ಬಲೂಚಿ ಜನರಿಗೆ ಪಾಕಿಸ್ತಾನದಿಂದ ಪ್ರತ್ಯೇಕವಾಗಲು ಬಯಸಿದ್ದಾರೆ ? – ಪಾಕಿಸ್ತಾನದ ಉಸ್ತುವಾರಿ ಪ್ರಧಾನಮಂತ್ರಿ

ಇದೇ ಮೊದಲ ಬಾರಿಗೆ ಬಲೂಚಿ ಜನರ ಆಶಯಗಳ ಕುರಿತು ಪಾಕಿಸ್ತಾನಿ ನಾಯಕ ಮಾತನಾಡಿದ್ದಾರ

ಇಸ್ಲಾಮಾಬಾದ (ಪಾಕಿಸ್ತಾನ) – ಬಲೂಚಿಸ್ತಾನದ ಜನರು ಕೇವಲ ಪಾಕಿಸ್ತಾನದ ಬಗ್ಗೆ ಅಸಮಾಧಾನ ಹೊಂದಿಲ್ಲ, ಅವರು ಪ್ರತ್ಯೇಕ ದೇಶಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಪಾಕಿಸ್ತಾನ ಉಸ್ತುವಾರಿ ಪ್ರಧಾನಮಂತ್ರಿ ಅನ್ವರ ಉಲ್ ಹಕ್ ಕಾಕರ ಇವರು ಹೇಳಿದ್ದಾರೆ. ಯಾವುದೇ ಪಾಕಿಸ್ತಾನದ ನಾಯಕರು ಬಲೂಚಿ ಜನರ ಆಶಯಗಳನ್ನು ವ್ಯಕ್ತಪಡಿಸಿದ್ದು ಇದೇ ಮೊದಲ ಬಾರಿಯಾಗಿದೆ.. ‘ಬಲೂಚಿಸ್ತಾನ್ ಪೋಸ್ಟ್’ ನೀಡಿರುವ ವರದಿಯ ಪ್ರಕಾರ, ಕಾಕರ ಇವರು ಮೇಲಿನ ಹೇಳಿಕೆಯನ್ನು ಒಂದು ಸಂದರ್ಶನದಲ್ಲಿ ನೀಡಿದ್ದಾರೆ. ಕಾಕರ ಇವರು ಈ ಸಂದರ್ಭದಲ್ಲಿ ಬಲೂಚಿ ಜನರು ಹಠಾತ್ತಾಗಿ ಕಣ್ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅವರು ತಮ್ಮ ಮಾತನ್ನು ಮುಂದುವರಿಸಿ, ಈ ಜನರನ್ನು ಹುಡುಕಲು ನಾವು ಪ್ರಯತ್ನಿಸುತ್ತಿದ್ದೇವೆ.. ಬಲೂಚಿಸ್ತಾನದ ಜನರಿಗೆ ಪ್ರತ್ಯೇಕವಾದ ಗುರುತು ಬೇಕಾಗಿದೆ. ಇದೇ ಇಡೀ ಸಮಸ್ಯೆಯ ಮೂಲವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದೇ ರೀತಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೂ ಭಾರತದ ಭಾಗವಾಗಲು ಬಯಸುತ್ತಿದ್ದಾರೆ. ಅರ್ಥಾತ್. ಜಿಹಾದಿ ಮನಃಸ್ಥಿತಿಯ ಪಾಕಿಸ್ತಾನಿ ನಾಯಕರು ಎಂದಿಗೂ ಇಂತಹ ಹೇಳಿಕೆಗಳನ್ನು ನೀಡುವುದಿಲ್ಲ. ಭಾರತವು ಈಗ ಪಾಕಿಸ್ಥಾನ ಾಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ಮಿಲಿಟರಿ ಕ್ರಮವನ್ನು ಕೈಕೊಳ್ಳಬೇಕಾಗುವುದು ಎನ್ನುವುದೂ ಅಷ್ಟೇ ಸತ್ಯವಾಗಿದೆ