ವಾರಣಾಸಿ – ಎಲ್ಲಿಯವರೆಗೆ ನಾನು ನ್ಯಾಯಾಂಗ ಸೇವೆಯಲ್ಲಿ ಇದ್ದೆನೋ, ಅಲ್ಲಿಯವರೆಗೂ ನಾನು ನನ್ನ ಕೆಲಸವನ್ನು ಪೂರ್ಣ ನಿಷ್ಠೆಯಿಂದ ಮತ್ತು ಶ್ರದ್ಧೆಯಿಂದ ಮಾಡಿದ್ದೇನೆ. ಜ್ಞಾನವ್ಯಾಪಿಯಲ್ಲಿರುವ ವ್ಯಾಸಜೀಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ನೀಡುವ ಬಗ್ಗೆ ಉಭಯಪಕ್ಷಗಳ ವಾದವನ್ನು ಆಲಿಸಿದ ನಂತರ ಈ ಆದೇಶವನ್ನು ಕೊಡಲಾಗಿದೆ. ನ್ಯಾಯದ ವಸ್ತುನಿಷ್ಠ ಪೂರ್ಣಗೊಳಿಸಿಯೇ ತೀರ್ಮಾನ ಕೊಡಲಾಯಿತು ಎಂದು ಇತ್ತೀಚೆಗಷ್ಟೇ ಜಿಲ್ಲಾ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದ ಅಜಯ ಕೃಷ್ಣ ವಿಶ್ವೇಶರವರು ಹೇಳಿದರು. ಜ್ಞಾನವ್ಯಾಪಿಯ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷಕಾರರಿಗೆ ಪೂಜೆ ಮಾಡುವ ಅನುಮತಿ ಅವರೇ ಕೊಟ್ಟಿದ್ದರು. ಈ ತೀರ್ಪು ಅವರ ಅಧಿಕಾರಾವಧಿಯ ಅಂತಿಮ ತೀರ್ಪಾಗಿತ್ತು. ಜನವರಿ ೩೧ ರಂದು ಈ ತೀರ್ಪು ನೀಡಿದರು ಮತ್ತು ನಂತರ ಅವರು ಸೇವೆಯಿಂದ ನಿವೃತ್ತರಾದರು.
(ಸೌಜನ್ಯ – Kadak)
ನಿವೃತ್ತ ನ್ಯಾಯಾಧೀಶ ಅಜಯ ಕೃಷ್ಣ ವಿಶ್ವೇಶ ಮಾತನಾಡುತ್ತಾ,
೧. ನಾನು ನ್ಯಾಯಾಂಗ ಸೇವೆಯಲ್ಲಿದ್ದಾಗ ನ್ಯಾಯವನ್ನು ನೀಡುವ ಉದ್ದೇಶದಿಂದ ತೀರ್ಪುಗಳನ್ನು ನೀಡಿದ್ದೇನೆ ಮತ್ತು ಅದರಲ್ಲಿ ಯಾವುದೇ ತಪ್ಪು ಆಗಬಾರದೆಂದು ಪ್ರಯತ್ನಿಸಿದ್ದೇನೆ. ಸಾಕ್ಷ್ಯಾಧಾರಗಳ ಮೇಲೆ ತೀರ್ಪು ನೀಡಬೇಕು, ಎಂಬುದನ್ನು ನಾನು ಗಮನದಲ್ಲಿಟ್ಟಿದ್ದೆನು.
೨. ನ್ಯಾಯಾಲಯ ಯಾರ ಪರವಾಗಿ ತೀರ್ಪು ನೀಡುತ್ತದೆಯೋ ಅವರು ನಗು ನಗುತ್ತಾ ಹೋಗುತ್ತಾರೆ ಮತ್ತು ಯಾರ ವಿರುದ್ಧ ತೀರ್ಪು ಆಗುವುದೋ ಅವರು ಪ್ರತಿಭಟಿಸುತ್ತಾರೆ. ಯಾವುದೇ ತೀರ್ಪುಗಳನ್ನು ಕೊಡಲಾಗುತ್ತದೆಯೋ ಅವು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಆಧರಿಸಿರುತ್ತದೆ ಎಂದು ಹೇಳಿದರು.