ಸಮವಸ್ತ್ರದ ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮ !

ರಾಜಾಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರ ಇವರಿಂದ ಎಚ್ಚರಿಕೆ !

ರಾಜಾಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರ

ಜೈಪುರ (ರಾಜಸ್ಥಾನ) – ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಅನುಸರಿಸಬೇಕು. ಶಾಲಾ ಸಮವಸ್ತ್ರವನ್ನು ಬಿಟ್ಟು ಬೇರೆ ಯಾವುದೇ ಬಟ್ಟೆಗಳನ್ನು ಧರಿಸಿ ಬರುವುದು ಅಶಿಸ್ತು ಆಗಿದೆ. ಒಬ್ಬ ವಿದ್ಯಾರ್ಥಿ ಹನುಮಂತನ ವೇಷ ಧರಿಸಿ ಬಂದರೆ ಹೇಗಾಗಬಹುದು ? ಆದ್ದರಿಂದ ಶಾಲೆಯಲ್ಲಿ ಎಲ್ಲರೂ ಸಮವಸ್ತ್ರದ ನಿಯಮಗಳನ್ನು ಪಾಲಿಸಬೇಕು, ಇದು ನಮ್ಮ ವಿನಂತಿಯಾಗಿದೆ. ಯಾರು ಸಮವಸ್ತ್ರದ ನಿಯಮ ಪಾಲಿಸುವುದಿಲ್ಲ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಎಂದು ರಾಜಾಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರರವರು ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ರಾಜಸ್ಥಾನದ ಒಂದು ಶಾಲೆಯಲ್ಲಿ ಮುಸಲ್ಮಾನ್ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಬಂದಿದ್ದರಿಂದ ವಿವಾದವಾಗಿತ್ತು. ಆನಂತರ ಮದನ ದಿಲಾವರ ಅವರು ಈ ರೀತಿ ಸಮವಸ್ತ್ರದ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಎಚ್ಚರಿಕೆ ನೀಡಿದ್ದರು.

ಸಂಪಾದಕೀಯ ನಿಲುವು

ಹೀಗೆ ಎಚ್ಚರಿಕೆ ಏಕೆ ಕೊಡಬೇಕಾಗುತ್ತದೆ ? ವಿದ್ಯಾರ್ಥಿಗಳ ಪಾಲಕರಿಗೆ ಇದು ತಿಳಿಯುವುದಿಲ್ಲವೇ ?