ಅಧ್ಯಯನದ ನಂತರ ತೀರ್ಮಾನ : ಗೂಗಲನ ‘ಜೆಮಿನಿ’ AI ಅಪ್ಲಿಕೇಶನ್ ‘ಚಾಟ ಜಿಪಿಟಿ’ ಗಿಂತ ಹೆಚ್ಚು ಉತ್ತಮ !

  • ಗೂಗಲ್ ನಿಂದ ತನ್ನ ‘ಬಾರ್ಡ’ ಸಿಸ್ಟಂ ನಿವೃತ್ತಿ !

  • ತಂತ್ರಜ್ಞಾನ ಸುದ್ದಿ

ನ್ಯೂಯಾರ್ಕ್ (ಅಮೇರಿಕಾ) – ಪ್ರಸ್ತುತ ಜಗತ್ತು ‘ಆರ್ಟಿಫಿಶಿಯಲ್ ಇಂಟೆಲಿಜನ್ಸ್’ (ಎ.ಐ) ಅಂದರೆ ಕೃತ್ರಿಮ ಬುದ್ಧಿಮತ್ತೆಯ ಕಡೆಗೆ ವಾಲುತ್ತಿದೆ. ಅದರಲ್ಲಿಯೂ ‘ಚಾಟ್‌ಜಿಪಿಟಿ’ ಅಥವಾ ಎಐ ಸಿಸ್ಟಮ್ ಅನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ನಮ್ಮ ಕೆಲಸವನ್ನು ಹಲವು ಪಟ್ಟುಗಳಲ್ಲಿ ವೇಗಗೊಳಿಸಲು ಇದನ್ನು ಉಪಯೋಗಿಸಲಾಗುತ್ತಿದೆ. ಇಂತಹದರಲ್ಲಿ ಗೂಗಲ್ ‘ಚಾಟ್‌ಜಿಪಿಟಿ’ಗೆ ಪೈಪೋಟಿ ನೀಡಲು ‘ಜೆಮಿನಿ’ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಅನೇಕ ತಪಾಸಣೆಯಲ್ಲಿ ಜೆಮಿನಿಯು `ಚಾಟಜಿಪಿಟಿ’ ಗಿಂತ ಹೆಚ್ಚು ಉತ್ತಮವಾಗಿದೆಯೆಂದು ತಜ್ಞರ ಅಧ್ಯಯನದ ವರದಿ ಬಹಿರಂಗವಾಗುತ್ತಿದೆ.

ಗೂಗಲ್‌ನ ‘ಜೆಮಿನಿ ಎಐ ಆಪ್’ ಸಿಸ್ಟಮ್ ಎಂದರೇನು ?

1. ‘ಜೆಮಿನಿ ಎಐ ಆಪ್’ ಎಂಬುದು ‘ಬಾರ್ಡ್’ ಮತ್ತು ‘ಡ್ಯುಯೆಟ್ ಎಐ’ ಈ ಪ್ರಣಾಲಿಯ ಸುಧಾರಿತ ವೈಶಿಷ್ಟ್ಯಗಳ ಸಂಯೋಜನೆಯಾಗಿದೆ.

2. ಬಳಕೆದಾರರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವ ಮೂಲಕ, ಇದು ‘ಕೋಡಿಂಗ್’ ಮತ್ತು ಉದ್ಯೋಗ ಹುಡುಕಾಟದಲ್ಲಿರುವವರಿಗೆ ಸಂದರ್ಶನಗಳಲ್ಲಿ ಸಹಾಯ ಮಾಡುತ್ತದೆ.

3. ವಿವಿಧ `ವರ್ಜನ’(ಆವೃತ್ತಿ)ಗಳಲ್ಲಿ ಲಭ್ಯವಿರುವ ಈ ಆಪ್ `ಗೂಗಲ ವನ್’ ನ ‘ಪ್ರೀಮಿಯಂ ಪ್ಲಾನ್’ ನೊಂದಿಗೆ ಲಭ್ಯವಿದೆ. 100 ಜಿಬಿ ಪ್ರಾರಂಭದ ಯೋಜನೆಯು ತಿಂಗಳಿಗೆ 130 ರೂಪಾಯಿ ಇದೆ ಹಾಗೂ 5 ಟಿಬಿ (5000 ಜಿಬಿ) ಯೋಜನೆ ತಿಂಗಳಿಗೆ 1 ಸಾವಿರ 930 ರೂಪಾಯಿ ಇಡಲಾಗಿದೆ. ಸೀಮಿತ ಬಳಕೆಗೆ ಉಚಿತ ಆವೃತ್ತಿಯು ಲಭ್ಯವಿದೆ.

‘ಚಾಟ್‌ಜಿಪಿಟಿ’ ಮತ್ತು ‘ಜೆಮಿನಿ’ ನಡುವಿನ ಹೋಲಿಕೆ !

1. ವಿಷಯದ ಆಳವಾದ ಅಭ್ಯಾಸ : ಎರಡೂ ಎ ಐ ವ್ಯವಸ್ಥೆಗಳ ಕೆಲವು ಸಂಕಲ್ಪನೆ ಸ್ಪಷ್ಟಪಡಿಸಲು ಪ್ರಶ್ನೆಗಳನ್ನು ಕೇಳಲಾಯಿತು. ಇದರಲ್ಲಿ ಜೆಮಿನಿ ಪರಿಕಲ್ಪನೆಯನ್ನು ಆಳವಾಗಿ ವಿವರಿಸಲಾಗಿದೆ. ಚಾಟಜಿಪಿಟಿ ಮಾತ್ರ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಮತ್ತು ಎರಡು ಸಲ `ಕ್ರ್ಯಾಶ’ ಆಯಿತು. (ಸ್ಥಗಿತಗೊಂಡಿದೆ)

2. ಒಂದು ಸಮಯದಲ್ಲಿ ಒಂದಕ್ಕಿಂತ ಅಧಿಕ ಕಾರ್ಯವನ್ನು ಮಾಡುವ ಕ್ಷಮತೆ( ಮಲ್ಟಿಟಾಸ್ಕಿಂಗ) : ಜೆಮಿನಿ ಒಂದೇ ಸಮಯದಲ್ಲಿ ಸಾರಾಂಶ, ಕೋಡ, ಆಡಿಯೋ, ಇಮೇಜ್ ಇತ್ಯಾದಿಗಳಲ್ಲಿ ಕೆಲಸ ಮಾಡಬಹುದು, ಆದರೆ ‘ಚಾಟಜಿಪಿಟಿ’ ಯಲ್ಲಿ ಈ ವೈಶಿಷ್ಟ್ಯವಿಲ್ಲ ಜೆಮಿನಿ ಇಮೇಜಸ ಮತ್ತು ಆಡಿಯೋಗಳಿಗೆ ಪ್ರತಿಕ್ರಿಯಿಸುತ್ತದೆ.

3. ತಾಂತ್ರಿಕ ಪರೀಕ್ಷೆ : ‘ಡೀಪ್‌ಮೈಂಡ್’ ಈ ಕಂಪನಿಯ ವರದಿಯ ಪ್ರಕಾರ, ಜೆಮಿನಿಯು ‘ಮ್ಯಾಸೀವ್ ಮಲ್ಟಿಟಾಸ್ಕ್ ಲ್ಯಾಂಗ್ವೇಜ್ ಅಂಡರ್‌ಸ್ಟ್ಯಾಂಡಿಂಗ್ ಬೆಂಚ್‌ಮಾರ್ಕ್’ ಪರೀಕ್ಷೆಯಲ್ಲಿ ಶೇ. 90.04 ಅಂಕಗಳನ್ನು ಗಳಿಸಿದೆ. ಮಾನವ ತಜ್ಞರ ಕಾರ್ಯಕ್ಷಮತೆಯಲ್ಲಿ ಶೇ. 89.8 ರಷ್ಟು ಗಳಿಸಿದೆ. ಹಾಗೂ ಚಾಟಜಿಪಿಟಿಗೆ ಶೇ.86.4 ಅಂಕ ಪಡೆದಿದೆ.

4. ನಿಖರತೆಯಲ್ಲಿ ಜೆಮಿನಿ ಮತ್ತು ಸೃಜನಾತ್ಮಕ ಬರವಣಿಗೆಯಲ್ಲಿ ಚಾಟಜಿಪಿಟಿ ಕೌಶಲ್ಯ : ವಾಸ್ತವಿಕ ನಿಖರತೆ ಮತ್ತು ತಾರ್ಕಿಕ ಸಾಮರ್ಥ್ಯಕ್ಕೆ ಆದ್ಯತೆ ನೀಡಲಾಗುತ್ತದೆ, ಆದರೆ ಇದರಲ್ಲಿ ಜೆಮಿನಿ ಹೆಚ್ಚು ಉತ್ತಮವಾಗಿದೆ. ಮತ್ತೊಂದೆಡೆ, ಸೃಜನಶೀಲ ಬರವಣಿಗೆ, ಕಥೆ ಹೇಳುವಿಕೆ ಮತ್ತು ಉಪಯೋಗಿಸುವ ದೃಷ್ಟಿಯಿಂದ ಚಾಟಜಿಪಿಟಿ ಹೆಚ್ಚು ಉತ್ತಮವಾಗಿದೆ.