ಭಾರತೀಯರಿಗಾಗಿ ಅಸುರಕ್ಷಿತವಾಗುತ್ತಿರುವ ಅಮೆರಿಕಾ
ಅಟ್ಲಾಂಟಾ (ಅಮೇರಿಕಾ) – ಅಮೇರಿಕಾದಲ್ಲಿನ ಜಾರ್ಜಿಯಾ ರಾಜ್ಯದಲ್ಲಿನ ವಿವೇಕ ಸೈನಿ ಎಂಬ ೨೫ ವರ್ಷದ ಭಾರತೀಯ ವಿದ್ಯಾರ್ಥಿಯ ಕೊಲೆಯಾಗಿದೆ. ‘ಫಾಕ್ಸ್ ನ್ಯೂಸ್’ ನೀಡಿರುವ ಮಾಹಿತಿಯ ಪ್ರಕಾರ ವಿವೇಕನು ವಸತಿ ಇಲ್ಲದಿರುವ ವ್ಯಕ್ತಿಗೆ ಸ್ಥಳ ನೀಡಿದ್ದನು. ಕಾಲ ಕಳೆದಂತೆ ವಿವೇಕ ಸೈನಿ ಅವನಿಗೆ ಹೋಗಲು ಹೇಳಿದ್ದರಿಂದ ಮನಸ್ಸಿನಲ್ಲಿ ಸಿಟ್ಟು ಇಟ್ಟುಕೊಂಡು ಆ ವ್ಯಕ್ತಿ ವಿವೇಕಾನ ತಲೆಯ ಮೇಲೆ ಸುತ್ತಿಗೆಯಿಂದ ೫೦ ಏಟು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆ ಕೊಲೆಗಾರನ ಹೆಸರು ಜ್ಯುಲಿಯನ್ ಫಾಕನರ್ ಎಂದು ಆಗಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ.
Vivek Saini, an Indian student was hammered to death by at least 50 blows by a homeless man in #America
👉 #UnitedStates becoming unsafe for Indians.#IndianOrigin #America #India #Georgiapic.twitter.com/BMPqowletS
— Sanatan Prabhat (@SanatanPrabhat) January 29, 2024
ವಿವೇಕ ಸೈನಿ ಒಂದು ‘ಫುಡ್ ಮಾರ್ಟ್’ ನಲ್ಲಿ ಕೆಲಸ ಮಾಡುತ್ತಿದ್ದನು. ಜ್ಯುಲಿಯನ್ ಇವನು ಈ ಅಂಗಡಿಯ ಹೊರಗೆ ಬರುತ್ತಿದ್ದನು. ವಿವೇಕ ಮತ್ತು ಅಂಗಡಿಯಲ್ಲಿನ ಇತರ ಕಾರ್ಮಿಕರು ಜ್ಯುಲಿಯನಿಗೆ ಇರಲು ಸ್ಥಳ ನೀಡಿದ್ದರು. ಜನವರಿ ೧೬ ರಂದು ವಿವೇಕನು ಅವನಿಗೆ ಈ ಸ್ಥಳ ಬಿಡುವಂತೆ ಹೇಳಿದ ನಂತರ ಸಿಟ್ಟಿನಲ್ಲಿ ವಿವೇಕನ ಹತ್ಯೆ ಮಾಡಿದನು.