ಮಲೇಷ್ಯಾದ ಕೆಲಾಂಟಾನ ರಾಜ್ಯ ಅಂಗಿಕರಿಸಿದ್ದ 16 ಷರಿಯತ ಕಾನೂನುಗಳು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

ಮುಸ್ಲಿಂ ದೇಶಗಳಲ್ಲಿಯೇ ಶರಿಯತ ಕಾನೂನು ರದ್ದಾಗುತ್ತಿದ್ದರೆ, ಭಾರತದಲ್ಲಿ ಮುಸಲ್ಮಾನರಿಗೆ ಪ್ರತ್ಯೇಕ ಕಾಯಿದೆ ಏಕೆ ಬೇಕು ?

ಕೌಲಾಲಂಪುರ (ಮಲೇಷ್ಯಾ) – ಮಲೇಷ್ಯಾದ ಸರ್ವೋಚ್ಚ ನ್ಯಾಯಾಲಯವು ಕೆಲಾಂಟನ್ ರಾಜ್ಯ ಅನುಮೋದಿಸಿದ್ದ 16 ಶರಿಯತ ಕಾನೂನುಗಳು ಸಂವಿಧಾನವಿರೋಧಿಯಾಗಿವೆಯೆಂದು ಘೋಷಿಸಿ ಅವುಗಳನ್ನು ರದ್ದುಗೊಳಿಸಿದೆ. `ಈ ಕಾನೂನಿನಿಂದ ದೇಶದ ಇತರೆ ಪ್ರದೇಶಗಳಲ್ಲಿ ಜಾರಿಯಿರುವ ಸಮಾನ ಶರಿಯತ ಕಾಯಿದೆಯ ಮೇಲೆ ಪರಿಣಾಮ ಬೀರಬಹುದು’ ಎಂದು ನ್ಯಾಯಾಲಯ ಹೇಳಿದೆ.

1. ಕುಟುಂಬದ ವ್ಯಭಿಚಾರ, ಜೂಜು, ಲೈಂಗಿಕ ಕಿರುಕುಳ ಮತ್ತು ಪ್ರಾರ್ಥನಾ ಸ್ಥಳಗಳ ವಿಡಂಬನೆಯಂತಹ ಅಪರಾಧಗಳು ನಾಗರಿಕ ಕಾನೂನಿನ ಅಡಿಯಲ್ಲಿ ಬರುತ್ತಿರುವಾಗ, ಕೆಲಾಂಟನ ರಾಜ್ಯವು ಅದನ್ನು ಶರಿಯತ ಕಾನೂನಿನಲ್ಲಿ ಸೇರಿಸಿತು. ಇದರಿಂದ 9 ನ್ಯಾಯಾಧೀಶರ ವಿಭಾಗಿಯ ಪೀಠವು 9 ವಿರುದ್ಧ 1 ಹೀಗೆ ತೀರ್ಪು ನೀಡಿ ಆ ಕಾನೂನನ್ನು ರದ್ದುಗೊಳಿಸಿದೆ.

2. ಮುಖ್ಯ ನ್ಯಾಯಮೂರ್ತಿ ತೆಂಗಕೂ ಮೈಮುನ ತುವಾನ ಮಾಂಟ ಅವರು ಮಾತನಾಡಿ, ದೇಶದ ಈಶಾನ್ಯದಲ್ಲಿರುವ ರಾಜ್ಯವು (‘ಕೆಲಾಂಟನ’) ಕಾನೂನು ಮಾಡುವ ಅಧಿಕಾರವನ್ನು ಹೊಂದಿಲ್ಲ; ಏಕೆಂದರೆ ಇಂತಹ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರ ಕೇವಲ ಸಂಸತ್ತಿಗೆ ಮಾತ್ರ ಇದೆ. ದೇಶದಲ್ಲಿರುವ ಇಸ್ಲಾಂ ಧರ್ಮದ ಪರಿಸ್ಥಿತಿಯೊಂದಿಗೆ ಈ ಪ್ರಕರಣದ ಯಾವುದೇ ಸಂಬಂಧವಿಲ್ಲ. ಕೆಲಾಂಟನ ವಿಧಾನಸಭೆಯು ತನ್ನ ಅಧಿಕಾರವನ್ನು ಮೀರಿ ವರ್ತಿಸಿದೆ. ದಿವಾಣಿ ನ್ಯಾಯಾಲಯಗಳು ಇಸ್ಲಾಂ ಅಥವಾ ಶರಿಯತ್ ನ್ಯಾಯಾಲಯಗಳನ್ನು ಬೆಂಬಲಿಸುವುದಿಲ್ಲ.

ನಾವು ಸುಲ್ತಾನನ ಸಲಹೆಯನ್ನು ತೆಗೆದುಕೊಳ್ಳುತ್ತೇವೆ ! – ಕೆಲಾಂಟನ್ ಸರಕಾರ

ಕೆಲಾಂಟನ ಸರಕಾರಿ ಅಧಿಕಾರಿ ಮೊಹಮ್ಮದ ಫಾಜಲಿ ಹಸನ ಇವರು ಈ ತೀರ್ಪಿನ ಬಗ್ಗೆ ನಿರಾಶೆ ವ್ಯಕ್ತಪಡಿಸುತ್ತಾ, ನಮ್ಮ ಸರಕಾರವು ಶಾಹಿ ಸುಲ್ತಾನ್ ಮೊಹಮ್ಮದ್ ವಿ. ಇವರ ಸಲಹೆಯನ್ನು ಪಡೆದುಕೊಳ್ಳಲಿದೆ ಎಂದು ಹೇಳಿದರು. ರಾಜರು ಮಲೇಷ್ಯಾದ 13 ರಾಜ್ಯಗಳಲ್ಲಿ ಒಂಬತ್ತು ರಾಜ್ಯಗಳ ನೇತೃತ್ವವನ್ನು ಮಾಡುತ್ತಾರೆ. ಅವರು ಇಸ್ಲಾಂ ರಕ್ಷಣೆ ಮಾಡುತ್ತಾರೆ.