‘ಛತ್ರಪತಿ ಸಂಭಾಜಿ’ ಚಲನಚಿತ್ರಕ್ಕೆ ಇದುವರೆಗೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿಲ್ಲ!

ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ಔರಂಗಜೇಬನು ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಿರುವ ಪುರಾವೆಯನ್ನು ಹಾಜರು ಪಡಿಸುವಂತೆ ಸೆನ್ಸಾರ್ ಮಂಡಳಿಯ ಅಧಿಕಾರಿ ಸೈಯದ್ ರಬಿ ಹಶ್ಮಿ ಇವರು ಹೇಳಿದ್ದಾರೆಂದು ನಿರ್ಮಾಪಕರ ಆರೋಪ.

ಮುಂಬಯಿ – ಕಳೆದ 8 ವರ್ಷಗಳಿಂದ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿರುವ ‘ಛತ್ರಪತಿ ಸಂಭಾಜಿ’ ಚಲನಚಿತ್ರವು ಕೇಂದ್ರೀಯ ಚಲನಚಿತ್ರ ಪರಿಶೀಲನಾ ಮಂಡಳಿಯಿಂದ (ಸೆನ್ಸಾರ್ ಮಂಡಳಿ) ಪ್ರಮಾಣಪತ್ರ ಸಿಗದ ಕಾರಣ ಜನವರಿ 26, 2024 ರಂದು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಚಲನ ಚಿತ್ರದ ನಿರ್ಮಾಪಕ-ನಿರ್ದೇಶಕ ರಾಕೇಶ್ ಸುಬೇಸಿಂಗ್ ದುಲಗಜ ಅವರು ಇಲ್ಲಿ ಆಯೋಜಿಸಿರುವ ಪತ್ರಿಕಾಗೋಷ್ಠಿಯಲ್ಲಿ, ಸೆನ್ಸಾರ್ ಮಂಡಳಿಯ ಮುಂಬಯಿ ಕಚೇರಿಯ ಹೊಸದಾಗಿ ನೇಮಕಗೊಂಡ ಪ್ರಾದೇಶಿಕ ಅಧಿಕಾರಿ ಸೈಯದ್ ರಬಿ ಹಶ್ಮಿ ಅವರು ಔರಂಗಜೇಬನು ಛತ್ರಪತಿ ಸಂಭಾಜಿಯ ಮೇಲೆ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಔರಂಗಜೇಬ್ ನಿಜವಾಗಿಯೂ ಒತ್ತಡ ಹೇರಿದ್ದನೇ?ಎನ್ನುವ ವಿಷಯದ ಪುರಾವೆಯನ್ನು ಕೋರಿದ್ದರು. ಈ ವಿಷಯದಲ್ಲಿ ಇತಿಹಾಸಕಾರರಿಂದ ಪಡೆದ ಸಾಕ್ಷ್ಯಗಳನ್ನು ಒದಗಿಸಿದ ನಂತರವೂ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಿರುವುದಿಲ್ಲ. ಸೆನ್ಸಾರ ಮಂಡಳಿಗೆ ಚಲನಚಿತ್ರವನ್ನು ತೋರಿಸಿದ ಬಳಿಕವೂ ಅವರು ‘ನಿಗದಿತ ಅವಧಿಯಲ್ಲಿ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಲಾಗುವುದು’ ಎಂದು ಹೇಳಿದ್ದರು. ದುಲಗಜ ಇವರ ಆರೋಪಕ್ಕೆ ಸಂಬಂಧಿಸಿದಂತೆ ಸೈಯದ್ ರಬಿ ಹಾಶ್ಮಿ ಇವರಿಂದ ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

1. ದುಲಗಜ ಮಾತನಾಡಿ, ಜನವರಿ 12, 2024 ರಂದು ಸೆನ್ಸಾರ್ ಮಂಡಳಿಯು ಚಿತ್ರವನ್ನು ನೋಡಿದ ನಂತರ ನಿಮಗೆ ಪ್ರಮಾಣಪತ್ರವನ್ನು. ಚಲನಚಿತ್ರದಲ್ಲಿ ಏನೇನು ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಇ- ಮೇಲ್ ಮೂಲಕ ನೀಡಲಾಗುವುದು ಎಂದು ಹೇಳಿದ್ದರು.

2. ಸೆನ್ಸಾರ್ ಮಂಡಳಿಯಿಂದ ಈ ಭರವಸೆ ಸಿಗುತ್ತಲೇ, ದುಲಗಜ ಇವರು ‘ಛತ್ರಪತಿ ಸಂಭಾಜಿ’ ಚಲನಚಿತ್ರ ಜನವರಿ 26 ರಂದು ಪ್ರದರ್ಶಿಸಲು ದಿನಾಂಕವನ್ನು ಅಂತಿಮಗೊಳಿಸಿದರು. ಅವರು ಮಾತನಾಡಿ, ಯಾವುದೇ ಸಂದರ್ಭದಲ್ಲೂ ಜನವರಿ 25ರೊಳಗೆ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುತ್ತೇವೆ ಎಂದು ಸೆನ್ಸಾರ ಬೋರ್ಡನವರು ಭರವಸೆ ನೀಡಿದ್ದರು. ಚಲನಚಿತ್ರ ಪ್ರದರ್ಶನದ ದಿನಾಂಕವನ್ನು ಅಂತಿಮಗೊಳಿಸಿದ ನಂತರ, ನಾವು ಸೆನ್ಸಾರ್ ಮಂಡಳಿ ಕಚೇರಿಗೆ ಭೇಟಿ ನೀಡುತ್ತಲೇ ಇದ್ದೆವು. ಆದರೆ ಯಾವ ಅಧಿಕಾರಿಯೂ ಸಿಗಲಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

* ಕೇಂದ್ರ ಚಲನಚಿತ್ರ ಪರಿಶೀಲನಾ ಮಂಡಳಿಯು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವುದರಿಂದ ಸರಕಾರವು ಈ ವಿಷಯದತ್ತ ಗಮನ ಹರಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.