ಭಾರತೀಯ ಪುರಾತತ್ವ ಇಲಾಖೆಯ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ
ಆಗ್ರಾ (ಉತ್ತರ ಪ್ರದೇಶ) – ಆಗ್ರಾದ ಪುರಾತತ್ವ ಇಲಾಖೆ ನೀಡಿದ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ, ಮಥುರಾದಲ್ಲಿನ ಶ್ರೀ ಕೃಷ್ಣ ಮಂದಿರವನ್ನು ಕೆಡವಿದ ನಂತರ, ಔರಂಗಜೇಬನು ನಿರ್ಮಿಸಿದ ಮಸೀದಿಯ ಸ್ಥಳದಲ್ಲಿ ಶಾಹಿ ಇದಗಾಹ ಮಸೀದಿಯನ್ನು ನಿರ್ಮಿಸಲಾಗಿದೆ. ಇಲಾಖೆಯು ಬ್ರಿಟಿಶರ ಆಡಳಿತದಲ್ಲಿ 1920 ರಲ್ಲಿ ಪ್ರಕಟಿಸಿರುವ ಗೆಜೆಟನ ಆಧಾರದಲ್ಲಿ, ಮೊದಲು ಮಸೀದಿಯ ಸ್ಥಳದಲ್ಲಿ ಕಟರಾ ಕೇಶವದೇವ ಮಂದಿರವಿತ್ತು. ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ.
1. ಮೈನ್‌ಪುರಿಯ ಅಜಯ ಪ್ರತಾಪ ಸಿಂಗ ಅವರು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ದೇಶಾದ್ಯಂತ ಇರುವ ದೇವಾಲಯಗಳ ಬಗ್ಗೆ ಮಾಹಿತಿ ಕೇಳಿದ್ದರು. ಇದರಲ್ಲಿ ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಳದ ಬಗ್ಗೆ ಮಾಹಿತಿಯನ್ನು ಕೇಳಲಾಗಿತ್ತು.
2. ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಟ್ರಸ್ಟ್‌ನ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಮಾತನಾಡಿ, ಬ್ರಿಟಿಷ ಆಡಳಿತದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಕಟ್ಟಡ ಮತ್ತು ರಸ್ತೆ ಇಲಾಖೆಯು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ 39 ಸ್ಮಾರಕಗಳ ಪಟ್ಟಿಯನ್ನು ಪ್ರಸಾರ ಮಾಡಿತ್ತು. ಈ ಪಟ್ಟಿಯು ಗೆಜೆಟ್‌ನಲ್ಲಿ ವರದಿಯಾದ ಮಾಹಿತಿಯನ್ನು ಆಧರಿಸಿದೆ. ಇದರಲ್ಲಿ, ಕಟರಾ ಕೇಶವದೇವ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯ ಉಲ್ಲೇಖ 37 ನೇ ಕ್ರಮಾಂಕದಲ್ಲಿದೆ. `ಮೊದಲು ಕಟರಾ ಗುಡ್ಡದ ಮೇಲೆ ಕೇಶವದೇವರ ಮಂದಿರವಿತ್ತು’ ಎಂದು ಬರೆಯಲಾಗಿದೆ. ಅದನ್ನು ಕೆಡವಿ ಆ ಸ್ಥಳವನ್ನು ಮಸೀದಿಗಾಗಿ ಉಪಯೋಗಿಸಲಾಯಿತು. ನಾವೆಲ್ಲರೂ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಕ್ಕೆ ಸಾಕ್ಷ್ಯಗಾಗಿ ಇದನ್ನು ಸೇರಿಸುತ್ತೇವೆ ಎಂದು ಹೇಳಿದರು.
ಏನಿದು ಪ್ರಕರಣ?
ಔರಂಗಜೇಬನು 1670 ರಲ್ಲಿ ಮಥುರಾದ ಕೇಶವದೇವ ಮಂದಿರವನ್ನು ಕೆಡವಲು ಆದೇಶ ನೀಡಿದ್ದನು. ತದನಂತರ, ಮಂದಿರವನ್ನು ಕೆಡವಿ ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಯಿತು. ಮಥುರಾದಲ್ಲಿನ ಈ ಪ್ರಕರಣವು ಒಟ್ಟು 13.37 ಎಕರೆ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದೆ. ಶ್ರೀ ಕೃಷ್ಣ ಜನ್ಮಸ್ಥಾನ ಟ್ರಸ್ಟ್ 10.9 ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿಯು ಎರಡೂವರೆ ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದೆ. ಹಿಂದೂ ಪಕ್ಷದ ಪ್ರಕಾರ, ಶಾಹಿ ಈದ್ಗಾ ಮಸೀದಿಯನ್ನು ಕೆಡವಿ ಅದೇ ಭೂಮಿಯನ್ನು ಶ್ರೀಕೃಷ್ಣನ ಜನ್ಮಭೂಮಿಗೆ ನೀಡಬೇಕು ಎನ್ನುವುದು ಹಿಂದೂಗಳ ಬೇಡಿಕೆಯಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಇದು ತಿಳಿದಿದ್ದರೂ, ಈ ಭೂಮಿ ಹಿಂದೂಗಳಿಗೆ ಮರಳಿ ಸಿಗಲು ಇಲಾಖೆ ಸ್ವತಃ ಏಕೆ ಪ್ರಯತ್ನಿಸುತ್ತಿಲ್ಲ ? ಈ ಇಲಾಖೆ ಕೇಂದ್ರ ಸರಕಾರದ ಅಧೀನದಲ್ಲಿರುವುದರಿಂದ ಕೇಂದ್ರ ಸರಕಾರವೇ ಇದಕ್ಕೆ ಪ್ರಯತ್ನ ನಡೆಸಬೇಕು ಎಂಬುದು ಹಿಂದೂಗಳಿಗೆ ಅನಿಸುತ್ತದೆ ! |