ದೆಹಲಿ ಗಲಭೆ ಪ್ರಕರಣದಲ್ಲಿ 2 ಮತಾಂಧರಿಗೆ 4 ವರ್ಷ ಜೈಲು ಶಿಕ್ಷೆ !

ನವ ದೆಹಲಿ – 2020 ರಲ್ಲಿ ನಡೆದ ಹಿಂದೂ ವಿರೋಧಿ ಗಲಭೆ ಪ್ರಕರಣದಲ್ಲಿ, ದೆಹಲಿ ನ್ಯಾಯಾಲಯವು ಜನವರಿ 31, 2024 ರಂದು ನೂರ್ ಮುಹಮ್ಮದ್ ಅಲಿಯಾಸ್ ನೂರಾ ಮತ್ತು ನಬಿ ಮುಹಮ್ಮದ್ ಅವರನ್ನು ಅಪರಾಧಿಗಳೆಂದು ಘೋಷಿಸಿತು ಮತ್ತು ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಶಿಕ್ಷೆ ವಿಧಿಸುವಾಗ, ನ್ಯಾಯಾಲಯವು, ಆರೋಪಿಗಳು ದ್ವೇಷ ಮತ್ತು ದುರಾಶೆಯಿಂದ ಪ್ರೇರೇಪಿಸಲ್ಪಟ್ಟಿದ್ದರು. ನೂರ್ ಮೊಹಮ್ಮದ್ ಮತ್ತು ನಬಿ ಮೊಹಮ್ಮದ್ ವಿರುದ್ಧ ವಿವಿಧ ಅಂಗಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರು ಕೆಲವರನ್ನು ದರೋಡೆ ಮಾಡಿದ್ದರು ಮತ್ತು ಸೆಕ್ಷನ್ 144 (ಸಭೆ ನಿಷೇಧ) ಉಲ್ಲಂಘಿಸಿದ್ದರು.

ನೂರ್ ಮೊಹಮ್ಮದ್ ಗಲಭೆ ಸೃಷ್ಟಿಸಿ ದಿಲೀಪ್ ಎಂಬ ವ್ಯಕ್ತಿಯ ಅಂಗಡಿಯನ್ನು ಧ್ವಂಸಗೊಳಿಸಿ ನಂತರ ಬೆಂಕಿ ಹಚ್ಚಿದ್ದಾನೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ವೇಳೆ ಆತನೂ ಅಂಗಡಿಯಿಂದ ಓಡಿ ಹೋಗಿದ್ದಾನೆ. ಅಂಗಡಿಯಲ್ಲಿದ್ದ ಮಾಲುಗಳಿಗೂ ಹಾನಿ ಮಾಡಿದ್ದಾರೆ. ಈ ವೇಳೆ ‘ಅಶೋಕ್ ಫೋಮ್ ಅಂಡ್ ಫರ್ನಿಚರ್’ ಎಂಬ ಅಂಗಡಿಯನ್ನೂ ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. ಅಲ್ಲದೆ ರಾಮದತ್ತ ಪಾಂಡೆ, ಮನೋಜ್ ನೇಗಿ, ಸೋನು ಶರ್ಮಾ, ಪಪ್ಪು ಮತ್ತು ಅಶೋಕ್ ಕುಮಾರ್ ಅವರ ಮೋಟಾರ್ ಸೈಕಲ್ ಗಳಿಗೆ ಬೆಂಕಿ ಹಚ್ಚಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ದ್ವೇಷಿಗಳು ದೆಹಲಿಯಲ್ಲಿ ನಡೆದ ಗಲಭೆಗೆ ಹಿಂದೂಗಳನ್ನು ಹೊಣೆಗಾರರನ್ನಾಗಿ ಮಾಡಲು ಸಂಚು ರೂಪಿಸಿದ್ದರು; ಆದರೆ ತೀರ್ಪಿನಿಂದ ಗಲಭೆ ಮಾಡಿದವರು ಯಾರು ಎಂಬುದು ಬೆಳಕಿಗೆ ಬಂದಿದೆ. ಆದರೆ ಜಾತ್ಯತೀತರು ಈ ಬಗ್ಗೆ ಮೌನವಾಗಿದ್ದಾರೆ !