ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧ!

  • ಉಚ್ಚ ನ್ಯಾಯಾಲಯದ ಮಹತ್ವದ ನಿರ್ಧಾರ!

  • ‘ಮಂದಿರಗಳು ಪ್ರವಾಸಿ ಸ್ಥಳವಲ್ಲ, ಬದಲಾಗಿ ಧಾರ್ಮಿಕ ಸ್ಥಳವಾಗಿದೆ’, ಎಂದು ಸ್ಪಷ್ಟಪಡಿಸಲಾಗಿದೆ!

  • ಹಿಂದೂಯೇತರ ವ್ಯಕ್ತಿಯು ಮಂದಿರವನ್ನು ಪ್ರವೇಶಿಸುವುದಿದ್ದರೆ, ಅವನಿಗೆ ದೇವತೆಗಳ ಮೇಲೆ ಶ್ರದ್ಧೆಯಿದೆ ಎಂದು ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ.

ಮಧುರೈ (ತಮಿಳುನಾಡು) – ಮದ್ರಾಸ ಉಚ್ಚನ್ಯಾಯಾಲಯದ ಮಧುರೈ ವಿಭಾಗೀಯ ಪೀಠವು ರಾಜ್ಯದ ದಿಂಡಿಗಲ ಜಿಲ್ಲೆಯ ಪಳನಿಯಲ್ಲಿರುವ ಧನಾಯುಧಪಾಣಿ ಸ್ವಾಮಿ ಮಂದಿರ ಸೇರಿದಂತೆ ರಾಜ್ಯದ ಎಲ್ಲಾ ಮಂದಿರಗಳಿಗೆ ಹಿಂದೂಯೇತರರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ‘ದೇವಾಲಯಗಳು ಪ್ರವಾಸಿ ತಾಣಗಳಲ್ಲ, ಧಾರ್ಮಿಕ ಸ್ಥಳಗಳಾಗಿವೆ. ಹಿಂದೂಗಳು ತಮ್ಮ ಧರ್ಮವನ್ನು ನಂಬುವ ಮತ್ತು ಆಚರಿಸುವ ಮೂಲಭೂತ ಅಧಿಕಾರವನ್ನು ಹೊಂದಿದ್ದಾರೆ. ಮಂದಿರಗಳು ಸಂವಿಧಾನದ ಕಲಂ 15 ರ ಅಡಿಯಲ್ಲಿ ಬರುವುದಿಲ್ಲ. ಆದುದರಿಂದ ಯಾವುದೇ ಮಂದಿರದಲ್ಲಿ ಅದು ಐತಿಹಾಸಿಕವೇ ಆಗಿದ್ದರೂ ಹಿಂದೂಗಳಲ್ಲದವರ ಪ್ರವೇಶವನ್ನು ತಡೆದರೆ ತಪ್ಪಾಗುವುದಿಲ್ಲ.’ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಹೇಳಿದೆ. ` ಒಂದು ವೇಳೆ ಹಿಂದೂಯೇತರರಿಗೆ ಮಂದಿರದಲ್ಲಿ ಪ್ರವೇಶಿಸುವುದಿದ್ದರೆ, ಅದಕ್ಕಾಗಿ ಅವರು ಮೊದಲು ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ. ಈ ಒಪ್ಪಿಗೆ ಪತ್ರದಲ್ಲಿ ಅವರು ಆ ದೇವರನ್ನು ನಂಬುತ್ತಾರೆ ಮತ್ತು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸಲು ಸಿದ್ಧರಿರುತ್ತಾರೆ ‘ ಎಂದೂ ನಮೂದಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನ್ಯಾಯಾಲಯವು ರಾಜ್ಯದ ಮಂದಿರಗಳಲ್ಲಿ ‘ಕೋಡಿಮಾರಾಮ ಧ್ವಜಸ್ತಂಬದ ಆಚೆಗಿನ ಮಂದಿರದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ’ ಎಂದು ಫಲಕದ ಮೇಲೆ ಬರೆದು ಹಾಕುವಂತೆ ನಿರ್ದೇಶನ ನೀಡಿದೆ. ಕೋಡಿಮಾರಾಮವು ಮುಖ್ಯ ಪ್ರವೇಶ ದ್ವಾರಕ್ಕೆ ಹೊಂದಿಕೊಂಡಿದ್ದು, ಮತ್ತು ಗರ್ಭಗುಡಿಯ ಮೊದಲು ಬರುತ್ತದೆ. ‘ಧನಾಯುಧಪಾಣಿ ಸ್ವಾಮಿ ಮಂದಿರದಲ್ಲಿ ಕೇವಲ ಹಿಂದೂಗಳಿಗೆ ಪ್ರವೇಶ ನೀಡಬೇಕು’, ಇದಕ್ಕಾಗಿ ಡಿ. ಸೆಂಥಿಲ ಕುಮಾರ ಪಲಾನಿ ಇವರು `ಹಿಲ್ ಟೆಂಪಲ ಡಿವ್ಹೋಟೀಸ ಆರ್ಗನೈಸೇಶನ’ ನ (ಬೆಟ್ಟದ ದೇವಸ್ಥಾನದ ಭಕ್ತರ ಸಂಘಟನೆ’)ಸಂಚಾಲಕರಾಗಿದ್ದಾರೆ.

1.ಕೇವಲ ಧನಾಯುಧಾಪಾಣಿ ಸ್ವಾಮಿ ಮಂದಿರಕ್ಕೆ ಮಾತ್ರ ಈ ಆದೇಶ ಸೀಮಿತವಾಗಿರಿಸಲು ತಮಿಳುನಾಡು ಸರಕಾರ ವಿನಂತಿಸಿತ್ತು; ಆದರೆ ಉಚ್ಚ ನ್ಯಾಯಾಲಯವು ಅವರ ವಿನಂತಿಯನ್ನು ತಿರಸ್ಕರಿಸುತ್ತಾ, ದೊಡ್ಡ ಅಂಶವೊಂದನ್ನು ಎತ್ತಿರುವುದರಿಂದ, ಈ ಆದೇಶವು ರಾಜ್ಯದ ಎಲ್ಲಾ ಮಂದಿರಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಈ ನಿಷೇಧದಿಂದ ವಿವಿಧ ಧರ್ಮಗಳ ಅನುಯಾಯಿಗಳಲ್ಲಿ ಧಾರ್ಮಿಕ ಸಾಮರಸ್ಯ ಮೂಡಬಹುದು ಮತ್ತು ಸಮಾಜದಲ್ಲಿ ಶಾಂತಿಯನ್ನು ಹರಡುತ್ತದೆ.

2. ಮಂದಿರದ ಹೊರಗೆ ಅಂಗಡಿ ನಡೆಸುತ್ತಿರುವ ಓರ್ವ ಅಂಗಡಿಯವನ ಅನುಭವವನ್ನು ಈ ಮನವಿಯಲ್ಲಿ ಮಂಡಿಸಲಾಗಿತ್ತು. ಇದರಲ್ಲಿ ಕೆಲವು ಹಿಂದೂಯೇತರರು ಮಂದಿರದಲ್ಲಿ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದರು. ಅವರು ಇಲ್ಲಿ ಪ್ರವಾಸಕ್ಕಾಗಿ ಬಂದಿದ್ದರು ಮತ್ತು ಅಧಿಕಾರಿಗಳೊಂದಿಗೆ ನಡೆದ ವಾದದ ಬಳಿಕ ಈ ಹಿಂದೂಯೇತರರು ಇದೊಂದು ಪ್ರವಾಸಿ ತಾಣವಾಗಿದೆ ಮತ್ತು ಇಲ್ಲಿ ಎಲ್ಲಿಯೂ ಮಂದಿರದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲವೆಂದು ಬರೆದಿಲ್ಲವೆಂದು ಹೇಳಿದ್ದರು.

ಹಿಂದೂ ಮಂದಿರಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ! – ಉಚ್ಚ ನ್ಯಾಯಾಲಯ

ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ ತಮಿಳುನಾಡು ಸರಕಾರದ ಪರವಾಗಿ ಮಂಡಿಸುವಾಗ ‘ ಮುರುಗನ ದೇವರನ್ನು ಹಿಂದೂಯೇತರರೂ ಪೂಜಿಸುತ್ತಾರೆ. ಮಂದಿರದ ವಿಧಿ ಮತ್ತು ಪರಂಪರೆಯನ್ನು ಅವರು ಪಾಲಿಸುತ್ತಾರೆ. ಜಾತ್ಯಾತೀತ ರಾಜ್ಯವಾಗಿರುವುದರಿಂದ ಸಂವಿಧಾನದ ಅನುಸಾರ ನಾಗರಿಕರ ಅಧಿಕಾರವನ್ನು ರಕ್ಷಿಸುವುದು ಸರಕಾರದ ಮತ್ತು ಮಂದಿರದ ಆಡಳಿತದ ಕರ್ತವ್ಯವಾಗಿದೆ. ದೇವರ ಮೇಲೆ ವಿಶ್ವಾಸ ಇಡುವ ಹಿಂದೂಯೇತರರ ಮೇಲೆ ಪ್ರವೇಶವನ್ನು ನಿಷೇಧಿಸುವುದು ಕೇವಲ ಅವರ ಧಾರ್ಮಿಕ ಭಾವನೆಗಳನ್ನು ನೋಯಿಸುವುದಷ್ಟೇ ಅಲ್ಲ, ಅವರ ಹಕ್ಕಿನ ವಿರುದ್ಧವಾಗಿದೆ’, ಎಂದು ವಾದವನ್ನು ಮಂಡಿಸಿತ್ತು.

ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸುತ್ತಾ, ಯಾರಿಗೆ ಹಿಂದೂ ಧರ್ಮದ ಮೇಲೆ ವಿಶ್ವಾಸವಿಲ್ಲವೋ, ಅಂತಹ ಹಿಂದೂಯೇತರರ ಭಾವನೆಗಳ ವಿಷಯದಲ್ಲಿ ಅಧಿಕಾರಿಗಳು ಚಿಂತೆಯಲ್ಲಿದ್ದಾರೆ; ಆದರೆ ಹಿಂದೂ ಧರ್ಮದವರ ಭಾವನೆಗಳ ಬಗ್ಗೆ ಏನು? ಇತ್ತೀಚೆಗೆ ಅರುಲಮಿಧು ಬೃಹದೇಶ್ವರ ಮಂದಿರದಲ್ಲಿ ಇತರ ಧರ್ಮದ ಜನರ ಒಂದು ಗುಂಪು ಮಂದಿರದ ಪರಿಸರವನ್ನು ಪ್ರವಾಸಿ ತಾಣವೆಂದು ತಿಳಿದಿತ್ತು ಮತ್ತು ಮಂದಿರದ ಪರಿಸರದಲ್ಲಿ ಮಾಂಸಾಹಾರವನ್ನು ಸೇವಿಸಿದ್ದರು. ಮಧುರೈನ ಅರುಲಮಿಧು ಮೀನಾಕ್ಷಿ ಸುಂದರೇಶ್ವರ ಮಂದಿರದ ಗರ್ಭಗೃಹದ ಹತ್ತಿರ ಕೆಲವು ಮುಸಲ್ಮಾನರು ಕುರಾನ ಒಯ್ದಿದ್ದರು ಮತ್ತು ಅಲ್ಲಿ ನಮಾಜಪಠಣ ಮಾಡುವ ಪ್ರಯತ್ನ ಮಾಡಿರುವ ಸುದ್ದಿ ಪ್ರಸಾರವಾಗಿತ್ತು. ಈ ಘಟನೆಯೆಂದರೆ ಹಿಂದೂಗಳಿಗೆ ಸಂವಿಧಾನ ನೀಡಿರುವ ಮೂಲಭೂತ ಅಧಿಕಾರದಲ್ಲಿ ಸಂಪೂರ್ಣವಾಗಿ ಹಸ್ತಕ್ಷೇಪವಾಗಿದೆ. ಹಿಂದೂಗಳು ಅವರ ಧರ್ಮವನ್ನು ಮುಕ್ತವಾಗಿ ಆಚರಿಸಲು ಮತ್ತು ಪ್ರಚಾರ ಮಾಡುವ ಮೂಲಭೂತ ಅಧಿಕಾರವಿದೆ. ಇದರಿಂದ ಹಿಂದೂಗಳ ಮಂದಿರಗಳನ್ನು ಅವರ ಸಂಪ್ರದಾಯದಂತೆ ಪಾವಿತ್ರ್ಯವನ್ನು ರಕ್ಷಿಸುವುದು ಮತ್ತು ಯಾವುದೇ ರೀತಿಯ ಅನೈತಿಕ ಘಟನೆಗಳಿಂದ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದೆ.

‘ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆ ! – ಅರ್ಜಿದಾರ ವಕೀಲ ಟಿ.ಆರ್. ರಮೇಶ

ಈ ಪ್ರಕರಣದ ಅರ್ಜಿದಾರರು ಹಾಗೂ ‘ಹಿಂದೂ ಟೆಂಪಲ್ಸ್ ವರ್ಶಿಪರ್ಸ್ ಸೊಸೈಟಿ’ ಅಧ್ಯಕ್ಷ ವಕೀಲ ಟಿ.ಆರ್. ರಮೇಶ್ ಅವರೊಂದಿಗೆ ‘ಸನಾತನ ಪ್ರಭಾತ’ದ ಪ್ರತಿನಿಧಿ ಸಂವಾದ ನಡೆಸಿದರು. ಈ ವೇಳೆ ರಮೇಶ್ ಮಾತನಾಡಿ, ಕೋರ್ಟ್ ಈ ಆದೇಶ ನೀಡಿದರೂ ತಮಿಳುನಾಡು ಸರ್ಕಾರ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಸರ್ಕಾರ ಅದನ್ನು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಇಡಬಹುದು. ಮತ್ತೊಂದೆಡೆ ಸರ್ಕಾರದ ‘ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ ನ್ಯಾಯಾಲಯದ ತೀರ್ಪುಗಳನ್ನು ಯಾವಾಗಲೂ ಡಾಕೆಟ್‌ನಲ್ಲಿ ಇಡುವುದರಿಂದ ಅದು ಕಾರ್ಯನಿರ್ವಹಿಸುತ್ತದೆಯೇ ಎಂಬ ಪ್ರಶ್ನೆಯೂ ಇದೆ. ಅದೇನೇ ಇರಲಿ, ಮಾನ್ಯ ನ್ಯಾಯಾಲಯ ನಮ್ಮ ವಾದವನ್ನು ಸಮರ್ಥಿಸಿದೆ’ ಎಂದು ಹೇಳಿದರು.