ಭಾರತದ ಜೊತೆಗಿನ ಪರಸ್ಪರ ವಿನಿಮಯದ ಎಲ್ಲಾ ಕಾರ್ಯಕ್ರಮ ರದ್ದುಪಡಿಸಿದ ಮಾಲದಿವ ಸರಕಾರ !

ಮಾಲೆ (ಮಾಲದಿವ) – ಚೀನಾವನ್ನು ಸಮರ್ಥಿಸುವ ಮಾಲದಿವ ಸರಕಾರವು ಭಾರತದ ಜೊತೆಗಿನ ಎಲ್ಲಾ ಪರಸ್ಪರ ವಿನಿಮಯ (ಎಕ್ಸ್ಚೇಂಜ್) ಕಾರ್ಯಕ್ರಮ ರದ್ದು ಪಡಿಸುವ ನಿರ್ಣಯ ತೆಗೆದುಕೊಂಡಿದೆ. ಭಾರತ ಮತ್ತು ಮಾಲದಿವ ಇವರಲ್ಲಿ ಸೈನ್ಯ, ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಮತ್ತು ಸಮುದ್ರ ಸಂಶೋಧನೆ ಇದಕ್ಕೆ ಸಂಬಂಧಪಟ್ಟಂತೆ ಪರಸ್ಪರ ವಿನಿಮಯ ಕಾರ್ಯಕ್ರಮ ನಡೆಸುತ್ತಿತ್ತು. ರಾಷ್ಟ್ರಪತಿ ಮೊಯಿಜ್ಜು ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನಪಿಂಗ ಇವರ ಜೊತೆಗೆ ೧೦ ಕಿಂತಲೂ ಹೆಚ್ಚಿನ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.

ತತ್ಕಾಲಿನ ಮಾಲದಿವದ ಸಚಿವರು ಮತ್ತು ನಾಯಕರು ಪ್ರಧಾನಮಂತ್ರಿ ಮೋದಿ ಇವರ ಕುರಿತು ಅಸಭ್ಯವಾಗಿ ಟೀಕಿಸಿದುದರಿಂದ ಭಾರತೀಯ ಪ್ರಜೆಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು . ಇದರ ಪರಿಣಾಮವಾಗಿ ಮಾಲದಿವಕ್ಕೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡ ೫೬ ರಷ್ಟು ಕುಸಿತವಾಗಿದೆ. ಜನವರಿ ೨೦೨೩ ರಲ್ಲಿ ೧೮ ಸಾವಿರದ ೬೧೨ ಪ್ರವಾಸಿಗರು ಮಾಲದಿವಗೆ ಪ್ರವಾಸಕ್ಕೆ ಹೋಗಿದ್ದರು . ಜನವರಿ ೨೦೨೪ ರಲ್ಲಿ ಇಲ್ಲಿಯವರೆಗೆ ಇದೇ ಸಂಖ್ಯೆ ಕೇವಲ ೮ ಸಾವಿರದ ೧೧೦ ಆಗಿದೆ.

ಸಂಪಾದಕೀಯ ನಿಲುವು

ಭಾರತದ್ವೇಷಿ ಚೀನಾದ ಪರವಾಗಿನಿಂತು ರಾಷ್ಟ್ರಪತಿ ಮಹಮ್ಮದ್ ಮೊಯಿಜ್ಜು ಇವರು ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇದರಿಂದ ಮಾಲದಿವದ ಆತ್ಮಹತ್ಯೆಯೆ ಆಗಲಿದೆ, ಎಂಬುದನ್ನು ಮುಂಬರುವ ಕಾಲವೇ ಅವರಿಗೆ ತೋರಿಸಿಕೊಡುವುದರಲ್ಲಿ ಅನುಮಾನವಿಲ್ಲ.