ಭಾರತಕ್ಕೆ ದುಕ್ಮ ಬಂದರಿಗೆ ನೇರ ಪ್ರವೇಶಕ್ಕೆ ಓಮಾನನಿಂದ ಅನುಮತಿ

ಪಶ್ಚಿಮ ಮತ್ತು ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಿತಿ ಭದ್ರವಾಗಲಿದೆ

ಮಸ್ಕತ್ – ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವೆಂದು ಪರಿಗಣಿಸಲಾಗುವ ಒಮಾನನಲ್ಲಿರುವ ದುಕ್ಮ ಬಂದರಿನಲ್ಲಿ ಭಾರತಕ್ಕೆ ನೇರ ಪ್ರವೇಶವನ್ನು ನೀಡಲು ಓಮಾನ ಸರಕಾರ ಅನುಮತಿ ನೀಡಿದೆ. ಇದರಿಂದ ಭಾರತಕ್ಕೆ ಪರ್ಶಿಯನ ಕೊಲ್ಲಿ ಮೂಲಕ ವ್ಯಾಪಾರ ಮಾಡಲು ಸುಲಭವಾಗುತ್ತದೆಯೆಂದು ನಿರೀಕ್ಷಿಸಲಾಗಿದೆ. ಓಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ ಇವರು ಸುಮಾರು 2 ತಿಂಗಳ ಹಿಂದೆಯಷ್ಟೇ ಭಾರತದ ಪ್ರವಾಸದಲ್ಲಿದ್ದರು. ತದನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಪಶ್ಚಿಮ ಮತ್ತು ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಿತಿ ಭದ್ರವಾಗಲು ಸಹಾಯವಾಗಲಿದೆ. ಹಾಗೆಯೇ ಇದು ಕೆಂಪು ಸಮುದ್ರ ಮತ್ತು ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಚಲನವಲನಗಳಿಂದ ಭಾರತೀಯ ನೌಕಾಪಡೆಯ ಪಾತ್ರವನ್ನು ಹೆಚ್ಚಿಸಲು ಸಹಾಯಕವಾಗಲಿದೆ.

(ಸೌಜನ್ಯ – Pathfinder by Unacademy)

ದುಕ್ಮ ಬಂದರು ಏಕೆ ಇಷ್ಟೊಂದು ಮಹತ್ವ ಪಡೆದಿದೆ ?

ದುಕ್ಮ್ ಬಂದರು ಮುಂಬಯಿಯಿಂದ ಪಶ್ಚಿಮಕ್ಕೆ ನೇರ ಮಾರ್ಗದಲ್ಲಿದೆ. ಓಮಾನನ ದುಕ್ಮ ಬಂದರಿನಿಂದ ಭಾರತ ತನ್ನ ಸ್ವಂತ ಸರಕುಗಳೊಂದಿಗೆ ಸೌದಿ ಅರೇಬಿಯಾ ಮತ್ತು ಅದರಾಚೆಗಿನ ಭೂ ಮಾರ್ಗದ ಮೂಲಕ ಸುಲಭವಾಗಿ ಪ್ರಯಾಣಿಸಬಹುದು. ಇದರೊಂದಿಗೆ ಏಡನ ಕೊಲ್ಲಿ ಮತ್ತು ಕೆಂಪು ಸಮುದ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಹುತಿ ಕಡಲ್ಗಳ್ಳರ ದಾಳಿಯನ್ನು ಎದುರಿಸಲು ಸಾಧ್ಯವಾಗಲಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಿಂದ ಕಡಲ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ.

ಓಮಾನ ಬಂದರಿನಿಂದ ಭಾರತಕ್ಕೆ ಹೇಗೆ ಪ್ರಯೋಜನವಾಗಲಿದೆ ?

ಓಮಾನ್‌ನ ದುಕ್ಮ ಬಂದರು ಕಡಲ ಸಹಕಾರ ಪ್ರದೇಶದಲ್ಲಿ ಭಾರತಕ್ಕೆ ಆಹಾರ ಸರಬರಾಜು ಪೂರೈಸಲು ಸಹಾಯಕವಾಗಲಿದೆ. ಭಾರತೀಯ ಮತ್ತು ಆಫ್ರಿಕನ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ‘ಶಿಪ್ಪಿಂಗ್ ಲೈನ್‌’ ಗಳಿಗಾಗಿ (ಒಂದು ಬಂದರಿನಿಂದ ಇನ್ನೊಂದು ಬಂದರಿಗೆ ಸರಕು ಮತ್ತು ಪ್ರವಾಸಿಗರನ್ನು ಸಾಗಿಸುವ ಸಂಸ್ಥೆಗೆ) ಈ ಬಂದರು ಸುಲಭವಾಗಿ ಲಭ್ಯವಾಗಲಿದೆ.

ಹಡಗುಗಳ ದುರಸ್ತಿಗಳ ಸೌಲಭ್ಯವೂ ಲಭಿಸಲಿದೆ !

ದುಕ್ಮ ಬಂದಿನ ವಿಶೇಷ ಆರ್ಥಿಕ ವಿಭಾಗದಲ್ಲಿ ನೌಕೆಗಳ ದುರಸ್ತಿ ಮಾಡುವ ಸೌಲಭ್ಯ ಲಭ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ, ನೌಕೆಗಳ ದುರುಸ್ಥಿಯ ಕೆಲಸವೂ ಸಹಜ ಮಾಡಬಹುದಾಗಿದೆ. ಈ ಬಂದರು ಓಮಾನ್‌ನ ರಾಜಧಾನಿ ಮಸ್ಕತ್‌ನ ದಕ್ಷಿಣದಿಂದ 550 ಕಿ.ಮಿ ಅಂತರದಲ್ಲಿದೆ. ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಅಮಿರಾತ್ ದುಕ್ಮಗೆ ರಸ್ತೆಯ ಮೂಲಕ ಸಹಜವಾಗಿ ತಲುಪಬಹುದು.