅವರ ತೆಹರಿಕ್-ಇ-ಇನ್ಸಾಫ್ ಪಕ್ಷದ ಕಾರ್ಯಕರ್ತರು ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಗಳು ರಾತ್ರಿಯ ವರೆಗೆ ಗೆಲುವಿನ ದಿಕ್ಕಿನಲ್ಲಿ ಮುಂದುವರಿದಿದ್ದರು; ಆದರೆ ಬೆಳಿಗ್ಗೆ ಅನೇಕ ಅಭ್ಯರ್ಥಿಗಳು ಸೋತರು ಎಂದು ಘೋಷಿಸಲಾಯಿತು. ಚುನಾವಣೆಯಲ್ಲಿ ಹಗರಣ ನಡೆದರೂ ನಾವು ಹಿಂದೆ ಸರಿಯುವುದಿಲ್ಲ. ನಮಗೆ 150 ಕ್ಕಿಂತ ಅಧಿಕ ಸ್ಥಾನ ಸಿಗಬಹುದು. ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ರಸ್ತೆಯ ಮೇಲೆ, ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಯಿತು. ಕಾರ್ಯಕರ್ತರಲ್ಲಿ ಭಯ ಹುಟ್ಟಿಸಲಾಯಿತು. ಕೆಲವರನ್ನು ಕಾರಾಗೃಹಕ್ಕೆ ದಬ್ಬಲಾಯಿತು; ಆದರೆ ನಮ್ಮ ದಿಕ್ಕು ಕುಂದಿಲ್ಲ. ನಮ್ಮ ಪಕ್ಷದ ಜನರು ನವಾಝ ಶರೀಫ ಅಥವಾ ಬಿಲಾವಲ ಭುಟ್ಟೋ ಜೊತೆ ಹೋಗುವುದಿಲ್ಲ ಎಂದು ಹೇಳಿದರು.