(‘ಬನಾನಾ ರಿಪಬ್ಲಿಕ್’ ಅಂದರೆ ಒಂದು ವಸ್ತುವಿನ ನಿರ್ಯಾತದ ಬಗ್ಗೆ ಸಂಪೂರ್ಣ ದೇಶದ ಆರ್ಥಿಕತೆ ನಡೆಸುವುದು)
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ದಿನ ಮುಂಚೆ, ಫೆಬ್ರವರಿ 7 ರಂದು, ಬಲೂಚಿಸ್ತಾನ್ ಪ್ರಾಂತದ ಪಿಶೀನ್ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಈ ದಾಳಿಯಲ್ಲಿ 12 ಜನ ಸಾವನ್ನಪ್ಪಿದ್ದಾರೆ ಮತ್ತು 30 ಜನ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ದಾಳಿಯು ಅಪಕ್ಷ ಅಭ್ಯರ್ಥಿ ಅಸಫಂದ್ ಯಾರ್ ಖಾನ್ ಅವರ ಕಚೇರಿಯ ಹೊರಗೆ ನಡೆದಿದೆ. ಪಾಕಿಸ್ತಾನ ಚುನಾವಣಾ ಆಯೋಗವು ಈ ದಾಳಿಯ ವರದಿಯನ್ನು ಕೇಳಿದೆ.
ಫೆಬ್ರವರಿ 5 ರಂದು ನಡೆದ ದಾಳಿ !
1. ಚುನಾವಣೆಗೆ ಮೂರು ದಿನಗಳ ಮುಂಚೆ, ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಗಳು ನಡೆದವು. ಒಂದು ದಾಳಿ ಬಲೂಚಿಸ್ತಾನ್ ಪ್ರಾಂತದ ಚುನಾವಣಾ ಆಯೋಗದ ಕಚೇರಿಯ ಮೇಲೆ ನಡೆಯಿತು, ಇನ್ನೊಂದು ದಾಳಿ ಖೈಬರ್ ಪಖ್ತೂನ್ಖ್ವಾ ಪ್ರಾಂತದ ದರಬಾರ್ ಪೊಲೀಸ್ ಠಾಣೆಯ ಮೇಲೆ ನಡೆಯಿತು. ಈ ಎರಡು ದಾಳಿಗಳಲ್ಲಿ ಒಟ್ಟು 10 ಜನ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 3 ಜನ ಗಾಯಗೊಂಡಿದ್ದಾರೆ.
Blasts near Pakistan candidates’ offices kill 26 on election eve https://t.co/G1SsaCEcEY pic.twitter.com/gx7dpsJJcZ
— Reuters World (@ReutersWorld) February 7, 2024