೧. ‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦
೨. ಸೂಕ್ಷ್ಮ ಜ್ಞಾನದ ಚಿತ್ರದ ಸಾತ್ತ್ವಿಕ ಸ್ಪಂದನಗಳು : ಶೇ. ೮೦’ – (ಸದ್ಗುರು) ಡಾ. ಮುಕುಲ ಗಾಡಗೀಳ (೩.೮.೨೦೨೩)
೩. ಓರ್ವ ಸಂತರು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಅರಿವಾದ ‘ಸೂಕ್ಷ್ಮ-ಜ್ಞಾನದ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ’
೩ ಅ ೧. ಮಾರಕ ಶಕ್ತಿಯ ಕಣಗಳ ವಲಯ ‘ಸನಾತನ ಪ್ರಭಾತ’ ‘ಇ-ಪೇಪರ್’ನಲ್ಲಿ ಕಾರ್ಯನಿರತವಾಗುವುದು : ಇದರಲ್ಲಿ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯನ್ನು ಮಾಡುವ ಲೇಖನಗಳು ಪ್ರಕಾಶನವಾಗುವುದರಿಂದ ಹೀಗೆ ಆಗುತ್ತದೆ.
೩ ಅ ೨. ಮಾರಕ ಶಕ್ತಿಯ ಕಣಗಳು ‘ಇ-ಪೇಪರ್’ನಿಂದ ವಾತಾವರಣದಲ್ಲಿ ಹಾಗೂ ಅದನ್ನು ಓದುವ ವ್ಯಕ್ತಿಯತ್ತ ಪ್ರಕ್ಷೇಪಿಸುವುದು : ಇದರಿಂದ ವ್ಯಕ್ತಿಗೆ ಧರ್ಮದ ಮಹತ್ವ ತಿಳಿದು ಆ ವ್ಯಕ್ತಿಯು ಸಾಧನೆ, ಧರ್ಮಕಾರ್ಯವನ್ನು ಮಾಡಲು ಪ್ರವೃತ್ತನಾಗುತ್ತಾನೆ.
೩ ಆ. ತಾರಕ ಶಕ್ತಿ
೩ ಆ ೧. ತಾರಕ ಶಕ್ತಿಯ ಕಣಗಳ ವಲಯ ‘ಇ-ಪೇಪರ್’ ನಲ್ಲಿ ಕಾರ್ಯನಿರತವಾಗುವುದು : ಕೆಲವು ಸಾಧಕರಿಗೆ ಈಶ್ವರನಿಂದ ವಿವಿಧ ವಿಷಯಗಳ ಬಗ್ಗೆ ಜ್ಞಾನ ಲಭಿಸುತ್ತದೆ, ಆ ಜ್ಞಾನವನ್ನು ಹಾಗೆಯೇ ಅಧ್ಯಾತ್ಮದ ಬಗ್ಗೆ ಸಂತರು ಮಾಡಿದ ಮಾರ್ಗದರ್ಶನವನ್ನೂ ಇ-ಪೇಪರ್‌ನಲ್ಲಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಹೀಗಾಗುತ್ತದೆ.
೩ ಆ ೨. ತಾರಕ ಶಕ್ತಿಯ ಕಣಗಳು ‘ಇ-ಪೇಪರ್’ನಿಂದ ವಾತಾವರಣ ದಲ್ಲಿ, ಹಾಗೆಯೇ ಅದನ್ನು ಓದುವ ವ್ಯಕ್ತಿಯ ಕಡೆಗೆ ಪ್ರಕ್ಷೇಪಿಸುವುದು.
೩ ಇ. ಸಗುಣ ಚೈತನ್ಯ
೩ ಇ ೧. ಸಗುಣ ಚೈತನ್ಯದ ವಲಯ ‘ಇ-ಪೇಪರ್’ನಲ್ಲಿ ಕಾರ್ಯನಿರತ ವಾಗುವುದು : ಇದರ ಕಾರಣ ‘ಇ-ಪೇಪರ್’ನಲ್ಲಿ ಯಾವಾಗಲೂ ಸತ್ಯವನ್ನು ಪ್ರಕಟಿಸಲಾಗುತ್ತಿದ್ದು, ಅದರಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನವಿರುತ್ತದೆ.
೩ ಇ ೨. ಸಗುಣ ಚೈತನ್ಯದ ವಲಯಗಳು ‘ಇ-ಪೇಪರ್’ನಿಂದ ವಾತಾವರಣದಲ್ಲಿ, ಹಾಗೆಯೇ ಅದನ್ನು ಓದುವ ಸಾಧಕರ ಕಡೆಗೆ ಅಥವಾ ಸಾಮಾನ್ಯ ವ್ಯಕ್ತಿಯ ಕಡೆಗೆ ಪ್ರಕ್ಷೇಪಿಸುವುದು : ಹೀಗಿದ್ದರೂ, ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಹೇಗಿರುತ್ತದೆಯೋ, ಹಾಗೆ ಆ ವ್ಯಕ್ತಿಯು ‘ಇ-ಪೇಪರ್’ನಲ್ಲಿರುವ ಚೈತನ್ಯವನ್ನು ಅನುಭವಿಸಬಹುದು.
೩ ಈ. ನಿರ್ಗುಣ ಚೈತನ್ಯ
೩ ಈ ೧. ನಿರ್ಗುಣ ಚೈತನ್ಯದ ವಲಯ ‘ಇ-ಪೇಪರ್’ನಲ್ಲಿ ಕಾರ್ಯನಿರತವಾಗಿ ಅದು ವಾತಾವರಣದಲ್ಲಿ, ಹಾಗೆಯೇ ಅದನ್ನು ಓದುವ ಸಾಧಕನ ಕಡೆಗೆ ಪ್ರಕ್ಷೇಪಿಸುವುದು : ಆದ್ದರಿಂದ ‘ಇ- ಪೇಪರ್’ ಅನ್ನು ಓದುವಾಗ ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಸೂಕ್ಷ್ಮ ಅಸ್ತಿತ್ವದ ಅರಿವಾಗುತ್ತದೆ ಹಾಗೂ ಸಾಧಕರಿಗೆ ಈಶ್ವರನ ಅನುಸಂಧಾನದಲ್ಲಿರಲು ಸಾಧ್ಯವಾಗುತ್ತದೆ.
೩ ಉ. ಭಾವ
೩ ಉ ೧. ಭಾವದ ಕಣಗಳು ‘ಇ-ಪೇಪರ್’ನಲ್ಲಿ ಕಾರ್ಯನಿರತ ವಾಗುವುದು : ‘ಸಾಧಕರಿಗೆ ಸಾಧನೆಯನ್ನು ಮಾಡುವಾಗ ಬಂದ ಭಾವಾನುಭೂತಿಗಳನ್ನು ‘ಇ-ಪೇಪರ್’ನಲ್ಲಿ ಪ್ರಕಟಿಸಲಾಗುತ್ತದೆ. ಈ ಅನುಭೂತಿಗಳನ್ನು ಓದಿ ಸಾಧಕರ ಮತ್ತು ವಾಚಕರ ಭಾವಜಾಗೃತಿಯಾಗುತ್ತದೆ. ಆದ್ದರಿಂದ ಹೀಗಾಗುತ್ತದೆ.’
– ಓರ್ವ ಸಂತರು (೨೯.೭.೨೦೨೩)