ಪಾಕಿಸ್ತಾನದದಲ್ಲಿ ಪೋಲೀಸ ಠಾಣೆಯ ಮೇಲೆ ಉಗ್ರರ ದಾಳಿ; ೧೦ ಪೋಲೀಸರು ಹತ !

ಸಾರ್ವತ್ರಿಕ ಚುನಾವಣೆ ಇನ್ನು ೩ ದಿನ ಬಾಕಿ ಇರುವಾಗ ಘಟನೆ !

ಇಸ್ಲಾಮಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ೩ ದಿನಗಳಿದ್ದು, ಅಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ವೇಗ ಪಡೆದಿದೆ. ಅದೇರೀತಿ ದೇಶದಲ್ಲಿ ಉಗ್ರರದಾಳಿಯೂ ಹೆಚ್ಚಿದೆ. ಫೆಬ್ರವರಿ ೫ ರ ಬೆಳಗಿನ ಜಾವ ಕೆಲವು ಜಿಹಾದಿ ಭಯೋತ್ಪಾದಕರು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ ಪಟ್ಟಣದ ಒಂದು ಪೋಲೀಸ್ ಠಾಣೆಯನ್ನು ಗುರಿಯಾಗಿಸಿದರು. ಇದರಲ್ಲಿ ೧೦ ಪೋಲೀಸರು ಹತ್ಯೆಯಾದರು ಹಾಗೂ ೬ ಜನರು ಗಾಯಗೊಂಡರು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಈ ವೇಳೆ ಉಗ್ರರು ಪೋಲೀಸ ಠಾಣೆಗೆ ನುಗ್ಗಿ ಯದ್ವಾತದ್ವಾ ಗುಂಡಿನದಾಳಿ ನಡೆಸಿದ್ದಾರೆ ಎಂದು ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ ೪ ರಂದು ಬಲೂಚಿಸ್ತಾನ್ ಪ್ರಾಂತ್ಯದ ನುಷ್ಕಿ ಜಿಲ್ಲೆಯಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗದ ಕಛೇರಿಯ ಹೊರಗೆ ಬಾಂಬ್ ಸ್ಫೋಟಿಸಿದ್ದಾರೆ. ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ವ್ಯವಸ್ಥೆಯು ಈ ದಾಳಿಯಹಿಂದೆ ಭಾರತದ ಹಸ್ತಕ್ಷೇಪವಿದೆ ಎಂದು ಹೇಳಿದರೆ, ಆಶ್ಚರ್ಯ ಪಡಬೇಕಾಗಿಲ್ಲ !

ಏನು ಬಿತ್ತಿದ್ದೇವೆಯೋ ಅದು ಬೆಳೆಯುತ್ತದೆ ಅದೇ ಕಂಠಪ್ರಾಯವಾಗುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಅಂದರೆ ಜಿಹಾದಿನ ಸೃಸ್ಟಿಕರ್ತ ಪಾಕಿಸ್ತಾನ !