BLA Operation Dara-e-Bolan : ಮಾಚ ಮತ್ತು ಬೊಲಾನ ನಗರಗಳನ್ನು ವಶಕ್ಕೆ ಪಡೆದ ಬಲೂಚ ಲಿಬರೇಷನ್ ಆರ್ಮಿ (BLA) !

  • ಪಾಕಿಸ್ತಾನ ಮತ್ತೆ ವಿಭಜನೆಯ ಹಾದಿಯಲ್ಲಿ !

  • ೪೫ ಪಾಕಿಸ್ತಾನಿ ಸೈನಿಕರ ಹತ್ಯೆ !

ಕ್ವೆಟಾ – ೧೯೭೧ ರ ಪ್ರಕಾರ ಪಾಕಿಸ್ತಾನ ೨ ಭಾಗಗಳಾಗಿ ಪ್ರತ್ಯೇಕ ದೇಶವಾಗುವ ಸಾಧ್ಯತೆ ಇದೆ. ಪಾಕಿಸ್ತಾನದ ಪಶ್ಚಿಮದ ಕಡೆಯಿಂದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಿರುವ ‘ಬಲೂಚ ಲಿಬರೇಷನ್ ಆರ್ಮಿ‘ (ಬ.ಲಿ.ಎ.) ಸೇನಾನೆಲೆಗಳ ಮೇಲೆ ದಾಳಿ ಮಾಡಿದ್ದು ಮಾಚ ಮತ್ತು ಬೊಲಾನ ಪಟ್ಟಣಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ‘ಮಾಚ ಪಟ್ಟಣದ ದಾಳಿಯಲ್ಲಿ ೪೫ ಪಾಕಿಸ್ತಾನಿ ಸೈನಿಕರ ಹತ್ಯೆ ಮಾಡಿದ್ದೂ ಪೀರ ಗಾಬಾದಲ್ಲಿ ೧೦ ಜನರನ್ನು ಸಾಯಿಸಲಾಗಿದ“, ಎಂದು ಬಿ.ಎಲ.ಎ. ಹೇಳಿಕೊಂಡಿದೆ.

೧. ಬಿ.ಎಲ್.ಎ. ‘ಮಾಚ ಪಟ್ಟಣ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ವಶಪಡಿಸಿಕೊಂಡಿದೆ‘ ಎಂದು ಬಲೂಚಿಸ್ತಾನ ಪೋಸ್ಟ್ ವರದಿ ಮಾಡಿದೆ. ‘ಬಿ.ಎಲ್.ಎ.‘ ನ ಸೈನಿಕರು ಪಾಕಿಸ್ತಾನಿ ಸೇನೆಯನ್ನು ತಡೆಯಲು ಭೂಸುರಂಗ ಬಳಸಿದರು ಮತ್ತು ಮಾಚ ಪಟ್ಟಣವನ್ನು ವಶಪಡಿಸಿಕೊಂಡರು ಎಂದು ಬಿ.ಎಲ್.ಎ.ನ ವಕ್ತಾರ ಜಿಯಾಂದ ಬಲೋಚ ಹೇಳಿದ್ದಾರೆ.

(ಸೌಜನ್ಯ – StudyIQ IAS)

೨. ಬಿ.ಎಲ್.ಎ. ಸೈನಿಕರು ಪಾಕಿಸ್ತಾನ ಸೇನೆಯ ನೆಲೆಗಳ ಮೇಲೆ ಅನೇಕ ಕ್ಷಿಪಣಿ ದಾಳಿನಡೆಸಿದರು. ಈ ವೇಳೆ ನಡೆದ ಚಕಮಕಿಯಲ್ಲಿ ೪ ಬಲೂಚ ಕಾರ್ಯಕರ್ತರು ಸಾವನ್ನಪ್ಪಿದರು. ಈ ನಾಲ್ವರೂ ‘ಬಿ.ಎಲ್.ಎ.’ನ ಮಜೀದ ಬ್ರಿಗೇಡ್‌ನ ಆತ್ಮಾಹುತಿ ಆಕ್ರಮಣಕಾರರಾಗಿದ್ದರು.

೩. ೧೯೭೧ ರಲ್ಲಿ ಮುಕ್ತಿ ಸಂಘರ್ಷ ವಾಹಿನಿ ಪೂರ್ವಪಾಕಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಮೇಲೆ ಇದೇ ರೀತಿ ಆಕ್ರಮಣ ಮಾಡಿತ್ತು. ಅದರಲ್ಲಿ ಭಾರತವು ಮುಕ್ತಿ ಸಂಘರ್ಷ ವಾಹಿನಿಯನ್ನು ಬೆಂಬಲಿಸಿತ್ತು. ಆನಂತರ ಪಾಕಿಸ್ತಾನದ ೨ ಭಾಗವಾಯಿತು ಮತ್ತು ಬಾಂಗ್ಲಾದೇಶ ಹೊಸ ದೇಶವಾಯಿತು.