ಅಮೇರಿಕಾದ ನೇತೃತ್ವದ ಕುರಿತು ಭಾರತಕ್ಕೆ ವಿಶ್ವಾಸವಿಲ್ಲ !

ಅಮೇರಿಕಾದ ಭಾರತೀಯ ವಂಶದ ನೇತಾರರಾದ ನಿಕ್ಕಿ ಹೆಲೀಯವರಿಂದ ಅಮೇರಿಕಾಗೆ ಕಪಾಳಮೋಕ್ಷ !

ವಾಷಿಂಗ್ಟನ್ (ಅಮೇರಿಕಾ) – ಭಾರತವು ನಮ್ಮೊಂದಿಗೆ ಪಾಲುದಾರನಾಗಲು ಬಯಸುತ್ತದೆ. ಅದಕ್ಕೆ ರಷ್ಯಾದೊಂದಿಗೆ ಮೈತ್ರಿ ಮಾಡಲಿಕ್ಕಿಲ್ಲ. ಭಾರತಕ್ಕೆ ಅಮೇರಿಕಾದ ನೇತೃತ್ವದ ಮೇಲೆ ವಿಶ್ವಾಸವಿಲ್ಲದಿರುವುದು ಅಡಚಣೆಯಾಗಿದೆ, ಎಂಬ ಹೇಳಿಕೆಯನ್ನು ಭಾರತೀಯ ಮೂಲದ ಅಮೇರಿಕಾದಲ್ಲಿನ ರಿಪಬ್ಲಿಕನ್ ಪಕ್ಷದ ನೇತಾರರಾದ ನಿಕ್ಕಿ ಹೆಲೀಯವರು ನೀಡಿದ್ದಾರೆ. `ಫಾಕ್ಸ್ ಬಿಸಿನೆಸ್ ನ್ಯೂಸ್’ಗೆ ನೀಡಲಾದ ಸಂದರ್ಶನದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಅಮೇರಿಕಾವು ಭಾರತಕ್ಕೆ ರಷ್ಯಾದಿಂದ ಅಗ್ಗದಲ್ಲಿ ತೈಲ ಖರೀದಿಸಲು ಅನುಮತಿ ನೀಡಿರುವ ಬಗೆಗಿನ ಪ್ರಶ್ನೆಯನ್ನು ಉತ್ತರಿಸುವಾಗ ಅವರು ಮೇಲಿನ ಹೇಳಿಕೆಯನ್ನು ನೀಡಿದರು.

(ಸೌಜನ್ಯ – Business Standard)

`ಭಾರತವು ಅಮೇರಿಕಾವನ್ನು ದುರ್ಬಲವೆಂದು ತಿಳಿಯುತ್ತದೆ. ಭಾರತವು ಎಂದಿಗೂ ಜಾಣ್ಮೆಯ ಕೆಲಸ ಮಾಡಿದೆ. ಅದು ರಷ್ಯಾದೊಂದಿಗೆ ಇರುತ್ತದೆ; ಏಕೆಂದರೆ ಅದಕ್ಕೆ ಅವರಿಂದ ಸೈನ್ಯ ಉಪಕರಣಗಳು ದೊರೆಯುತ್ತವೆ. ಅಮೇರಿಕಾವು ತನ್ನ ದೌರ್ಬಲ್ಯವನ್ನು ದೂರಗೊಳಿಸುವುದು ಅವಶ್ಯಕವಾಗಿದೆ. – ನಿಕ್ಕಿ ಹೆಲೀ

ನಿಕ್ಕಿ ಹೆಲೀಯವರು ಮುಂದುವರಿದು,

1. ಉಕ್ರೇನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ಜಗತ್ತಿನಾದ್ಯಂತ ಇರುವ ದೇಶಗಳನ್ನು ರಷ್ಯಾದಿಂದ ದೂರವಿಡಲು ಪ್ರಯತ್ನಿಸಿದರೂ ಮಧ್ಯ ಏಷ್ಯಾದ ರಾಷ್ಟ್ರಗಳು ಭಾರತದಿಂದ ತೈಲ ಖರೀದಿ ನಡೆಸಿದವು. ರಷ್ಯಾ-ಉಕ್ರೇನ್ ಯುದ್ಧದ ಆರಂಭದಲ್ಲಿಯೇ ಪಾಶ್ಚಾತ್ಯ ದೇಶಗಳು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿದ್ದವು, ಆದರೆ ವೈಟ್ ಹೌಸ್ ನ ಓರ್ವ ಅಧಿಕಾರಿಯು, ಭಾರತದೊಂದಿಗೆ ಎಲ್ಲ ಸಾರ್ವಭೌಮ ದೇಶಗಳಿಗೆ ಯಾವುದೇ ದೇಶದಿಂದ ತೈಲ ಖರೀದಿಸುವ ಅಧಿಕಾರವಿದೆ ಎಂದು ಹೇಳಿದ್ದರು.

2. ಅಮೇರಿಕಾವು ತನ್ನಲ್ಲಿಯೇ ಕೊರತೆಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆಗಲೇ ಸಂಗತಿಗಳು ಉತ್ತಮಗೊಳ್ಳುತ್ತವೆ. ನಾವು ಮೈತ್ರಿ ಮಾಡಲು ಆರಂಭಿಸಬೇಕಾಗ ಬಹುದು.

3. ಭಾರತ ಹಾಗೂ ಜಪಾನ ತಮ್ಮ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿವೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಅಮೇರಿಕಾದ ಮೇಲೆ ವಿಶ್ವಾಸವಿಡಲು ಅಮೇರಿಕಾವು ಅಂತಹದ್ದೇನು ಮಾಡಿದೆ ? ಅಮೇರಿಕಾವು ಕಳೆದ 75 ವರ್ಷಗಳಲ್ಲಿ ಭಾರತವಿರೋಧಿ ನಿರ್ಣಯಗಳನ್ನು ತೆಗೆದುಕೊಂಡಿದೆ ಹಾಗೂ ಈಗಲೂ ತೆಗೆದುಕೊಳ್ಳುತ್ತಿದೆ. ಅಮೇರಿಕಾವು ಭಾರತದೊಂದಿಗೆ ಮೈತ್ರಿಯ ನೆಪದಲ್ಲಿ ವಿಶ್ವಾಸಘಾತ ಮಾಡುವುದರ ಹೊರತು ಬೇರೇನೂ ಮಾಡಿಲ್ಲ !