ಪುಣೆಯಲ್ಲಿ ಪೊಲೀಸರಿಂದ ನೂರಾರು ಗೂಂಡಾಗಳ ಗುರುತಿನ ಪರೇಡ್ !

ಪುಣೆಯ ನೂತನ ಪೊಲೀಸ್ ಆಯುಕ್ತರ ಕೃತಿ

ಪುಣೆ – ಪುಣೆಯ ನೂತನ ಪೊಲೀಸ್ ಆಯುಕ್ತರಾಗಿ ಅಮಿತೇಶ್ ಕುಮಾರ್ ಇವರು ಅಧಿಕಾರ ಸ್ವೀಕರಿಸಿದ್ದಾರೆ. ಪುಣೆಯಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಅವರು ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗ್ಯಾಂಗ್‌ನ ಮುಖಂಡ ಮತ್ತು ಗ್ಯಾಂಗ್‌ನ ಇತರ ಗೂಂಡಾಗಳನ್ನು ಪೊಲೀಸ್ ಕಮಿಷನರೇಟ್‌ಗೆ ಕರೆದಿದ್ದರು. ಈ ವೇಳೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ೨೫೦ ರಿಂದ ೩೦೦ ಗೂಂಡಾಗಳು ಬಂದಿದ್ದರು ಎಂದು ಅಂದಾಜಿಸಲಾಗಿದೆ. ಆಗ ಗಂಡಾಗಳ ಗುರುತಿನ ಪರೇಡ್ ನಡೆಸಲಾಯಿತು. ಸ್ವತಃ ಪೊಲೀಸ್ ಅಧಿಕಾರಿಯು ಈ ಎಲ್ಲಾ ಗೂಂಡಾಗಳನ್ನು ‘ಪುಣೆಯಲ್ಲಿ ಯಾವುದೇ ಕ್ರಿಮಿನಲ್ ಕೃತ್ಯ ಅಥವಾ ಗಲಭೆ ನಡೆದರೆ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗ್ಯಾಂಗ್ ಮುಖಂಡರು ಮತ್ತು ಗೂಂಡಾಗಳು ಬಹಳ ಸಮಯ ಇದ್ದರು. ಪುಣೆಯ ಕುಖ್ಯಾತ ದರೋಡೆಕೋರ ಗಜಾನನ ಮಾರಣೆ, ನೀಲೇಶ್ ಘೈವಾಳ, ಬಾಬಾ ಬೋಡ್ಕೆ ಮೊದಲಾದವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಪೊಲೀಸರು ಹಾಜರಿದ್ದ ಗೂಂಡಾಗಳಿಂದ ‘ಇನ್ನು ಮುಂದೆ ಯಾವುದೇ ಅಪರಾಧ ಚಟುವಟಿಕೆ ನಡೆಸುವುದಿಲ್ಲ ಅಥವಾ ಭಾಗವಹಿಸುವುದಿಲ್ಲ ಎಂದು ಅರ್ಜಿ ತುಂಬಿಸಿ ಕೊಂಡರು. (ಇದನ್ನು ಮಾಡುವುದರಿಂದ, ಗೂಂಡಾಗಳು ಎಂದಿಗೂ ಸ್ವತಃ ಅಥವಾ ಬೇರೆ ರೀತಿಯಲ್ಲಿ ಅಪರಾಧಗಳನ್ನು ಮಾಡುವುದಿಲ್ಲ ಎಂದು ಅಲ್ಲಗಳೆಯಲು ಸಾಧ್ಯವೇ ? ಗೂಂಡಾಗಳ ಇಂತಹ ನಡವಳಿಕೆಯನ್ನು ಯಾರಾದರೂ ನಂಬುತ್ತಾರೆಯೇ ? ಹಾಗಿದ್ದಲ್ಲಿ, ಇಲ್ಲಿಯವರೆಗೆ ದೇಶವು ಎಂದೋ ಅಪರಾಧ ಮುಕ್ತವಾಗುತ್ತಿತ್ತು ? – ಸಂಪಾದಕರು)

ಸಂಪಾದಕರ ನಿಲುವು

* ಪೊಲೀಸರಿಗೆ ಗೂಂಡಾಗಳೆಂದು ಗೊತ್ತಿದ್ದರೆ ಅವರ ಗ್ಯಾಂಗ್‌ಗಳ ನಿರ್ಮೂಲನೆಗೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?