ಬೈಂದೂರಿನಿಂದ ೩ ಹಸುಗಳ ಕಳ್ಳತನ

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನಲ್ಲಿ ೩ ಹಸುಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ ೪ ರಂದು ಮಧ್ಯಾಹ್ನ ೧.೩೦ ಗಂಟೆಗೆ ಹಸುವಿನ ಕೊಟ್ಟಿಗೆಯ ಬಾಗಿಲು ಸದ್ದು ಕೇಳಿದಾಗ ಸತೀಶ ಯಡ್ತರೆ ಇವರು ಕೊಟ್ಟಿಗೆಯಲ್ಲಿ ೪-೫ ಜನರ ಗುಂಪನ್ನು ನೋಡಿದ್ದಾರೆ. ಸತೀಶನನ್ನು ನೋಡಿದ ಕಳ್ಳರು ಕತ್ತಿ ತೋರಿಸಿ ಬೆದರಿಸಿದ್ದಾರೆ. ಸತೀಶ ಜೀವಭಯದಿಂದ ಮನೆಯೊಳಗೆ ಕುಳಿತರು. ಬೆಳಗ್ಗೆ ಎದ್ದ ತಕ್ಷಣ ಕೊಟ್ಟಿಗೆಯಲ್ಲಿದ್ದ ೫ ಹಸುಗಳ ಪೈಕಿ ಒಂದು ೧೨ ಸಾವಿರ ರೂಪಾಯಿಯ ಹಸು ಕಳ್ಳತನವಾಗಿರುವುದು ಕಂಡು ಬಂತು. ಹಾಗೆಯೇ ಅವರ ಮನೆಯ ಹತ್ತಿರ ಸಂಬಂಧಿಕರಾಗಿರುವ ಭರತ ಇವರ ಹಟ್ಟಿಯಲ್ಲಿದ್ದ ೧೫ ಹಸುವಿನಲ್ಲಿ ೨೮ ಸಾವಿರದ ೨ ಹಸು ಕಳ್ಳತನವಾಗಿದೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಪಾದಕರ ನಿಲುವು

* ಗೋವುಗಳನ್ನು ಕದಿಯುವುದು, ಕೊಲ್ಲುವುದು ಅಥವಾ ಕಳ್ಳಸಾಗಾಣಿಕೆ ಮಾಡುವವರು ಯಾರು ಎಂಬುದು ಜಗತ್ತಿಗೆ ತಿಳಿದಿದೆ. ’ಹಿಂದೂಗಳಿಗೆ ಗೋವು ತಾಯಿ ಇದ್ದಂತೆ, ಅವರು ಅಂತಹ ಕೃತ್ಯವನ್ನು ಎಂದಿಗೂ ಮಾಡುವುದಿಲ್ಲ’ ಎಂಬುದನ್ನು ಗಮನಿಸಬೇಕು !