ಪಾಂಡವರು 5 ಗ್ರಾಮಗಳನ್ನು ಕೇಳಿದ್ದರು, ನಾವು ಕೇವಲ 3 ಸ್ಥಾನವನ್ನು ಕೇಳುತ್ತಿದ್ದೇವೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥರ ಹೇಳಿಕೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನಾವು ಅಯೋಧ್ಯೆಯ ಬಗ್ಗೆ ಮಾತನಾಡಿದಾಗಲೆಲ್ಲ ನಮಗೆ ಪಾಂಡವರ ನೆನಪಾಗುತ್ತದೆ. ಭಗವಾನ ಶ್ರೀ ಕೃಷ್ಣನು ದುರ್ಯೋಧನನ ಬಳಿಗೆ ಹೋಗಿ, ‘ಪಾಂಡವರಿಗೆ 5 ಗ್ರಾಮಗಳನ್ನು ಕೊಡು ಮತ್ತು ಎಲ್ಲ ಇಂದ್ರಪ್ರಸ್ಥವನ್ನು ಇಟ್ಟುಕೊಳ್ಳಿ’ ಎಂದು ಹೇಳುತ್ತಾನೆ; ಆದರೆ ದುರ್ಯೋಧನನು ಅದನ್ನೂ ಕೊಡಲಿಲ್ಲ. ಅವನು ಭಗವಾನ ಶ್ರೀಕೃಷ್ಣನನ್ನೂ ಬಂಧಿಸಲು ಪ್ರಯತ್ನಿಸಿದನು. ಅಯೋಧ್ಯೆ, ಕಾಶಿ ಮತ್ತು ಮಥುರಾ ವಿಷಯದಲ್ಲೂ ಅದೇ ಸಂಭವಿಸಿದೆ. ಪಾಂಡವರು ಕೇವಲ 5 ಗ್ರಾಮಗಳನ್ನು ಕೇಳಿದ್ದರು, ಆದರೆ ಇಲ್ಲಿ ನಮ್ಮ ಶ್ರದ್ಧೆ ಕೇವಲ 3 ಕ್ಕಾಗಿ ಕೇಳಲಾಗುತ್ತಿದೆ. ಇದು ದೇವತೆಗಳ ಅವತಾರ ಭೂಮಿಯಾಗಿದೆ. ಇದು ನಮ್ಮ ಮನವಿಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಿಧಾನಸಭೆಯಲ್ಲಿ ಹೇಳಿದರು.

ಯೋಗಿ ಆದಿತ್ಯನಾಥರು ಜ್ಞಾನವಾಪಿಯ ವಿಷಯದಲ್ಲಿ ಮಾತನಾಡಿ, ಭಾರತದಲ್ಲಿ ಜನರ ಶ್ರದ್ಧೆಯ ಅಪಮಾನವಾಗುತ್ತಿದ್ದು, ಬಹುಸಂಖ್ಯಾತ ಸಮಾಜವು ಭಿಕ್ಷೆ ಬೇಡುವುದನ್ನು ಜಗತ್ತಿನಲ್ಲಿ ಎಲ್ಲಿಯೂ ನಡೆದಿಲ್ಲ. ಯಾವ ಕಾರ್ಯ ನಡೆದಿದೆಯೋ, ಅದು ಸ್ವತಂತ್ರ ಭಾರತದಲ್ಲಿ ಮೊದಲೇ ಪ್ರಾರಂಭವಾಗಬೇಕಾಗಿತ್ತು. ಅದು 1947 ರಲ್ಲಿಯೇ ಆಗಬೇಕಾಗಿತ್ತು. ಯಾವಾಗ ಜನರು ಅಯೋಧ್ಯೆಯ ಉತ್ಸವವನ್ನು ನೋಡಿದರೋ, ಆಗ ನಂದಿ ಬಾಬಾ (ಜ್ಞಾನವಾಪಿಯ ನಂದಿ ವ್ಯಾಸ ನೆಲಮಾಳಿಗೆಯ ಪೂಜೆಯ ವಿಷಯದಲ್ಲಿ) ಹೇಳಿದರು, `ಸಹೋದರ, ನಾವೇಕೆ ಕಾಯಬೇಕು ? ದಾರಿಯನ್ನು ಕಾಯದೇ ರಾತ್ರಿ ಬ್ಯಾರಿಕೇಡ ಮುರಿಯಿರಿ’ ಈಗ ನಮ್ಮ ಕೃಷ್ಣ ಕನ್ಹೆಯ್ಯಾ(ಶ್ರೀಕೃಷ್ಣಜನ್ಮಭೂಮಿ) ಎಲ್ಲಿ ನಿಲ್ಲಲಿದ್ದಾನೆ ? ಎಂದು ಹೇಳಿದರು.

‘ಕೌರವ’ ಕೊನೆಗೊಳ್ಳಲಿದೆ !

ಯೋಗಿ ಆದಿತ್ಯನಾಥರು ಮಾತನಾಡಿ, ವಿದೇಶಿ ದಾಳಿಕೋರರು ಕೇವಲ ಈ ದೇಶದ ಸಂಪತ್ತನ್ನು ಮಾತ್ರ ಲೂಟಿ ಮಾಡಲಿಲ್ಲ, ಬದಲಾಗಿ ಈ ದೇಶದ ವಿಶ್ವಾಸವನ್ನೂ ಕಾಲಡಿಯಲ್ಲಿ ತುಳಿದರು. ಸ್ವಾತಂತ್ರ್ಯದ ಬಳಿಕ ಆಕ್ರಮಣಕಾರಿಗಳನ್ನು ಗೌರವಿಸುವ ದುಷ್ಟ ಕೃತ್ಯ ನಡೆಯಿತು. ಇದು ಕೇವಲ ಮತಗಳಿಗಾಗಿ, `ಸೂಜಿಯ ಮೊನೆಯಷ್ಟೂ ಭೂಮಿಯನ್ನು ಕೊಡುವುದಿಲ್ಲ’, ಎಂದು ದುರ್ಯೋಧನನು ಹೇಳಿದ್ದನು, ಮಹಾಭಾರತ ನಡೆಯುವುದಿತ್ತು. ತದನಂತರ ಏನು ನಡೆಯಿತು ? ಕೌರವರ ನಾಶವಾಯಿತು, ಎಂದು ಹೇಳಿದರು.