‘ಹಿಂದೂಗಳ ದೇವರುಗಳ ಮೇಲೆ ನಂಬಿಕೆ ಇಡಬಾರದು‘, ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸಿದ ಮುಖ್ಯೋಪಾಧ್ಯಾಪಕನ ಬಂಧನ !

ಬಿಲಾಸಪುರ (ಛತ್ತೀಸಗಢ) ಇಲ್ಲಿಯ ಸರಕಾರಿ ಶಾಲೆಯಲ್ಲಿನ ಘಟನೆ !

ಬಿಲಾಸಪುರ (ಛತ್ತೀಸಗಢ) – ಇಲ್ಲಿನ ಮೋಹತರೈ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರತನಲಾಲ ಸರೋವರ ಇವರು ಮಕ್ಕಳಿಗೆ ‘ಹಿಂದೂಗಳ ದೇವರ ಮೇಲೆ ನಂಬಿಕೆ ಇಡುವುದಿಲ್ಲ ಹಾಗೂ ಅವರ ಪೂಜೆ ಮಾಡುವುದಿಲ್ಲ‘ ಎಂದು ಪ್ರತಿಜ್ಞೆ ಮಾಡುವಂತೆ ಹೇಳುತ್ತಿದ್ದರು. ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಜಿಲ್ಲಾ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದ ನಂತರ ಅವರು ಮುಖ್ಯೋಪಾಧ್ಯಾಯ ಸರೋವರ ಅವರನ್ನು ಅಮಾನತುಗೊಳಿಸಿದರು. ಹಿಂದೂ ಸಂಘಟನೆಗಳು ಪೋಲೀಸರಿಗೆ ದೂರನ್ನು ನೀಡಿದ ನಂತರ ಪೋಲೀಸರು ಮುಖ್ಯೋಪಾಧ್ಯಾಯ ಸರೋವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು ಸರೊವರದ ಪುತ್ತಳಿ ದಹಿಸಿ ಪ್ರತಿಭಟನೆ ನಡೆಸಿದ್ದರು.

ಪ್ರಸಾರವಾದ ವೀಡಿಯೋದಲ್ಲಿ ಮುಖ್ಯೋಪಾಧ್ಯಾಯ ಮಕ್ಕಳಿಗೆ ‘ನಾನು ಬ್ರಹ್ಮ, ವಿಷ್ಣು ಇವರನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ಅವರ ಪೂಜೆ ಮಾಡುವುದಿಲ್ಲ. ಹಿಂದೂ ಧರ್ಮದ ಯಾವುದೇ ದೇವರ ಮೇಲೆ ನಂಬಿಕೆ ಇಡುವುದಿಲ್ಲ‘ ಹೀಗೆ ಪ್ರತಿಜ್ಞೆ ಮಾಡಿಸುತ್ತಿರುವುದು ಅದರಲ್ಲಿ ಕಂಡುಬಂದಿದೆ.

ಸಂಪಾದಕರ ನಿಲುವು

* ಇಂತಹವರಿಗೆ ಗಲ್ಲುಶಿಕ್ಷೆ ನೀಡುವ ಕಾನೂನು ಜಾರಿಗೆ ಬಂದನಂತರವೇ ದೇಶದಲ್ಲಿ ಹಿಂದೂ ದೇವತೆಗಳ ಅವಮಾನ ಮಾಡುವವರನ್ನು ಹದ್ದುಬಸ್ತಿನಲ್ಲಿಡುವಂತೆ ಸರಕಾರ ಕಾನೂನನ್ನು ಮಾಡಲು ಹಿಂದೂಗಳು ಒತ್ತಡ ಹೇರುವುದು ಅವಶ್ಯಕವಾಗಿದೆ !