ವ್ಯಾಟಿಕನ್ ಸಿಟಿ – ‘ಪೋಪ್ ರು ಸಾರಾಯಿಯ ನಶೆಯಲ್ಲಿ ಮಾತನಾಡುತ್ತಿದ್ದಾರೆ ಎಂಬ ನಿಮಗೆ ಆಭಾಸ ಆಗುತ್ತಿರಬಹುದು .ವಾಯಿನ್, ಭೂಮಿ, ಕೃಷಿ ಕೌಶಲ್ಯ ಮತ್ತು ವ್ಯವಸಾಯ ಕೌಶಲ್ಯ ಇದು ಭಗವಂತನು ನಮಗೆ ನೀಡಿರುವ ಕೊಡುಗೆ ಆಗಿದೆ. ಸೃಷ್ಟಿಕರ್ತನು ಅದನ್ನು ನಮಗೆ ನೀಡಿದ್ದಾನೆ; ಏಕೆಂದರೆ ನಾವು ಅವುಗಳಿಗೆ ಸಂವೇದನಾಶೀಲತೆಯಿಂದ ಮತ್ತು ಪ್ರಾಮಾಣಿಕವಾಗಿ ನಮ್ಮ ಆನಂದದ ನಿಜವಾದ ಮೂಲವನ್ನಾಗಿಸುತ್ತೇವೆ ಎಂದು ಕ್ರೈಸ್ತರ ಸರ್ವೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಹೇಳಿಕೆ ನೀಡಿದ್ದಾರೆ. ಇದರ ಮೂಲಕ ಅವರು ಸಾರಾಯಿ ಇದು ಭಗವಂತ ನೀಡಿರುವ ಕೊಡುಗೆ ಆಗಿದೆ ಎಂದೇ ಹೇಳಿದ್ದಾರೆ. ಅವರು ವೇರೊನಾ ನಗರದ ಬಿಷಪ್ (ಹಿರಿಯ ಪಾದ್ರಿ) ಡೊಮೇನಿಕೊ ಪೊಂಪಿಲಿ ಇವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
೧. ಪೋಪ್ ಫ್ರಾನ್ಸಿ ಇವರು ೨೦೧೬ ರಲ್ಲಿ ಕೂಡ ಸಾರಾಯಿ ಸಮರ್ಥನೆಯ ಹೇಳಿಕೆ ನೀಡಿದ್ದರು. ಅವರು ಯಾರದಾದರೂ ವಿವಾಹದಲ್ಲಿ ಸಾರಾಯಿ ಇಲ್ಲ ಎಂದರೆ ತಮಗೆ ನಾಚಿಕೆ ಅನಿಸುತ್ತದೆ, ಚಹಾ ಕುಡಿದು ವಿವಾಹ ಸಮಾರಂಭ ಆಚರಿಸಿದ ಹಾಗೆ ಅನಿಸುತ್ತದೆ ಎಂದು ಹೇಳಿದ್ದರು.
೨. ಪೋಪ್ ಫ್ರಾನ್ಸಿಸ್ ಇವರು ಈಗ ಯಾವ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರೋ, ಆ ಸಮಯದಲ್ಲಿ ಇಟಲಿಯ ಅನೇಕ ವಾಯಿನ್ ಉತ್ಪಾದಕರು ಅಲ್ಲಿ ಉಪಸ್ಥಿತರಿದ್ದರು. ಪ್ರತಿವರ್ಷ ಏಪ್ರಿಲ್ ನಲ್ಲಿ ವೇರೋನಾ ಇಲ್ಲಿಯ ವಾಯಿನ್ ಸ್ಪರ್ಧೆಯ ಮೊದಲು ವ್ಯಾಟಿಕನ್ ಸಿಟಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಟಲಿ ಇದು ಜಗತ್ತಿನಲ್ಲಿ ವಾಯಿನ್ ಉತ್ಪಾದನೆಯ ಎರಡನೆಯ ಕ್ರಮಾಂಕದ ದೇಶವಾಗಿದೆ . ಕಳೆದ ಕೆಲವು ವರ್ಷಗಳಿಂದ ಯುರೋಪದಲ್ಲಿನ ಸಾರಾಯಿ ಬಾಟಲುಗಳ ಮೇಲೆ ಆರೋಗ್ಯದ ಸಂದರ್ಭದಲ್ಲಿ ಎಚ್ಚರಿಕೆ ನೀಡುವಂತೆ ಯುರೋಪಿಯನ್ ಸಂಘದಿಂದ ಬೇಡಿಕೆ ಸಲ್ಲಿಸಲಾಗಿತ್ತು ; ಆದರೆ ಇಟಲಿಯಲ್ಲಿನ ವಾಯಿನ್ ಉತ್ಪಾದಕರು ಇದನ್ನು ವಿರೋಧಿಸಿದ್ದರು. ಈ ವಾಯಿನ್ ಉತ್ಪಾದಕರು ಪೋಪ್ ಫ್ರಾನ್ಸಿಸ್ ಇವರ ಈ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ಸಂಪಾದಕೀಯ ನಿಲುವುಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರಿಂದ ಮತ್ತೊಮ್ಮೆ ಸಾರಾಯಿ ಸಮರ್ಥನೆ ! |