ಉತ್ತರಪ್ರದೇಶ ಪೊಲೀಸರು ಇಸ್ರೇಲ್ ನಿಂದ ೧೦ ಡ್ರೋನ್ ವಿರೋಧಿ ವ್ಯವಸ್ಥೆ ಖರೀದಿಸಲಿದೆ !
ಅಯೋಧ್ಯೆ (ಉತ್ತರಪ್ರದೇಶ) – ಶ್ರೀರಾಮಮಂದಿರದ ಸುರಕ್ಷಗಾಗಿ ಡ್ರೋನ್ ವಿರೋಧಿ ವ್ಯವಸ್ಥೆ ಬಳಸಲಾಗುವುದು. ಉತ್ತರಪ್ರದೇಶ ಪೊಲೀಸರು ಇಸ್ರೇಲ್ ನಿಂದ ೧೦ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಖರೀದಿಸುವರು. ಅದರ ಖರೀದಿ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ, ಎಂದು ಮಾಹಿತಿ ನೀಡಿದರು. ಅಯೋಧ್ಯೆ ಸಹಿತ ಮಥುರಾ, ವಾರಣಾಸಿ, ಲಕ್ಷ್ಮಣಪುರಿ ಇಂತಹ ಅತಿ ಸೂಕ್ಷ್ಮ ಪ್ರದೇಶಗಳಿಗೆ ವ್ಯವಸ್ಥೆ ಅಳವಡಿಸುವರು.
ಶ್ರೀರಾಮ ಮಂದಿರದ ಉದ್ಘಾಟನೆಯ ದಿನದಂದು ಡ್ರೋನ್ ವಿರೋಧಿ ವ್ಯವಸ್ಥೆಯ ಬಳಕೆ ಮಾಡಿದ್ದರು. ಉತ್ತರಪ್ರದೇಶ ಪೊಲೀಸರು ಈ ವ್ಯವಸ್ಥೆ ರಾಷ್ಟ್ರೀಯ ಸುರಕ್ಷಾ ದಳ ಮತ್ತು ವಿಶೇಷ ರಕ್ಷಣಾ ಗುಂಪು ಇವರಿಂದ ತಾತ್ಕಾಲಿಕ ಬಳಕೆಗಾಗಿ ಪಡೆದಿದ್ದರು; ಆದರೆ ಈಗ ಉತ್ತರ ಪ್ರದೇಶ ಪೊಲೀಸರು ಈ ವ್ಯವಸ್ಥೆಯನ್ನು ಖರೀದಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಅನೇಕ ಪರೀಕ್ಷೆಗಳ ನಂತರ ಇಸ್ರೇಲಿನ ಡ್ರೋನ್ ವಿರೋಧಿ ವ್ಯವಸ್ಥೆ ಖರೀದಿಸುವುದಕ್ಕೆ ಒಪ್ಪಂದ ಮಾಡಿದ್ದಾರೆ.
ಡ್ರೋನ್ ವಿರೋಧಿ ವ್ಯವಸ್ಥೆ ಹೇಗೆ ಇರುವುದು ?
ಡ್ರೋನ್ ವಿರೋಧಿ ವ್ಯವಸ್ಥೆ ೩ ರಿಂದ ೫ ಕಿಲೋಮೀಟರ್ ಅಂತರದಲ್ಲಿನ ಯಾವುದೇ ಡ್ರೋನ್ ಕ್ಷಣದಲ್ಲಿ ನಾಶ ಮಾಡಬಹುದು. ಈ ವ್ಯವಸ್ಥೆಯಲ್ಲಿ ಯಾವುದೇ ಡ್ರೋನ್ಅನ್ನು ಗುರುತಿಸುವ ಕ್ಷಮತೆ ಇದೆ. ಇದು ಲೇಸರ್ ವ್ಯವಸ್ಥೆ ಆಗಿರುವುದರಿಂದ ಡ್ರೋನ್ ಹುಡುಕಿ ನಾಶ ಮಾಡಬಹುದು. ಆದ್ದರಿಂದ ಭದ್ರತಾ ವ್ಯವಸ್ಥೆಗೆ ಶತ್ರುಗಳ ಡ್ರೋನ್ ಮಾಹಿತಿ ಯೋಗ್ಯ ಸಮಯದಲ್ಲಿ ದೊರೆಯುವುದು ಮತ್ತು ಅದು ಯೋಗ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಅದು ಶತ್ರುಗಳ ಡ್ರೋನ್ ಮೇಲೆ ಹಿಡಿತ ಸಾಧಿಸುವ ಕ್ಷಮತೆ ಕೂಡ ಈ ವ್ಯವಸ್ಥೆಯಲ್ಲಿ ಇದೆ. ಇಷ್ಟೇ ಅಲ್ಲದೆ ‘ಸ್ನೈಪರ್’ ಅಳವಡಿಸುವರು. ಅದು ಯಾವುದೇ ಡ್ರೋನ್‌ಅನ್ನು ಗುರಿ ಮಾಡಬಹುದು ಮತ್ತು ನಾಶ ಮಾಡಬಹುದು. ಸ್ನೈಪರ್ ಎಂದರೆ ಪ್ರಶಿಕ್ಷಿತ ಸೈನಿಕ ಅಥವಾ ಪೊಲೀಸ್ ಅಧಿಕಾರಿ. ಅವರು ದೂರದಿಂದಲೇ ಅತ್ಯಂತ ನಿಖರವಾಗಿ ಬಂದುಕಿನ ಗುರಿ ಸಾಧಿಸಬಹುದು.