Pakistan Ask Proof To Indian Navy : ಪಾಕಿಸ್ತಾನಿ ನಾವಿಕರ ಪ್ರಾಣ ಉಳಿಸಿದ ಭಾರತೀಯ ನೌಕಾದಳ; ಸಾಕ್ಷಿ ಕೇಳಿದ ಪಾಕಿಸ್ತಾನ !

ಪಾಕಿಸ್ತಾನದ ಕೃತಘ್ನತೆ!

ಇಸ್ಲಾಮಾಬಾದ – ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾದ ಕಡಲ್ಗಳ್ಳರ ವಶದಿಂದ ಪಾಕಿಸ್ತಾನಿ ಮತ್ತು ಇರಾನ್ ನಾವಿಕರ ಪ್ರಾಣವನ್ನು ಉಳಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ; ಆದರೆ ಪಾಕಿಸ್ತಾನ ರಾಜಕೀಯ ತಜ್ಞ ಕಮರ ಚೀಮಾ ಸೇರಿದಂತೆ ಹಲವು ಭಾರತೀಯ ನೌಕಾದಳಕ್ಕೆ ಈ ವಿಷಯದಲ್ಲಿ ಪುರಾವೆಗಳನ್ನು ಕೋರಿದ್ದಾರೆ.

ಕಮರ ಚೀಮಾ ಇವರು ಮಾತನಾಡಿ, `ವಿದೇಶಿ ಪ್ರಸಾರಮಾಧ್ಯಮಗಳು ಭಾರತೀಯ ನೌಕಾದಳವು 19 ಪಾಕಿಸ್ತಾನಿ ನಾವಿಕರ ಪ್ರಾಣವನ್ನು ರಕ್ಷಿಸಿದೆಯೆಂದು ಹೇಳುತ್ತಿವೆ. ಭಾರತೀಯ ನೌಕಾದಳವು ಕಡಲ್ಗಳ್ಳರ ವಶದಿಂದ ರಕ್ಷಿಸಿರುವ ನೌಕೆಯು ಮೂಲದಲ್ಲಿ ಅದು ಇರಾನಿನ ನೌಕೆಯಾಗಿದೆ. ಇದರಲ್ಲಿ ಒಬ್ಬನೇ ಒಬ್ಬ ಪಾಕಿಸ್ತಾನಿ ನಾಗರಿಕ ಭಾಗವಹಿಸಿಲ್ಲ. ಭಾರತೀಯ ನೌಕಾದಳವು ಈ ಪಾಕಿಸ್ತಾನಿ ನಾವಿಕರ ಹೆಸರನ್ನು ಘೋಷಿಸಬೇಕು’, ಎಂದು `ಎಕ್ಸ’ ಮೇಲೆ `ಪೋಸ್ಟ’ ಮಾಡಿದ್ದರು. ಚೀಮಾ ಇವರ ಈ ಪೋಸ್ಟ ಬಳಿಕ ಕೆಲವು ಗಂಟೆಗಳ ಬಳಿಕ ಭಾರತೀಯ ನೌಕಾದಳವು ಪಾಕಿಸ್ತಾನಿ ನಾವಿಕರ ವಿಡಿಯೋ ಪ್ರಸಾರ ಮಾಡಿತು. (ಭಾರತದ ಮಾನವೀಯತೆಯ ಕೃತಿಯಲ್ಲಿಯೂ ದೋಷವನ್ನೇ ಕಾಣುವ ಪಾಕಿಸ್ತಾನದಿಂದ ಮತ್ತಿನ್ನೇತು ಅಪೇಕ್ಷಿಸಬುದು?- ಸಂಪಾದಕರು) ಭಾರತೀಯ ನೌಕಾದಳವು ಐ.ಎನ್.ಎಸ್. ಸುಮಿತ್ರಾ ಈ ಯುದ್ಧನೌಕೆಯು ಇತ್ತೀಚೆಗೆ ಸೋಮಾಲಿಯಾದ ಕಡಲ್ಗಳ್ಳರ ವಶದಿಂದ 2 ನೌಕೆಯನ್ನು ರಕ್ಷಿಸಿತ್ತು. ತದನಂತರ ಈ ನೌಕೆಯ ಮೇಲಿರುವ ಇರಾನಿ ಮತ್ತು ಪಾಕಿಸ್ತಾನ ನಾವಿಕರು ಭಾರತೀಯ ನೌಕಾದಳಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದರು.

ಪಾಕಿಸ್ತಾನದ ಕೃತಘ್ನ ನೌಕಾದಳ

ಭಾರತೀಯ ನೌಕಾಪಡೆಯು ಪ್ರಸಾರ ಮಾಡಿದ ವೀಡಿಯೊದಲ್ಲಿ, ಪಾಕಿಸ್ತಾನಿ ಮತ್ತು ಇರಾನಿ ನಾವಿಕರು ‘ಭಾರತೀಯ ನೌಕಾಪಡೆ ಜಿಂದಾಬಾದ್’ ಎಂದು ಘೋಷಿಸುತ್ತಿರುವುದು ಕಂಡುಬಂದಿದೆ. ನೌಕಾದಳದ ವೀಡಿಯೊದ ನಂತರ, ಚೀಮಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅತಿಯಾಗಿ ಟೀಕಿಸಲಾಗುತ್ತಿದೆ . ಅವರಿಗೆ ಕ್ಷಮೆಯಾಚಿಸುವಂತೆ ಕೇಳಲಾಗುತ್ತಿದೆ. ಪಾಕಿಸ್ತಾನದ ನೌಕಾದಳವು ಈ ಸಂಪೂರ್ಣ ಪ್ರಕರಣದಲ್ಲಿ ಇಲ್ಲಿಯವರೆಗೆ ಮೌನವನ್ನು ವಹಿಸಿತ್ತು. ನಾವಿಕರನ್ನು ರಕ್ಷಿಸಿರುವ ವಿಷಯದಲ್ಲಿ ಪಾಕಿಸ್ತಾನಿ ನೌಕಾದಳವು ಭಾರತೀಯ ನೌಕಾದಳವನ್ನು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದೇ ಒಂದು ಶಬ್ದವನ್ನೂ ಉಚ್ಚರಿಸಿಲ್ಲ.