ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಸಹೋದ್ಯೋಗಿ ಉಮಾ ಇಲೈಕ್ಕಿಯಾ ಇವರ ಹಿಂದೂ ದ್ವೇಷ !
ಚೆನ್ನೈ (ತಮಿಳುನಾಡು) – ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿಕಟವರ್ತಿ ಉಮಾ ಇಲೈಕ್ಕಿಯಾ ಇವರು ಭಗವಾನ ಶ್ರೀರಾಮನ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಉಮಾ ಇಲೈಕ್ಕಿಯಾ ಮಾತನಾಡಿ, `ವಾಲ್ಮೀಕಿ ರಾಮಾಯಣದ ಪ್ರಕಾರ, ರಾಮನು ಅರಮನೆಯಲ್ಲಿ ಸಾವಿರಾರು ಮಹಿಳೆಯರೊಂದಿಗೆ ವಾಸಿಸುತ್ತಿದ್ದನು ಮತ್ತು ಮದ್ಯವ್ಯಸನಿಯಾಗಿದ್ದನು” ಎಂದು ಹೇಳಿದರು, ಸ್ಟಾಲಿನ ಕುಟುಂಬದ ವತಿಯಿಂದ ನಡೆಸುವ `ಕಲೈನಗರ ಸೆಠಿಗಲ’ ಈ ಸುದ್ದಿವಾಹಿನಿಯ ನಿವೇದಕಿ ಮತ್ತು `ದ್ರಾವಿಡ ಕಳಘಂ ತಮಿಝಾರ ಪೆರಿವಾಯಿ’ ನ ಕಾರ್ಯಾಧ್ಯಕ್ಷೆ ಉಮಾ ಇಲೈಕ್ಕಿಯಾ ಇವರು ಶ್ರೀರಾಮನ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉಮಾ ಇಲೈಕ್ಕಿಯಾ ಇವರ ಆಕ್ಷೇಪಾರ್ಹ ಹೇಳಿಕೆಗಳು
1. ಶ್ರೀರಾಮನಲ್ಲಿ ಜೀವಿಸುವ ಧೈರ್ಯವಿಲ್ಲದೆ ಅವನು ಶರಯೂ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡನು. ನೀವು ನಿಮ್ಮ ಮಕ್ಕಳೆದುರಿಗೆ ಇಂತಹ ಆದರ್ಶವನ್ನು ಇಡುವಿರೇ ? ಇದೆಂತಹ ಮೂರ್ಖತನವಾಗಿದೆ ?
2. ರಾಮನು ತನ್ನ ಹೆಂಡತಿಯ ಮೇಲೆಯೇ ಸಂದೇಹ ಪಟ್ಟು ಅವಳನ್ನು ಕಾಡಿಗೆ ಕಳುಹಿಸಿದನು. ರಾಮನು ಕೊಲೆಗಾರನಾಗಿದ್ದನು. ಅವನು ಎದುರಿಗೆ ಬರದೇ ಕದ್ದು ಮುಚ್ಚಿ ವಾಲಿಯನ್ನು ವಧಿಸಿದನು. ಇಂತಹ ವ್ಯಕ್ತಿ ನಿಮ್ಮ ಮಕ್ಕಳಿಗೆ ಆದರ್ಶವಾಗಿದ್ದಾನೆಯೇ ?
3. ರಾಮಮಂದಿರ ಎಲ್ಲಿ ನಿರ್ಮಾಣ ಮಾಡಲಾಗಿದೆಯೋ, ಅಲ್ಲಿ ಒಂದು ಕಾಲದಲ್ಲಿ ಮಸೀದಿಯಿತ್ತು. ಎಂದು ಹೇಳಿದ್ದಾರೆ.
Lord Ram was murderer, used to live with 1000 women and drink: Old video of DMK leader’s vitriolic Hinduphobic tirade goes viralhttps://t.co/hH7ptQjQDR
— OpIndia.com (@OpIndia_com) January 30, 2024
ಸಂಪಾದಕರ ನಿಲುವು* ಆಡಳಿತಾರೂಢ ದ್ರಮುಕ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ ಅವರು ಹಿಂದೂ ಧರ್ಮವನ್ನು ಮುಗಿಸುವ ಬಗ್ಗೆ ಮಾತನಾಡಿದ್ದರೆ, ಅದೇ ಪಕ್ಷದ ನಾಯಕರು ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ಕುರಿತು ಅಶ್ಲೀಲ ಆರೋಪ ಮಾಡಿದ್ದಾರೆ. ಹಿಂದೂಗಳ ಪರಿಣಾಮಕಾರಿ ಸಂಘಟನೆ ಇಲ್ಲದಿರುವುದರ ಪರಿಣಾಮವೇ ಇದಾಗಿದೆ ! * ಇಂತಹವರೇ ತುಂಬಿರುವ ಡಿಎಂಕೆ ಪಕ್ಷ ಒಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! |