ಭಾರತದಿಂದ ಮ್ಯಾನ್ಮಾರ್‌ನ ಗಡಿಯಲ್ಲಿ 1 ಸಾವಿರದ 643 ಕಿಮೀ ಉದ್ದವಾದ ಬೇಲಿ ನಿರ್ಮಾಣ

ನವ ದೆಹಲಿ : ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಸುಮಾರು 1 ಸಾವಿರದ 643 ಕಿಮೀ ಬೇಲಿ ಹಾಕಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಜನರು ಮ್ಯಾನ್ಮಾರ್ ನಿಂದ ಭಾರತಕ್ಕೆ ನುಸುಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೇ ಗಸ್ತು ತಿರುಗಲು ಪ್ರತ್ಯೇಕ ಟ್ರ್ಯಾಕ್ ಮಾಡಲಾಗುವುದು. ಪ್ರಸ್ತುತ ಮಣಿಪುರದ ಮೋರೆಹದಿಂದ 10 ಕಿ.ಮೀ. ಉದ್ದದ ಬೇಲಿ ಹಾಕಲಾಗಿದೆ.

ಸಂಪಾದಕೀಯ ನಿಲುವು

ಈಗಾಗಲೇ ಮ್ಯಾನ್ಮಾರ್ ನಿಂದ ನುಸುಳಿರುವ ರೊಹಿಂಗ್ಯಾಗಳನ್ನು ಬೇಗನೆ ದೇಶದಿಂದ ಹೊರಹಾಕಲು ಸರಕಾರ ಪ್ರಯತ್ನಿಸಬೇಕು ಎಂದು ಜನರಿಗೆ ಅನಿಸುತ್ತದೆ !