ಹಲ್ದವಾನಿ (ಉತ್ತರಾಖಂಡ)ಯಲ್ಲಿ ಜಿಲ್ಲಾಡಳಿತದಿಂದ ಅನಧಿಕೃತ ಮದರಸಾಗಳ ತೆರವು !

ಮಸೀದಿ ತೆಗೆಯಲು ಆದೇಶ !

ಹಲ್ದವಾನಿ (ಉತ್ತರಖಂಡ) – ಇಲ್ಲಿಯ ಜಿಲ್ಲಾಡಳಿತವು ಒತ್ತುವರಿ ವಿರುದ್ಧ ಕ್ರಮ ಕೈಕೊಳ್ಳುವಾಗ ಬಾಂಭೂಳಪುರಾ ಪೊಲೀಸ್ ಠಾಣೆಯ ಗಡಿಯಲ್ಲಿರುವ ಸರಕಾರಿ ಜಮೀನಿನಲ್ಲಿ ಕಟ್ಟಲಾಗಿದ್ದ ಮದರಸಾವನ್ನು ಕೆಡವಿತು. ಇದಲ್ಲದೇ ಅಲ್ಲಿರುವ ಮಸೀದಿಯನ್ನು ತೆಗೆಯುವಂತೆ ಆದೇಶಿಸಿದೆ. ಪೊಲೀಸ ಬಂದೋಬಸ್ತಿನಲ್ಲಿ ಈ ಕ್ರಮವನ್ನು ಕೈಕೊಳ್ಳಲಾಯಿತು. ಜಿಲ್ಲಾಡಳಿತದ ಹೇಳಿಕೆಯಲ್ಲಿ ಅಬ್ದುಲ ಮಲಿಕ ಹೆಸರಿನ ವ್ಯಕ್ತಿಯು ಸುಮಾರು 1 ಎಕರೆ ಸರಕಾರಿ ಜಮೀನಿನನ್ನು ಒತ್ತುವರಿ ಮಾಡಿದ್ದನು. ಮಸೀದಿ ಕಟ್ಟುವ ಹೆಸರಿನಲ್ಲಿ ಅವನು ಅಲ್ಲಿಯ ಭೂಮಿಯನ್ನು ಮಾರಾಟ ಮಾಡುವ ದಂಧೆಯನ್ನು ಮಾಡುತ್ತಿದ್ದನು.

ಸಮಾಜವಾದಿ ಪಕ್ಷದ ಮುಸಲ್ಮಾನ ಮುಖಂಡರ ವಿರೋಧವನ್ನು ಲೆಕ್ಕಿಸದೇ ಕ್ರಮ !

ಕ್ರಮವನ್ನು ಕೈಕೊಳ್ಳುತ್ತಿರುವಾಗ ಸಮಾಜವಾದಿ ಪಕ್ಷದ ನಾಯಕ ಮತೀನ ಸಿದ್ದಿಕಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟಿಸಲು ಅಲ್ಲಿಗೆ ತಲುಪಿದರು. ಆ ಸಮಯದಲ್ಲಿ ಆಡಳಿತಾಧಿಕಾರಿಗಳೊಂದಿಗೆ ಅವರು ವಾದಕ್ಕಿಳಿದರು. ಮಹಾಪಾಲಿಕೆಯ ಆಯುಕ್ತರು ಮತ್ತು ನಗರ ದಂಡಾಧಿಕಾರಿಯವರು ಅವರ ವಿರೋಧವನ್ನು ಲೆಕ್ಕಿಸದೇ ಕ್ರಮ ಕೈಕೊಂಡರು. ಹಾಗೆಯೇ ಮುಂದಿನ 2 ದಿನಗಳಲ್ಲಿ ಮಸೀದಿಯನ್ನು ತೆಗೆಯುವಂತೆ ಹೇಳಿ ಸಧ್ಯಕ್ಕೆ ನಮಾಜಪಠಣಕ್ಕಾಗಿ ಜಾಗೆಯನ್ನು ಬಿಟ್ಟರು. ಸರಕಾರವು ಜಮೀನನ್ನು ವಶಕ್ಕೆ ಪಡೆದುಕೊಂಡು ಬೇಟಿಯನ್ನು ಹಾಕಿ ಜಮೀನು ಸರಕಾರದ ಮಾಲೀಕತ್ವದ್ದು ಆಗಿದೆಯೆಂದು ಫಲಕವನ್ನು ಹಚ್ಚಲಾಗಿದೆ.

ಇಲ್ಲಿ ಈ ಹಿಂದೆಯೂ ಅತಿಕ್ರಮಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು !

ಕೆಲವು ತಿಂಗಳುಗಳ ಹಿಂದೆ ಜಿಲ್ಲಾಡಳಿತ ಈ ಸ್ಥಳದಲ್ಲಿರುವ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಕೊಂಡಿತ್ತು.ಈಗ ಮತ್ತೊಮ್ಮೆ ಮಸೀದಿ ಮತ್ತು ಮದರಸಾಗಳ ಹೆಸರಿನಡಿಯಲ್ಲಿ ಈ ಭೂಮಿಯ ಮೇಲೆ ಪುನಃ ಅತಿಕ್ರಮಣವಾಗಿತ್ತು. (ಒಮ್ಮೆ ಕ್ರಮ ಕೈಗೊಂಡ ಬಳಿಕ ಅಲ್ಲಿ ಪುನಃ ಅತಿಕ್ರಮಣವಾಗುತ್ತಿರುವಾಗ ಆಡಳಿತ ಏನು ಮಾಡುತ್ತಿತ್ತು? ಒಮ್ಮೆ ಅತಿಕ್ರಮಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಕೊಂಡಿದ್ದರೆ ಮತ್ತು ಜಮೀನಿನ ಸಂರಕ್ಷಣೆಯನ್ನು ಮಾಡಿದ್ದರೆ ಪುನಃ ಅತಿಕ್ರಮವಾಗುತ್ತಿರಲಿಲ್ಲ ಎನ್ನುವುದು ಆಡಳಿತಕ್ಕೆ ಅರ್ಥವಾಗುವುದಿಲ್ಲವೇ? – ಸಂಪಾದಕರು)

ಯಾವುದೇ ಪರಿಸ್ಥಿತಿಯಲ್ಲಿಯೂ ಒತ್ತುವರಿಯನ್ನು ಸಹಿಸುವುದಿಲ್ಲ. ಒತ್ತುವರಿ ಮಾಡಿರುವವರು ಸ್ವತಃ ತಾವಾಗಿಯೇ ಸರಕಾರಿ ಜಮೀನನ್ನು ಬಿಟ್ಟುಕೊಟ್ಟರೆ ಒಳ್ಳೆಯದು, ಇಲ್ಲವಾದರೆ ಆಡಳಿತ ಕಠಿಣ ಕ್ರಮ ಕೈಕೊಳ್ಳುವುದು!- ಜಿಲ್ಲಾಧಿಕಾರಿ ವಂದನಾ ಸಿಂಹ

 

ಸಂಪಾದಕೀಯ ನಿಲುವು

ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.

ಅನಧಿಕೃತ ಕಟ್ಟಡಗಳ ವಿರುದ್ಧ ಕಠಿಣ ಕ್ರಮವನ್ನು ವಿರೋಧಿಸುವ ಕಾನೂನು ಉಲ್ಲಂಘಿಸುವವರನ್ನುಬಂಧಿಸಿ ಜೈಲಿಗೆ ಅಟ್ಟಬೇಕು.!

ಅನಧಿಕೃತ ಕಟ್ಟಡಗಳು ನಿರ್ಮಾಣ ಆಗುವವರೆಗೆ ಆಡಳಿತ ಮಲಗಿರುತ್ತದೆಯೇ?