ಮುಂಬಯಿ, ಠಾಣೆ, ಪುಣೆ, ನಾಗ್ಪುರ ಮತ್ತು ಗೊಂದಿಯಾ ನಗರಗಳು ಸೇರಿವೆ
ಮುಂಬಯಿ – ಲೋಕಸಭೆ ಚುನಾವಣೆಗೂ ಮುನ್ನ ಮಹಾರಾಷ್ಟ್ರದ 5 ನಗರಗಳಲ್ಲಿ ಹಿಂಸಾತ್ಮಕ ಕೃತ್ಯ ನಡೆಸಲು ನಕ್ಸಲೀಯರು ಸಂಚು ಹೂಡಿದ್ದಾರೆ. ಸರಕಾರದ ವಿರುದ್ಧ ಅಸಮಾಧಾನ ಮೂಡಿಸಲು ಈ ರೀತಿ ಮಾಡಲಾಗುವುದು. ಮುಂಬಯಿ, ಠಾಣೆ, ಪುಣೆ, ನಾಗ್ಪುರ ಮತ್ತು ಗೊಂದಿಯಾ ಈ 5 ನಗರಗಳಲ್ಲಿ ನಕ್ಸಲೀಯರು ರಕ್ತಪಾತ ನಡೆಸಲು ಸಂಚು ರೂಪಿಸಿದ್ದಾರೆ ಎಂದು ನಾಗ್ಪುರದ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ್ ಮಾಹಿತಿ ನೀಡಿದ್ದಾರೆ.
ಅವರು ಮಾತನಾಡುತ್ತಾ…
1. ಯುನೈಟೆಡ್ ಫ್ರಂಟ್ ಮಾವೋವಾದಿಗಳ ಒಂದು ಭಾಗವಾಗಿದೆ. ಈ ಮಾವೋವಾದಿ ಗುಂಪುಗಳು ರೈತರು ಮತ್ತು ವಿದ್ಯಾರ್ಥಿಗಳ ಮೂಲಕ ಸರಕಾರದ ವಿರುದ್ಧ ಆಕ್ರೋಶ ಮೂಡಿಸುವ ಕೆಲಸ ಮಾಡುತ್ತಿವೆ.
2. ನಗರ ನಕ್ಸಲೀಯರ ಗೌಪ್ಯ ಮಾಹಿತಿ ಸಿಕ್ಕಿದೆ. ಅವರು ಪುಣೆ, ಮುಂಬಯಿ, ನಾಗ್ಪುರ, ಗೊಂದಿಯಾ ಹಾಗೂ ಠಾಣೆ ಈ ನಗರಗಳಲ್ಲಿ ತಮ್ಮ ವ್ಯವಸ್ಥೆ ಕಾರ್ಯನಿರತಗೊಳಿಸಿದೆ. ಈ ಸ್ಥಳದಲ್ಲಿ ಅರ್ಬನ್ ನಕ್ಸಲವಾದ ಹರಡುತ್ತಿದೆ. ನಗರ ನಕ್ಸಲೀಯರನ್ನು ಬೆಂಬಲಿಸುವ 54 ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಾವು ನಿಗಾ ಹರಿಸಿದ್ದೇವೆ.
2. ಅರ್ಬನ್ ನಕ್ಸಲೀಯರು ಸಮಾಜದಲ್ಲಿ ಸರಕಾರದ ವಿರುದ್ಧ ಅಸಮಾಧಾನ ಮೂಡಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಲು ಯತ್ನಿಸುತ್ತಿದ್ದಾರೆ. ಅಂತಹ ಸಾಕ್ಷಿಗಳು ಪೊಲೀಸರ ಕೈಗೆ ಬಂದಿವೆ.
3. ಪುಣೆಯ ಕೊಳೆಗೇರಿಯ ಕೆಲವು ಮಕ್ಕಳನ್ನು ನಕ್ಸಲೀಯರ ಆಂದೋಲನಕ್ಕಾಗಿ ಕಾಡಿಗೆ ಕಳುಹಿಸಲಾಗುತ್ತಿದೆ. ಪುಣೆಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ವಶದಲ್ಲಿದ್ದ ಸಂತೋಷ್ ಸೆಲಾರ್ ನನ್ನು ನಕ್ಸಲೀಯರು ಕಾಡಿಗೆ ಕಳುಹಿಸಿದ್ದರು. ಅರ್ಬನ್ ನಕ್ಸಲೀಯರು ಇಂತಹ ಯುವಕರನ್ನು ನೇಮಿಸಿಕೊಂಡು ನಕ್ಸಲ್ ಚಟುವಟಿಕೆ ನಡೆಸಲು ಅರಣ್ಯಕ್ಕೆ ತರಬೇತಿ ನೀಡಿ ಕಳುಹಿಸುತ್ತಿದ್ದಾರೆ ಎಂದಿದ್ದಾರೆ.
ಸಂಪಾದಕೀಯ ನಿಲುವುನಕ್ಸಲಿಸಂ ಅನ್ನು ಕೊನೆಗಾಣಿಸಲು, ನಗರಗಳಲ್ಲಿ ಬೆಳೆಯುತ್ತಿರುವ ನಗರ ನಕ್ಸಲಿಸಂ ಅನ್ನು ಮೊದಲು ಕೊನೆಗೊಳಿಸುವುದು ಅವಶ್ಯಕವಾಗಿದೆ. ಈ ಸಮಸ್ಯೆಯು ಜಿಹಾದಿ ಭಯೋತ್ಪಾದನೆಯಷ್ಟೇ ಗಂಭೀರವಾಗಿದೆ ಮತ್ತು ಇದನ್ನು ಪರಿಹರಿಸಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು ! |