ಖ್ಯಾತ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರ ಊಹೆ
ನವ ದೆಹಲಿ – ಮುಂಬರುವ ಲೋಕಸಭಾ ಚುನಾವಣೆಯ ಗಾಳಿ ನಿಧಾನವಾಗಿ ಬೀಸುತ್ತಿದೆ. ಇಂತಹದುರಲ್ಲಿಯೇ ಖ್ಯಾತ ರಾಜಕೀಯ ವಿಶ್ಲೇಷಕ ಪ್ರಶಾಂತ ಕಿಶೋರ್ ಅವರು ಒಂದು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಕುರಿತು ಹೇಳಿಕೆಗಳನ್ನು ನೀಡಿದರು. ಕಿಶೋರ್ ಅವರು ಮಾತನಾಡಿ, ಇದು ಯಾರಿಗೂ ಗೊತ್ತಿಲ್ಲ. ಯಾರೂ ಆ ವಿಷಯದಲ್ಲಿ ಅನುಮಾನ ಪಡಬಾರದು, ಹೇಗೆ ಆದರೂ ಮೋದಿಯವರ ಉತ್ತರಾಧಿಕಾರಿ ಅವರಿಗಿಂತ (ಜಹಾಲ್)ಕಟ್ಟರ ಆಗಿರುತ್ತಾರೆ. ಅವರು ಎಷ್ಟು ಕಟ್ಟರ ಆಗಿರುತ್ತಾರೆಂದರೆ, ಅವರಿಗೆ ಹೋಲಿಸಿದರೆ ಮೋದಿ ಅವರೇ ಹೆಚ್ಚು ಮುಕ್ತ ವಿಚಾರವನ್ನು ಹೊಂದಿದವರಾಗಿದ್ದರು ಎಂದೆನಿಸಬಹುದು.
ಪ್ರಶಾಂತ ಕಿಶೋರ ಮಾತನ್ನು ಮುಂದುವರಿಸುತ್ತಾ, ಭಾಜಪದ ಎಲ್ಲ ಮುಖ್ಯಮಂತ್ರಿಗಳು ಇಂದು ಮೊದಲಿನ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಕಟ್ಟರ ಹಿಂದುತ್ವನಿಷ್ಠರೆಂದು ತೋರಿಕೆಯ ಸ್ಪರ್ಧೆಯಲ್ಲಿದ್ದಾರೆ. ಇದರಿಂದ ಪ್ರಧಾನಮಂತ್ರಿ ಹುದ್ದೆಗೆ ಯಾರು ಬರುತ್ತಾರೆಯೋ, ಅವರಿಗೆ ಆ ರೀತಿ ನಡೆದುಕೊಳ್ಳುವುದನ್ನು ಬಿಟ್ಟರೆ ಬೇರೆ ಪರ್ಯಾಯವೇ ಉಳಿದಿಲ್ಲ.
ಯೋಗಿ ಆದಿತ್ಯನಾಥ್ ಅವರಿಗೆ ಮೋದಿಯವರ ಮಟ್ಟಕ್ಕೆ ತಲುಪಲು ಬಹಳಷ್ಟು ಅವಕಾಶ !
ಯೋಗಿ ಆದಿತ್ಯನಾಥ ಅವರ ಕುರಿತು ಮಾತನಾಡುತ್ತಾ, ಮೋದಿ ಮತ್ತು ಯೋಗಿ ನಡುವೆ ಇನ್ನೂ ಬಹಳಷ್ಟು ಅಂತರವಿದೆ. ಯಾವ ರೀತಿ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಗಳಾಗಿದ್ದಾಗ ಅವರಿಗೆ ವಾಜಪೇಯಿಯವರ ಬೆಂಬಲವಿಲ್ಲದೇ ಸ್ವಬಲದ ಮೇಲೆ ರಾಜ್ಯದ ಚುನಾವಣೆಯನ್ನು ಗೆಲ್ಲುವುದು ಸಾಧ್ಯವಿರಲಿಲ್ಲವೋ, ಅದರಂತೆಯೇ ಯೋಗಿ ಕೂಡ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸ್ವಬಲದ ಮೇಲೆ ಬಹುಮತವನ್ನು ಹೊಂದಲು ಸಾಧ್ಯವಿಲ್ಲ. ಸಧ್ಯಕ್ಕೆ ಯೋಗಿ ಆದಿತ್ಯನಾಥರ ಹೆಸರೂ ದೊಡ್ಡ ಪ್ರಮಾಣದಲ್ಲಿ ಚರ್ಚೆಯಲ್ಲಿದೆ; ಆದರೆ ಇನ್ನೂ ಅವರಿಗೆ ಮೋದಿಯವರ ಮಟ್ಟ ತಲುಪಲು ಸಾಕಷ್ಟು ಸಮಯವಿದೆ.
ಸಂಪಾದಕೀಯ ನಿಲುವುಹಿಂದೂಗಳ ಪರವಾಗಿ ಯಾರಾದರೂ ಧ್ವನಿ ಎತ್ತಿದರೆ ಅಥವಾ ಅವರ ಹಿತಕ್ಕಾಗಿ ಶ್ರಮಿಸಿದರೆ, ಸಂಬಂಧಪಟ್ಟವರನ್ನು ಕೂಡಲೇ `ತೀಕ್ಷ್ಣ’ ಅಥವಾ ‘ಕಟ್ಟರ’ ಎಂಬ ಹಣೆಪಟ್ಟಿ ಹಚ್ಚಿ ಅವರ ಪ್ರತಿಷ್ಠೆಗೆ ಕೆಸರು ಎರಚುತ್ತಾರೆ. ಇಂತಹವರನ್ನು ಸೈದ್ಧಾಂತಿಕವಾಗಿ ಖಂಡಿಸುವುದು ಆವಶ್ಯಕವಾಗಿದೆ ! |