ಪ್ರಯಾಗರಾಜ, ವಾರಣಾಸಿ ಮತ್ತು ಅಯೋಧ್ಯೆಗೆ ಒಟ್ಟು ೧ ಕೋಟಿ ಜನರಿಂದ ಭೇಟಿ !

ಮೌನಿ ಅಮಾವಾಸ್ಯೆ

ಪ್ರಯಾಗರಾಜ (ಉತ್ತರ ಪ್ರದೇಶ) – ಫೆಬ್ರವರಿ ೯ ರ ಮೌನಿ ಅಮವಾಸ್ಯೆಯಂದು ಪ್ರಯಾಗರಾಜ, ವಾರಣಾಸಿ ಮತ್ತು ಅಯೋಧ್ಯೆಯಲ್ಲಿ ಒಟ್ಟು ೧ ಕೋಟಿಗೂ ಹೆಚ್ಚು ಭಕ್ತರು ಸೇರಿದ್ದರು. ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಾಘಮೇಳದ ಸಂದರ್ಭದಲ್ಲಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ವಾರಣಾಸಿಯ ಎಲ್ಲಾ ಘಾಟ್‌ಗಳಲ್ಲಿ ಗಂಗಾಸ್ನಾನ ಮಾಡಲು ಲಕ್ಷಾಂತರ ಭಕ್ತರು ಸೇರಿದ್ದರು. ಶ್ರೀರಾಮಲಾಲ್ಲನ ಅಯೋಧ್ಯೆಯ ಶರಯೂ ಘಾಟ್‌ನಲ್ಲಿ ತುಂಬಾ ಜನಸಂದಣಿ ಸೇರಿತ್ತು. ಹನುಮಾನಗಢಿಯ ಹೊರಗೆ ವಿಪರೀತ ಜನದಟ್ಟಣಿ ಇದ್ದರಿಂದ ಪೊಲೀಸರಿಗೆ ನಿಯಂತ್ರಿಸಲು ಕಷ್ಟವಾಯಿತು. ಈ ಸಮಯದಲ್ಲಿ ದೇವಸ್ಥಾನದ ಹೊರಗೆ ೨ ಕಿಲೋಮೀಟರ್‌ಗಿತಲೂ ಹೆಚ್ಚು ಜನರ ಸಾಲು ಇತ್ತು.

(ಸೌಜನ್ಯ – Janasatta)

ಪ್ರಯಾಗರಾಜನ ಪೊಲೀಸ್ ಆಯುಕ್ತ ರಮಿತ ಶರ್ಮಾ ಇವರು ಮಾತನಾಡಿ, ಡ್ರೋನ್‌ಗಳ ಮೂಲಕ ನಿಗಾವಸುತ್ತಿದ್ದೇವೆ. ಮಾಘಮೇಳ ಜಾಗದಲ್ಲಿ ಜನದಟ್ಟಣಿಯನ್ನು ನೋಡಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.